ಮೃತನ ಜೊತೆ ಆತನ 1.5 ಕೋಟಿ ಬೆಂಜ್ ಕಾರು ಮಣ್ಣು ಮಾಡಿ ತೀವ್ರ ಸಂಕಷ್ಟಕ್ಕೆ ಸಿಲುಕಿದ ಕುಟುಂಬ

Published : Apr 19, 2026, 05:29 PM IST

ಮೃತನ ಜೊತೆ ಆತನ 1.5 ಕೋಟಿ ಬೆಂಜ್ ಕಾರು ಮಣ್ಣು ಮಾಡಿ ತೀವ್ರ ಸಂಕಷ್ಟಕ್ಕೆ ಸಿಲುಕಿದ ಕುಟುಂಬ, ಭೇಷರತ್ ಕ್ಷಮೆ ಕೇಳಿದ್ದು ಮಾತ್ರವಲ್ಲ, ಇದೀಗ ಕಾನೂನು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅಷ್ಟಕ್ಕೂ ಕಾರನ್ನೂ ಮಣ್ಣು ಮಾಡಿ ಆಗಿದ್ದೇನು? 

PREV
15
ಮೃತನ ಜೊತೆ ಕಾರು ಮಣ್ಣು ಮಾಡಿದ ಕುಟುಂಬ

ಆಪ್ತರು ಮೃತಪಟ್ಟಾಗ ಅವರ ನೆಚ್ಚಿನ ವಸ್ತುಗಳು, ಆಹಾರ, ತಿಂಡಿ ತಿನಿಸುಗಳನ್ನು ಶ್ರಾದ್ಧವೇಳೆ ಮಾಡುವುದು ಸಾಮಾನ್ಯ. ಇನ್ನು ಹಲವು ಬಾರಿ ಅವರ ನೆಚ್ಚಿನ ವಾಹನಗಳನ್ನು ಮಣ್ಣು ಮಾಡಿದ ಊದಾಹರಣೆಗಳಿವೆ. ಇದೇ ರೀತಿಯ ಘಟನೆ ನಡೆದಿದೆ. ಆದರೆ ಮೃತನ ಜೊತೆ ಆತನ ಕಾರನ್ನು ಮಣ್ಣು ಮಾಡಿ ಕುಟುಂಬ ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ.

25
70 ವರ್ಷದ ಮೃತನ ಜೊತೆ ಕಾರಿಗೂ ಅಂತ್ಯಕ್ರಿಯೆ

ಚೀನಾದ ಲಿಯೊನಿಂಗ್ ಪ್ರಾಂತ್ಯದಲ್ಲಿ70 ವರ್ಷದ ವೃದ್ಧ ಮೃತಪಟ್ಟಿದ್ದಾನೆ. ಆತನಿಗೆ ಕಾರುಗಳೆಂದರೆ ಪಂಚಪ್ರಾಣ. ಹೀಗಾಗಿ ತಾನು ಅತೀವ ಕಷ್ಟಪಟ್ಟು, ಶ್ರಮವಹಿಸಿ ಮರ್ಸಿಡೀಸ್ ಬೆಂಜ್ ಕಾರು ಖರೀದಿಸಿದ್ದ. ಇದೇ ಕಾರಿನಲ್ಲಿ ಓಡಾಡುತ್ತಿದ್ದ. ಈ ಕಾರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ಹೀಗಾಗಿ ಈತ ಮೃತಪಟ್ಟಾಗ, ಆತನ ನೆಚ್ಚಿನ ಕಾರನ್ನು ಕುಟುಂಬಸ್ಥರು ಮಣ್ಣು ಮಾಡಿದ್ದಾರೆ.

35
ಮಣ್ಣು ಮಾಡಿದ 1.5 ಕೋಟಿ ರೂ ಕಾರು

ಕುಟುಂಬಸ್ಥರು ಮೃತನನ್ನು ಮಣ್ಣು ಮಾಡಿದ ಪಕ್ಕದಲ್ಲೇ ಜೆಸಿಬಿಯಿಂದ ಮತ್ತೊಂದು ಗುಂಡಿ ತೋಡಿದ್ದಾರೆ. ಬಳಿಕ 1.5 ಕೋಟಿ ರೂಪಾಯಿ ಮರ್ಸಿಡೀಸ್ ಬೆಂಜ್ ಕಾರಿಗೆ ಅಂತ್ಯಕ್ರಿಯೆ ವಿಧಿ ವಿಧಾನಗಳನ್ನು ಮಾಡಿದ್ದಾರೆ. ಕಾರಿಗೆ ಕೆಂಪು ಬಟ್ಟೆ ಹೊದಿಸಿ ಕಾರನ್ನು ಜೆಸಿಬಿ ಮೂಲಕ ಗುಂಡಿಗೆ ಇಳಿಸಿ ಕುಟುಂಬಸ್ಥರು ಮಣ್ಣು ಹಾಕಿ ಮುಚ್ಚಿದ್ದಾರೆ.

