ಸಿನಿಮಾದಲ್ಲಿ ತೋರಿಸಲ್ಪಡೋ ದೃಶ್ಯಗಳನ್ನು ಜನ ಹೇಗೆ ಸ್ವೀಕರಿಸುತ್ತಾರೆಂಬುದು ಅವರವರಿಗೆ ಬಿಟ್ಟಿದ್ದು. ಭಾರೀ ಸೌಂಡ್ ಮಾಡಿದ್ದ KGF ಸಿನಿಮಾ ನೋಡಿ ಅನುಕರಿಸಿ ತಂದೆಯೊಬ್ಬ ಮಗಳ ಮೇಲೆ ಹಲ್ಲೆ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನ(ನ.05): ಸಿನಿಮಾದಲ್ಲಿ ತೋರಿಸಲ್ಪಡೋ ದೃಶ್ಯಗಳನ್ನು ಜನ ಹೇಗೆ ಸ್ವೀಕರಿಸುತ್ತಾರೆಂಬುದು ಅವರವರಿಗೆ ಬಿಟ್ಟಿದ್ದು. ಭಾರೀ ಸೌಂಡ್ ಮಾಡಿದ್ದ KGF ಸಿನಿಮಾ ನೋಡಿ ಅನುಕರಿಸಿ ತಂದೆಯೊಬ್ಬ ಮಗಳ ಮೇಲೆ ಹಲ್ಲೆ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ.
KGF ಸಿನಿಮಾ ನೋಡಿರುವ ತಂದೆ ಸ್ವಂತ ಮಗಳ ಮೇಲೆಯೇ ಸುತ್ತಿಗೆಯಿಂದ ಬಡಿದು ಹಲ್ಲೆ ಮಾಡಿದ್ದಾನೆ. ಕುಡಿದ ಅಮಲಿನಲ್ಲಿ ಪಾಪಿ ತಂದೆಯಿಂದ ಮಗಳ ಮೇಲೆ ದೌರ್ಜನ್ಯ ನಡೆದಿದ್ದು, ಕೆಜಿಎಫ್ ಸ್ಟೈಲ್ ಎಂದು ದುಷ್ಟ ತಂದೆ ಸುತ್ತಿಗೆಯಿಂದ ಬಡಿದು ಹಲ್ಲೆ ಮಾಡಿದ್ದಾನೆ.
undefined
ಚಿಂಚನಸೂರ್‌ಗೆ 11 ಕೋಟಿ ಸಾಲ ಕೊಟ್ಟಿದ್ದ ಮಹಿಳೆ ಆತ್ಮಹತ್ಯೆ.
ಹಾಸನ ಜಿಲ್ಲೆ ಸಕಲೇಶಪುರ ಪಟ್ಟಣದ ಚಂಪಕನಗರದಲ್ಲಿ ಘಟನೆ ನಡೆದಿದ್ದು, ಪ್ರಶಾಂತ್ ಎಂಬಾತ ಮಗಳ ಮೇಲೆ ಹಲ್ಲೆ ನಡೆಸಿದ ದುಷ್ಟ ತಂದೆ. ನಾನು ಮಯೂರ, ನಾನಿರುವುದೆ ನಿಮಗಾಗಿ, ಕೆ.ಜಿ.ಎಫ್.ಸಿನಿಮಾ ನೋಡಿದ್ದೀರಾ ಎಂದು ಡೈಲಾಗ್ ಹೊಡೆದು ಹಲ್ಲೆಮಾಡುತ್ತಿರೊ ವೀಡಿಯೋ ವೈರಲ್ ಆಗಿದೆ.
ಹೆಣ್ಣು ಮಕ್ಕಳೇ ಹುಟ್ಟಿದ್ದೀರಾ ಎಂದು ಕುಡಿದು ಬಂದು ಮಡದಿ ಮಕ್ಕಳಿಗೆ ಹಲ್ಲೆ ನಡೆಸಿದ್ದಾನೆ. ಕೈಯಲ್ಲಿ ದೊಡ್ಡ ಸುತ್ತಿಗೆ ಹಿಡಿದು ಮಗಳಿಗೆ ಹಲ್ಲೆ ಮಾಡೋ ವಿಡಿಯೋ ವೈರಲ್ ಆಗಿದೆ. ಪತ್ನಿ ಮಗಳನ್ನು ಬಿಡಿಸಲು ಯತ್ನಿಸಿದರೂ ಸುಮ್ಮನಾಗದೆ ಸುತ್ತಿಗೆಯಿಂದ ಹಲ್ಲೆ ಮಾಡಿದ್ದಾನೆ.
ಬೆಂಗಳೂರು: ಸ್ನೇಹಿತನನ್ನೇ ಬಡಿದು ಕೊಲೆ ಮಾಡಿ ಕಥೆ ಕಟ್ಟಿದ್ರು..!.
ನವೆಂಬರ್ 5ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: