ರಾಯರ ಪವಾಡದಿಂದ ಹಳ್ಳಿಹುಡುಗನಾಗಿದ್ದ ನಾನಿಂದು ನವರಸನಾಯಕನಾದೆ: Jaggesh

Suvarna News   | Asianet News
Published : Feb 19, 2022, 07:18 PM IST
ರಾಯರ ಪವಾಡದಿಂದ ಹಳ್ಳಿಹುಡುಗನಾಗಿದ್ದ ನಾನಿಂದು ನವರಸನಾಯಕನಾದೆ: Jaggesh

ಸಾರಾಂಶ

ಸ್ಯಾಂಡಲ್‌ವುಡ್‌ನ ನವರಸ ನಾಯಕ ಜಗ್ಗೇಶ್ ತಮ್ಮ ನಟನೆಯ 'ತೋತಾಪುರಿ' ಚಿತ್ರದ ಬಿಡುಗಡೆಗಾಗಿ ತಯಾರಿ ನಡೆಸುತ್ತಿದ್ದಾರೆ. ಮಾತ್ರವಲ್ಲದೇ ಅವರ ಅಭಿನಯದ 'ರಾಘವೇಂದ್ರ ಸ್ಟೋರ್ಸ್' ಚಿತ್ರೀಕರಣದಲ್ಲಿ ತೊಡಗಿದ್ದು, ಮೂರು ದಿನದ ಬಿಡುವು ಸಿಕ್ಕಿದೆ.  

ಸ್ಯಾಂಡಲ್‌ವುಡ್‌ನ ನವರಸ ನಾಯಕ ಜಗ್ಗೇಶ್ (Jaggesh) ತಮ್ಮ ನಟನೆಯ 'ತೋತಾಪುರಿ' (Totapuri) ಚಿತ್ರದ ಬಿಡುಗಡೆಗಾಗಿ ತಯಾರಿ ನಡೆಸುತ್ತಿದ್ದಾರೆ. ಮಾತ್ರವಲ್ಲದೇ ಅವರ ಅಭಿನಯದ 'ರಾಘವೇಂದ್ರ ಸ್ಟೋರ್ಸ್' (Raghavendra Stores) ಚಿತ್ರೀಕರಣದಲ್ಲಿ ತೊಡಗಿದ್ದು, ಮೂರು ದಿನದ ಬಿಡುವು ಸಿಕ್ಕಿದೆ. ಹೀಗಾಗಿ ಜಗ್ಗೇಶ್ ಮಂತ್ರಾಲಯದಲ್ಲಿರುವ (Mantralayam) ಶ್ರೀ ಗುರು ರಾಘವೇಂದ್ರ ಸ್ವಾಮಿ (Sri Raghavendra Swamy) ಅವರ ದರ್ಶನ ಪಡೆಯಲು ತೆರಳಿದ್ದಾರೆ. ಈ ನಡುವೆ ಜಗ್ಗೇಶ್ ಮಂತ್ರಾಲಯದಲ್ಲಿರುವ ಹುಬ್ಬಳ್ಳಿ ಧರ್ಮ ಛತ್ರಕ್ಕೆ ಭೇಟಿ ನೀಡಿದ್ದು, ಅವರ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ (Instagram) ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ಬಹಳ ವರ್ಷದ ನಂತರ ನಾನು ಮಂತ್ರಾಲಯದಲ್ಲಿ ಉಳಿಯುತ್ತಿದ್ದ ಹುಬ್ಬಳ್ಳಿ ಧರ್ಮ ಛತ್ರಕ್ಕೆ ಭೇಟಿಕೊಟ್ಟೆ, 1980/81ರಲ್ಲಿ ಸಿನಿಮಾ ರಂಗದಲ್ಲಿ ನನಗೆ ಅವಕಾಶ ಸಿಗುತ್ತಿರಲಿಲ್ಲ. ಒಂದು ದಿನ ಛಾಯಾಗ್ರಹಕ ಹಾಗು ಗುರುಗಳು ಸುಂದರನಾಥ ಸುವರ್ಣ ಅಂಬರೀಶರವರ ಚಿತ್ರ 'ಗಜೇಂದ್ರ' ಅವಕಾಶಕ್ಕಾಗಿ ಸಹನಿರ್ದೇಶಕ ಡಿ.ಬಾಬು ಅವರಿಗೆ ಕೇಳಿಕೊಂಡರು ಆದರೆ ನನ್ನ ದೌರ್ಭಾಗ್ಯ ಅವಕಾಶ ಸಿಗಲಿಲ್ಲ. ನೊಂದು ನಡೆದು ಬರುವಾಗ ಕೆಂಚಾಂಭ ಲಾಡ್ಜ್ ಬಳಿ ಒಬ್ಬ ಜೋತಿಷಿ ಕಂಡು ಕೇಳಿದಾಗ ನಿನಗೆ ಈ ಪ್ರಪಂಚದಲ್ಲಿ ಸಹಾಯಮಾಡೋದು ಒಬ್ಬರೆ ಅದು ರಾಯರು ಎಂದರು. ಮನೆಗೆ ಬಂದಾಗ ಅಮ್ಮ ತುಳಸಿಕಟ್ಟೆ ಬಳಿ ಕೂತಿದ್ದವಳು ನನ್ನ ಕಂಡು ಲೇ ಮಗನೆ ನಿನಗೆ ಒಳ್ಳೆಯದಾಗಬೇಕು ಎಂದರೆ ರಾಯರ ಬಳಿ ಹೋಗು ಎಂದು ತನ್ನ ಎಲೆ ಅಡಿಕೆ ಕಡ್ಡಿ ಪುಡಿಗಾಗಿ ಕೂಡಿಟ್ಟ ಹಣ 500ರೂ ನನಗೆ ಕೊಟ್ಟಳು ಆಶ್ಚರ್ಯವಾಯಿತು.

ಬದುಕಿದರೆ ರಾಜನಂತೆ ಬದುಕು ಸತ್ತಮೇಲೆ ದೇವರಾಗು: ಕುವೆಂಪು ಅವರನ್ನು ನೆನೆಪು ಮಾಡಿಕೊಂಡ Jaggesh

ಮರುಚಿಂತಿಸದೆ ಮಂತ್ರಾಲಯಕ್ಕೆ ಹೊರಟು ಇರಲು ಈ ಜಾಗ ಆಯ್ಕೆ ಮಾಡಿಕೊಂಡೆ. ಆಗ ದಿನಕ್ಕೆ 25ಪೈಸೆ. 3ತಿಂಗಳು ಇಲ್ಲಿ ಉಳಿದು ರಾಯರ ಸೇವೆ ಮಾಡಿ ಮನೆಗೆ ಬಂದ ತಕ್ಷಣ ಕೆವಿ.ಜಯರಾಮ್ ಅವರ 'ಶ್ವೇತ ಗುಲಾಬಿ' ಚಿತ್ರದಲ್ಲಿ ಮುಖ್ಯ ಖಳನಟನಾಗಿ ಅವಕಾಶ ಸಿಕ್ಕಿತು ಅಲ್ಲಿಂದ ನನ್ನ ಬದುಕಲ್ಲಿ ನಂಬಲಾಗದ ರಾಯರ ಪವಾಡ ನಡೆದು ಸಾಮಾನ್ಯ ಹಳ್ಳಿಹುಡುಗ ನವರಸನಾಯಕನಾದೆ.  ಮುಂದೆ ನಾನು ಪರಿಮಳನ ಮದುವೆಯಾಗಿ ಅವಳನ್ನು ಕರೆತಂದು ಇಲ್ಲಿ 1ತಿಂಗಳು ವಾಸಮಾಡಿದೆ. ಇದೆ ಜಾಗದಲ್ಲಿ ಒಬ್ಬ ಸಂತ ಸಿಕ್ಕು ಪರಿಮಳನಿಗೆ ನಿನ್ನ ಗಂಡ ಮುಂದೆ ಬಹಳ ದೊಡ್ಡ ಸಾಧಕನಾಗುತ್ತಾನೆ ಎಂದಾಗ ಜೋರಾಗಿ ನಕ್ಕುಬಿಟ್ಟಳು ಅಂದು.



