ತಪ್ಪು ಮಾಡಿದವರಿಗೆ ತಿದ್ದಿಕೊಳ್ಳಲು ಅವಕಾಶ ನೀಡಿ : ಕುಮಾರಸ್ವಾಮಿ

By Kannadaprabha NewsFirst Published Oct 14, 2019, 11:17 AM IST
Highlights

ತಪ್ಪು ಮಾಡಿದವರಿಗೆ ತಿದ್ದಿಕೊಳ್ಳಲು ಒಂದು ಅವಕಾಶ ನೀಡಿ ಎಂದು ಕುಮಾರಸ್ವಾಮಿ ಹೇಳಿದರು. ಯಾವ ವಿಚಾರದ ಬಗ್ಗೆ ಈ ಹೇಳಿಕೆ ಇಲ್ಲಿದೆ ಸಂಫೂರ್ಣ ಮಾಹಿತಿ. 

ಸಕಲೇಶಪುರ [ಅ.14]: ರಾಮಾಯಣವು ಜನಸಾಮಾನ್ಯರ ಜೀವನಕ್ಕೆ ಹತ್ತಿರವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಶಾಸಕ ಎಚ್.ಕೆ. ಕುಮಾರಸ್ವಾಮಿ ಹೇಳಿದರು. ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಭಾನುವಾರ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಾಲ್ಮೀಕಿ ರಚಿಸಿದ ರಾಮಾಯಣದಲ್ಲಿ ಕೌಟುಂಬಿಕ ಶೌರ್ಯ, ಆಡಳಿತ ಪವಿತ್ರತೆ, ಸಹೋದರತ್ವ ಸೇರಿದಂತೆ ಇನ್ನು ಹಲವಾರು ಕಥೆಗಳನ್ನು ಒಳಗೊಂಡಿದೆ.

ಆದ್ದರಿಂದ ವಾಲ್ಮೀಕಿ ಬರೆದ ರಾಮಾಯಣ ಜನಜೀವನಕ್ಕೆ ಹತ್ತಿರದ ಕಥೆ ಯಾಗಿದೆ ಎಂದರು. ಪ್ರತಿಯೊಬ್ಬನಿಗೂ ತಮ್ಮ ತಪ್ಪನ್ನು ತಿದ್ದಿ ಕೊಳ್ಳುವ ಅವಕಾಶ ನೀಡಬೇಕು. ಆತುರ ದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳ ಬಾರದು. ಕಳ್ಳ ಎಂಬ ನೆಪ ಒಡ್ಡಿ ವಾಲ್ಮೀಕಿ ಯನ್ನು ಶಿಕ್ಷೆಗೆ ಒಳ ಪಡಿಸಿದ್ದರೆ ರಾಮಾ ಯಣದಂತಹ ಕಥೆ ಬರೆಯಲು ಸಾಧ್ಯ ವಾಗುತ್ತಿರಲಿಲ್ಲ. ಆದ್ದ ರಿಂದ ಎಂತಹವರಿಗೂ ಸಹ ಪರಿವರ್ತನೆಗೆ ಅವಕಾಶ ನೀಡಬೇಕು ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಚಂಚಲಾ ಕುಮಾರಸ್ವಾಮಿ, ಉಜ್ಮಾ ರುಜ್ವಿ, ತಾಲೂಕು ಪಂಚಾಯ್ತಿ ಅಧ್ಯಕ್ಷೆ ಶ್ವೇತಾ, ಸದಸ್ಯರಾದ ಯಡೆಹಳ್ಳಿ ಮಂಜುನಾಥ್, ಉದಯ್, ಟಿಎಸಿಪಿ ಎಂಎಸ್ ಅಧ್ಯಕ್ಷ ಲೋಹಿತ್ ಕೌಡಹಳ್ಳಿ, ಪುರಸಭಾ ಸದಸ್ಯ ಇಸ್ರಾರ್, ಅನ್ನಪೂರ್ಣೇಶ್ವರಿ, ಉಪವಿಭಾಗಾಧಿಕಾರಿ ಕವಿತಾ ರಾಜಾ ರಾಂ, ತಹಸೀಲ್ದಾರ್ ರಕ್ಷಿತ್, ತಾಪಂ ಕಾರ್ಯನಿರ್ವಾಹಣಾಧಿಕಾರಿ ಇದ್ದರು. 

click me!