45
ಮರು ದಿನ ಸ್ಥಳೀಯ ಆಡಳಿತಕ್ಕೆ ಸಿಕ್ಕ ಮಾಹಿತಿ

1.5 ಕೋಟಿ ರೂಪಾಯಿ ಕಾರು ಮಣ್ಣು ಮಾಡಲಾಗಿದೆ ಅನ್ನೋ ಮಾಹಿತಿ ಮರು ದಿನ ಸ್ಥಳೀಯ ಆಡಳಿತ ಮಂಡಳಿಗೆ ಸಿಕ್ಕಿದೆ. ತಕ್ಷಣವೇ ಆಡಳಿತ ಮಂಡಳಿ ಸದಸ್ಯರು ಸ್ಥಳಕ್ಕೆ ಧಾವಿಸಿದ್ದಾರೆ. ನೇರವಾಗಿ ಕಾರು ಮಣ್ಣು ಮಾಡಿದ ಕುಟುಂಬಸ್ಥರ ಕರೆಯಿಸಿ ವಿಚಾರಣೆ ನಡೆಸಿದಾಗ ಮಾಹಿತಿ ಖಚಿತಗೊಂಡಿದೆ.

55
ಸಂಕಷ್ಟದಲ್ಲಿ ಕುಟುಂಬ, ಭೇಷರತ್ ಕ್ಷಮೆ

ಸ್ಮಶಾನದಲ್ಲಿ ಮೃತರನ್ನು ಅಂತ್ಯಕ್ರಿಯೆ ಮಾಡಲು ಮಾತ್ರ ಅವಕಾಶ. ಇಲ್ಲಿ ಮಣ್ಣಿನಲ್ಲಿ ಸುಲಭವಾಗಿ ಕರಗದ ಯಾವುದೇ ವಸ್ತುಗಳನ್ನು ಅಂತ್ಯಕ್ರಿಯೆ ಮಾಡುವಾಗ ಮಣ್ಣಿನಲ್ಲಿ ಹೂತುಹಾಕುವಂತಿಲ್ಲ. ಮೃತರ ತೊಟ್ಟಿರುವ ಬಟ್ಟೆ ಹೊರತುಪಡಿಸಿ ಇನ್ಯಾವುದೇ ವಸ್ತುಗಳನ್ನು ಮಣ್ಣು ಮಾಡುವಂತಿಲ್ಲ. ಇದು ಪರಿಸರಕ್ಕೆ ಪೂರಕವಲ್ಲ ಅನ್ನೋ ಕಾರಣದಿಂದ ಈ ನಿಯಮ ಜಾರಿಯಲ್ಲಿದೆ. ಇದರ ನಡುವೆ ಕಾರನ್ನೇ ಮಣ್ಣು ಮಾಡಲಾಗಿದೆ. ಕಾರು ಬೇಗ ಮಣ್ಣಾಗುವುದಿಲ್ಲ. ಕಬ್ಬಿಣ ಮಣ್ಣಾಗಲು ಕೆಲ ವರ್ಷ ಹಿಡಿಯಲಿದೆ. ಆದರೆ ಕಾರಿನಲ್ಲಿರುವ ಪ್ಲಾಸ್ಟಿಕ್ ವಸ್ತುಗಳು ಮಣ್ಣಾಗುವುದಿಲ್ಲ. ಹೀಗಾಗಿ ನಿಯಮ ಉಲ್ಲಂಘಿಸಿದ ಕುಟುಂಬಸ್ಥರನ್ನು ಅಧಿಕಾರಿಗಳು ತರಾಟೆಗೆ ತೆಗುದುಕೊಂಡಿದ್ದಾರೆ.

ಕುಟುಂಬಸ್ಥರು ಅಧಿಕಾರಿಗಳ ಬಳಿ ಭೇಷರತ್ ಕ್ಷಮೆ ಕೇಳಿದ್ದಾರೆ. ಇದೇ ವೇಳೆ ಸಾರ್ವಜನಿಕರಲ್ಲೂ ಈ ವಿಡಿಯೋ ಹಾಗೂ ಮಾಹಿತಿಯನ್ನು ಹರಡಬೇಡಿ. ಇದು ನಿಯಮಕ್ಕೆ ವಿರುದ್ಧವಾಗಿದ್ದು, ತಾವು ಸಂಕಷ್ಟದಲ್ಲಿ ಸಿಲುಕಿರುವುದಾಗಿ ಮನವಿ ಮಾಡಿಕೊಂಡಿದ್ದಾರೆ.

ಸಂಕಷ್ಟದಲ್ಲಿ ಕುಟುಂಬ, ಭೇಷರತ್ ಕ್ಷಮೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories