ಕಾರು -ಸ್ಕೂಟರ್‌ಗೆ ಡಿಕ್ಕಿಯಾಗಿ ಉರುಳಿ ಬಿದ್ದ ಬಸ್, ಹಾಸನದ ಸರಣಿ ಅಪಘಾತದಲ್ಲಿ ಓರ್ವ ಸಾವು

Published : Nov 16, 2025, 11:08 PM IST
Hassan Accident

ಸಾರಾಂಶ

ಕಾರು ಸ್ಕೂಟರ್‌ಗೆ ಡಿಕ್ಕಿಯಾಗಿ ಉರುಳಿ ಬಿದ್ದ ಬಸ್, ಹಾಸನದ ಸರಣಿ ಅಪಘಾತದಲ್ಲಿ ಓರ್ವ ಸಾವು, ಚನ್ನರಾಯಪಟ್ಣಣ ಬಳಿ ಈ ಅಪಘಾತ ಸಂಭವಿಸಿದೆ. ಬೈಕ್ ಸವಾರ ಸ್ಥಳಕ್ಕೆ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಸಂಚಾರಿ ಪೊಲೀಸರು ದೌಡಾಯಿಸಿದ್ದಾರೆ.

ಚನ್ನರಾಯಪಟ್ಟಣ (ನ.16) ಹಾಸನದಲ್ಲಿ ಸರಣಿ ಅಪಘಘಾತ ಸಂಭವಿಸಿದೆ. ಖಾಸಗಿ ಬಸ್ ಮೊದಲು ಕಾರಿಗೆ ಡಿಕ್ಕಿಯಾಗಿ ಬಳಿಕ ಡೈವರ್ ಹಾರಿ ಸರ್ವೀಸ್ ರಸ್ತೆಯಲ್ಲಿ ಹೋಗುತ್ತಿದ್ದ ಸ್ಕೂಟರ್ ಸವಾರನಿಗೆ ಡಿಕ್ಕಿಯಾಗಿದೆ. ಇದರ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ನಿಯಂತ್ರಣ ತಪ್ಪಿದ ಬಸ್ ಉರುಳಿ ಬಿದ್ದಿದೆ. ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆಯ ಅಂಬೇಡ್ಕರ್ ವೃತ್ತದಲ್ಲಿ ಘಟನೆ ನಡೆದಿದೆ.

ಬಸ್‌ನಲ್ಲಿ ಪ್ರಯಾಣಿಕರು ಇರಲಿಲ್ಲ

ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಈ ಘಟನೆ ಸಂಭವಿಸಿದೆ. ಕಾರು, ಖಾಸಗಿ ಬಸ್ ಮತ್ತು ಸ್ಕೂಟರ್ ನಡುವೆ ಸರಣಿ ಅಪಘಾತ ನಡೆದಿದೆ. ಹಾಸನದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಮೊದಲು ಕಾರಿಗೆ ಡಿಕ್ಕಿಯಾಗಿದೆ. ವೇಗದ ಕಾರಣದಿಂದ ಡಿಕ್ಕಿಯಾದ ಬೆನ್ನಲ್ಲೇ ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದೆ. ಕಾರಿಗೆ ಡಿಕ್ಕಿ ಹೊಡೆದು ನಂತರ ಸರ್ವಿಸ್ ರಸ್ತೆ ಕಡೆಗೆ ನುಗ್ಗಿದ್ದ ಬಸ್, ಸರ್ವೀಸ್ ರಸ್ತೆಯಲ್ಲಿ ತೆರಳುತ್ತಿದ್ದ ಸ್ಕೂಚರ್ ಸವಾರನಿಗೆ ಬಸ್ ಡಿಕ್ಕಿಯಾಗಿದೆ. ಹಿರೀಸಾವೆ ಹೋಬಳಿಯ ಮಸಕನಳ್ಳಿ ಗ್ರಾಮದ ದೇವರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್ ಉರುಳಿ ಬಿದ್ದ ಕಾರಣ ಬಸ್ ಚಾಲಕನ ಹಾಗೂ ನಿರ್ವಾಹಕನಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಅದೃಷ್ಠವಶಾತ್ ಬಸ್‌ನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ಸ್ಥಳಕ್ಕೆ ಚನ್ನರಾಯಪಟ್ಟಣ ಸಂಚಾರಿ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.

