
ಹಾಸನ: ಕೇರಳದಿಂದ ಕರ್ನಾಟಕಕ್ಕೆ ಅಧ್ಯಯನ ಪ್ರವಾಸ ಬಂದ ವಿದ್ಯಾರ್ಥಿಗಳ ಬಸ್ಸೊಂದು ಹಾಸನದ ಬಳಿ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ 15 ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಹಾಸನದ ಅರಕಲಗೂಡು ತಾಲೂಕಿನ ಬರಗೂರು ಬಳಿ ಈ ಘಟನೆ ನಡೆದಿದೆ. ಗಾಯಗೊಂಡ ಮಕ್ಕಳನ್ನೂ ಕೂಡಲೇ ಅರಕಲಗೂಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಸನ ಹಾಗೂ ಪಿರಿಯಾಪಟ್ಟಣ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಘಟನೆ ನಡೆದಿದ್ದು, ಸ್ಥಳೀಯರ ಸಹಾಯದಿಂದ ಗಾಯಾಳು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರು ಪ್ರವಾಸದಿಂದ ಹಿಂದಿರುಗುತ್ತಿದ್ದಾಗ ಬರಗೂರು ಬಳಿ ಬಸ್ ಪಲ್ಟಿ:
ಕೇರಳದ ವಿದ್ಯಾರ್ಥಿಗಳು ಬೆಂಗಳೂರಿಗೆ ಪ್ರವಾಸ ಹೋಗಿದ್ದು, ವಾಪಸ್ ಬರುತ್ತಿದ್ದ ವೇಳೆ ಹಾಸನದ ಅರಕಲಗೂಡಿನ ಸಮೀಪ ಈ ದುರಂತ ಸಂಭವಿಸಿದೆ. ವಿದ್ಯಾರ್ಥಿಗಳು ಕೇರಳದ ಕೋಝಿಕ್ಕೋಡ್ ಜಿಲ್ಲೆಯ ವಡಕಾರದ ಶಾಲೆಯೊಂದರಿಂದ ಮಕ್ಕಳು ಕರ್ನಾಟಕ ಪ್ರವಾಸಕ್ಕೆಂದು ಬಂದಿದ್ದರು. ನಿನ್ನೆ ರಾತ್ರಿ 11:30 ರ ಸುಮಾರಿಗೆ ಈ ಬಸ್ ಅಪಘಾತ ಸಂಭವಿಸಿತ್ತು.
ಇದನ್ನೂ ಓದಿ: ಮಾಜಿ ಗೆಳತಿಗೆ ಮುತ್ತು ಕೊಡಲು ಹೋಗಿ ಮಾತೇ ನಿಂತೋಯ್ತು: ವಿವಾಹಿತನಿಗೆ ಆಗಿದ್ದೇನು?
ಇದನ್ನೂ ಓದಿ: ಜಿಪ್ ಲೈನ್ ಅಪಘಾತವಾಗಿದೆ ಎಂದು ಸುಳ್ಳು ಎಐ ವೀಡಿಯೋ: ಯುವಕನ ಬಂಧನ