ಹಾಸನ: ಬೋರ್ ಕೊರೆಸುವಾಗ ವಿದ್ಯುತ್ ಪ್ರವಹಿಸಿ ಇಬ್ಬರು ಸಾವು!

Published : Oct 13, 2019, 10:10 AM ISTUpdated : Oct 13, 2019, 08:24 PM IST
ಹಾಸನ: ಬೋರ್ ಕೊರೆಸುವಾಗ ವಿದ್ಯುತ್  ಪ್ರವಹಿಸಿ ಇಬ್ಬರು ಸಾವು!

ಸಾರಾಂಶ

ಬೋರ್ವೆಲ್ ಕೊರೆಸುವಾಗ ಕೊಂಚ ಎಚ್ಚರ ವಹಿಸಿ. ಇಂತಹ ದುರ್ಘಟನೆಗಳು ಸಂಭವಿಸಬಹುದು. 

ಚನ್ನರಾಯಪಟ್ಟಣ [ಅ.13]: ಕೊಳವೆಬಾವಿ ಕೊರೆಯುವ ಲಾರಿಯಲ್ಲಿ ಕೆಲಸ ಮಾಡುವ ಹೊರ ರಾಜ್ಯದ ಕಾರ್ಮಿಕರಿಬ್ಬರು ವಿದ್ಯುತ್‌ ತಗುಲಿ ಮೃತಪಟ್ಟಿರುವ ಘಟನೆ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ತಮಿಳುನಾಡು ಮೂಲದ ಪ್ರಭು (40), ಒರಿಸ್ಸಾ ದ ಕಿಲ್ಲಿಸ್‌ (26) ಮೃತರು ಎಂದು ಗುರುತಿಸಲಾಗಿದೆ. ಪಟ್ಟಣದ ಗಾಂಧಿ ಸರ್ಕಲ್‌ ಸಮೀಪದ ವಿಜಯಾ ಬ್ಯಾಂಕ್‌ ರಸ್ತೆಯಲ್ಲಿರುವ ವೃಷಭೇಂದ್ರ ಮೂರ್ತಿ ಎಂಬುವರ ಮನೆಯಲ್ಲಿ ಕೊಳವೆಬಾವಿ ಕೊರೆಯುವಾಗ ದುರ್ಘಟನೆ ಸಂಭವಿಸಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೊಳವೆಬಾವಿ ಕೊರೆದ ನಂತರ ಬಾವಿಗೆ ಬಿಡಲಾಗಿದ್ದ ರಿಗ್‌ಗಳನ್ನು ಮೇಲೆತ್ತುವಾಗ ಪಕ್ಕದಲ್ಲಿ ಹಾದು ಹೋಗಿದ್ದ ಎಲೆಕ್ಟ್ರಿಕ್‌ ತಂತಿಗೆ ರಿಗ್‌ ತಗುಲಿ ವಿದ್ಯುತ್‌ ಪ್ರವಹಿಸಿ ಆಪರೇಟರ್‌ ಪ್ರಭು ಮತ್ತು ಸಹಾಯಕ ಕಿಲ್ಲಿಸ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇಬ್ಬರು ಕಾರ್ಮಿಕರ ಸಾವಿಗೆ ಲಾರಿ ಮಾಲಿಕ ಮೂರ್ತಿ ಮತ್ತು ಏಜೆಂಟ್‌ ಶ್ರೀನಿವಾಸ್‌ ಎಂಬುವರ ನಿರ್ಲಕ್ಷ್ಯತನ ಕಾರಣವೆಂದು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

PREV
click me!

Recommended Stories

ಎಚ್‌ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ
ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