ಪಾದಾಚಾರಿಗೆ ಬೈಕ್ ಡಿಕ್ಕಿ, ಹಿಂಬದಿ ಸವಾರ ಸಾವು

ಚಾಮರಾಜನಗರ ಜಿಲ್ಲೆ ಹನೂರು ತಾಲೋಕು ಕಾಮಗೆರೆ ಬಳಿ ಬೈಕ್ ಪಾದಾಚಾರಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಈ ವೇಳೆ ಬೈಕ್‌ನ ಹಿಂಬದಿ ಸವಾರ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಮಳವಳ್ಳಿ ತಾಲೋಕು ರಾವಂದೂರಿನ ಮನೋಹರ್ (25) ಮೃತಪಟ್ಟಿದ್ದಾರೆ. ಡಿಕ್ಕಿಯಾದ ಪರಿಣಾಮ ಪಾದಚಾರಿಗೆ ಗಾಯಗೊಂಡಿದ್ದಾರೆ. ಇನ್ನು ಬೈಕ್ ಸವಾರ ಅಪಾಯದಿಂದ ಪಾರಾಗಿದ್ದಾರೆ. ಮಹದೇಶ್ವರ ಬೆಟ್ಟದಿಂದ ವಾಪಸ್ ಬರುವಾಗ ಅಪಘಾತ ಸಂಭವಿಸಿದೆ.

ಕಾರು ಮಾಲೀಕನಿಂದ ಕುಡಿದ ಮತ್ತಿನಲ್ಲಿ ಸರಣಿ ಅಪಘಾತ

ಕೊಪ್ಪಳ ನಗರದ ಹೊರವಲಯದಲ್ಲಿ ಕಾರು ಮಾಲೀಕ ಕುಡಿದ ಮತ್ತಿನಲ್ಲಿ ಸರಣಿ ಅಪಘಾತ ನಡೆಸಿದ ಘಟನೆ ನಡೆದಿದೆ. ಕುಡಿದು ಕಾರು ಚಾಲನೆ ಮಾಡುತ್ತಿದ್ದ ಆನಂದಪ್ಪ ಸೊರಟೂರು, ಮೊದಲಿಗೆ ಕೊಪ್ಪಳ ಹೊರವಲಯದಲ್ಲಿ ಅಪಘಾತ ಮಾಡಿದ್ದಾನೆ. ಅಪಘಾತದ ಬಳಿಕ ಕಾರು ನಿಲ್ಲಿಸದೆ ರಭಸವಾಗಿ ಕಾರು ಚಾಲನೆ ಮಾಡಿಕೊಂಡು ಹೋಗಿದ್ದ ಆನಂದಪ್ಪ ದದೇಗಲ್ ಬಳಿ ಮತ್ತೇ ಅಪಘಾತ ಮಾಡಿದ್ದಾನೆ. ಕೊನೆಗೆ ನಂತರ ಡಿವೈಡರ್ ಗೆ ಹೊಡೆದು ಕಾರು ನಿಲ್ಲಿಸಿದ್ದಾನೆ. ಎರಡು ಅಪಘಾತಗಳಲ್ಲಿ ನಾಲ್ಕು ಜನರಿಗೆ ಗಾಯವಾಗಿದೆ. ಸ್ಥಳೀಯರ ಕಾರು ಚಾಲಕ ಆನಂದಪ್ಪನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

 

PREV
Read more Articles on
click me!

Recommended Stories

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್: ಜೀವಾವಧಿ ಶಿಕ್ಷೆ ಅಮಾನತು ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಕೋಡಿಮಠಕ್ಕೆ ಗೃಹಸಚಿವ ಪರಂ ರಹಸ್ಯ ಭೇಟಿ; ಕುತೂಹಲ ಕೆರಳಿಸಿದ ಒಂದು ಗಂಟೆಯ ಗೌಪ್ಯ ಮಾತುಕತೆ!