ಇಂದು ಅದ ನೆನದರೆ ಹೇಗಪ್ಪ ಇದೆಲ್ಲಾ ಎನ್ನುತ್ತಾಳೆ. ರಾಯರ ಕಾರುಣ್ಯ ಹಾಗೆ ರಾಯರನ್ನು ಅನನ್ಯವಾಗಿ ನಂಬಿ ಕಾಯ-ವಾಚ-ಮನ ಶುದ್ಧಾತ್ಮನಾಗಿ ಉಳಿದರೆ ಬೇಡಿದ್ದು ನೀಡೋ ಕಾಮಧೇನು. ಕೊರೋನ ಸಂಕಷ್ಟ ಬಂದಾಗಿನಿಂದ ಸಂಕಲ್ಪ ಸೇವೆ ಮಾಡಲು ಆಗಲಿಲ್ಲ. 2.5ವರ್ಷದ ಮೇಲೆ ಮತ್ತೆ ಬಂದು ಮಂತ್ರಾಲಯ ನೆಲದಲ್ಲಿ ರಾಯರ ಸೇವೆ ಮಾಡುತ್ತಿರುವೆ. ನಿಮ್ಮ ಜೊತೆ ಈ ವಿಚಾರವನ್ನು ಹಂಚಿಕೊಳ್ಳಬೇಕು ಎಂದು ಮನಸಾಯಿತು ಲಗತ್ತಿಸಿಬಿಟ್ಟೆ ನನ್ನ ಭಾವನೆ. ಸಹಸ್ರದೋಷವಿರಲಿ ಬದುಕಲ್ಲಿ ಕಾಯ-ವಾಚ-ಮನ ರಾಯರ ನಂಬಿ ನಿಮ್ಮ ಬೆನ್ನ ಹಿಂದೆ ನಿಲ್ಲುವರು. ಬರಲು ಆಗದಿದ್ದರೆ ಮಂತ್ರಾಲಯಕ್ಕೆ ಚಿಂತೆಯಿಲ್ಲ. ನಿಮ್ಮ ಬಡಾವಣೆಯ ರಾಯರಮಠವೆ ಸಾಕು ನಿಮ್ಮ ಕೂಗಿಗೆ ರಾಯರು ಕಣ್ಣುಬಿಡುತ್ತಾರೆ. ಶುಭಮಸ್ತು ಎಂದು ಬರೆದುಕೊಂಡು ಕೆಲವು ಫೋಟೋಗಳನ್ನು ಜಗ್ಗೇಶ್ ಹಂಚಿಕೊಂಡಿದ್ದಾರೆ.

Puneeth Rajkumar ಜೊತೆಗಿನ ಕೊನೆ ಕ್ಷಣದ ವಿಡಿಯೋ ಹಂಚಿಕೊಂಡ ನಟ ಜಗ್ಗೇಶ್!

ಇನ್ನು ಇತ್ತೀಚೆಗಷ್ಟೇ ಜಗ್ಗೇಶ್, ಪುನೀತ್ ರಾಜ್‍ಕುಮಾರ್ (Puneeth Rajkumar) ಜೊತೆಗೆ ಕಳೆದ ಕೊನೆ ಕ್ಷಣಗಳನ್ನು ನೆನೆದು ವಿಡಿಯೊವೊಂದನ್ನು ಹಂಚಿಕೊಂಡಿದ್ದರು. 'ಮಂತ್ರಾಲಯದಲ್ಲಿ 2021ರ ಏಪ್ರಿಲ್ 5ರ ಸೋಮವಾರ ಪುನೀತನ ಜೊತೆಯ ಕೊನೆಯ ಕ್ಷಣ. ಕರೆದು ಕೂರಿಸಿಕೊಂಡದ್ದು ಸಂತೋಷ ಆನಂದರಾಮನನ್ನು. ಈ ಅಪರೂಪದ ವೀಡಿಯೋ ಕಳಿಸಿದ ಮಂತ್ರಾಲಯ ಪ್ರೋ. ನರಸಿಂಹಾಚಾರ್ಯ ಅವರಿಗೆ ಧನ್ಯವಾದ. ಪುನೀತ ಅಲ್ಲೆ ರಾಯರ ಜೊತೆ ಉಳಿದುಬಿಟ್ಟ' ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದರು. ವಿಶೇಷವಾಗಿ ಜಗ್ಗೇಶ್, ಪುನೀತ್ ನಿಧನರಾದಗಿನಿಂದಲೂ ಸಾಮಾಜಿಕ ಜಾಲತಾಣ (Social Media) ಖಾತೆಯಲ್ಲಿ ಅವರ ಒಡನಾಟವನ್ನು ನೆನೆದು ಹಲವಾರು ವಿಷಯಗಳನ್ನು ಶೇರ್ ಮಾಡಿಕೊಂಡಿದ್ದರು.
 

PREV
Read more Articles on
click me!

Recommended Stories

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್: ಜೀವಾವಧಿ ಶಿಕ್ಷೆ ಅಮಾನತು ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಕೋಡಿಮಠಕ್ಕೆ ಗೃಹಸಚಿವ ಪರಂ ರಹಸ್ಯ ಭೇಟಿ; ಕುತೂಹಲ ಕೆರಳಿಸಿದ ಒಂದು ಗಂಟೆಯ ಗೌಪ್ಯ ಮಾತುಕತೆ!