ವಿಶ್ವದ ಅತಿ ಉದ್ದದ ರಸ್ತೆ ಸುಮಾರು 30,600 ಕಿ.ಮೀ. ಉದ್ದವಾಗಿದೆ. ಈ ರಸ್ತೆ 14 ದೇಶಗಳನ್ನು ಹಾದುಹೋಗುತ್ತದೆ. ಇದರ ಸಂಪೂರ್ಣ ಮಾರ್ಗವನ್ನು ಕ್ರಮಿಸಲು 60 ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
ಭಾರತದಲ್ಲಿ NH 44 (4,112 ಕಿ.ಮೀ) ದೇಶದ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿಯಾಗಿದ್ದರೂ, ಅದು ವಿಶ್ವದ ಅತಿ ದೊಡ್ಡ ರಸ್ತೆಗೆ ಹೋಲಿಸಿದರೆ ತುಂಬಾ ಚಿಕ್ಕದು. ಪ್ಯಾನ್-ಅಮೇರಿಕನ್ ಹೈವೇ ಎಂದು ಕರೆಯಲ್ಪಡುವ ವಿಶ್ವದ ಅತಿ ಉದ್ದದ ರಸ್ತೆ ಸುಮಾರು 30,600 ಕಿಲೋಮೀಟರ್ ಉದ್ದವಾಗಿದೆ. ಇದು ಉತ್ತರ ಅಮೆರಿಕದ ಉತ್ತರ ಭಾಗದಿಂದ ದಕ್ಷಿಣ ಅಮೆರಿಕದ ಕೊನೆಯ ತುದಿಯವರೆಗೆ ಹೋಗುತ್ತದೆ.
25
14 ದೇಶಕ್ಕೆ ಸಂಪರ್ಕ
ಈ ಉದ್ದದ ಹೆದ್ದಾರಿ ಅಲಾಸ್ಕಾದ ಪ್ರುಧೋ ಕೊಲ್ಲಿಯಲ್ಲಿ ಪ್ರಾರಂಭವಾಗಿ, ಅರ್ಜೆಂಟೀನಾದ ಉಶುವಾಯದಲ್ಲಿ ಕೊನೆಗೊಳ್ಳುತ್ತದೆ. ಅಧಿಕೃತವಾಗಿ, ಇದು ಅಮೆರಿಕ-ಮೆಕ್ಸಿಕೊ ಗಡಿಯಲ್ಲಿರುವ ನ್ಯೂವೊ ಲಾರೆಡೊದಲ್ಲಿ ಆರಂಭವಾಗುತ್ತದೆ. ಇದರ ಮೂಲಕ ಉತ್ತರ ಅಮೆರಿಕದಿಂದ ದಕ್ಷಿಣ ಅಮೆರಿಕದವರೆಗೆ 14 ದೇಶಗಳನ್ನು ಹಾದುಹೋಗುತ್ತದೆ.
35
ಸುಮಾರು 19,000 ಮೈಲಿ ಉದ್ದ
ಈ ರಸ್ತೆಯ ವಿಶೇಷತೆ ಎಂದರೆ, ಆರಂಭದಿಂದ ಕೊನೆಯವರೆಗೂ ಒಂದೇ ಸರಳ ರೇಖೆಯಲ್ಲಿ ಹೋಗುತ್ತದೆ. ಇದರಲ್ಲಿ ಒಂದು ಯು-ಟರ್ನ್ ಕೂಡ ಇಲ್ಲ. ಸುಮಾರು 19,000 ಮೈಲಿ ಉದ್ದದ ಈ ಮಾರ್ಗವನ್ನು ಸಂಪೂರ್ಣವಾಗಿ ದಾಟಲು ಪ್ರತಿದಿನ 500 ಕಿ.ಮೀ. ಪ್ರಯಾಣಿಸಿದರೂ 60 ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ.
ಈ ಪ್ಯಾನ್-ಅಮೇರಿಕನ್ ಹೆದ್ದಾರಿ, ಕೆನಡಾ, ಅಮೆರಿಕ, ಮೆಕ್ಸಿಕೊ, ಗ್ವಾಟೆಮಾಲಾ, ಎಲ್ ಸಾಲ್ವಡಾರ್, ಹೊಂಡುರಾಸ್, ನಿಕರಾಗುವಾ, ಕೋಸ್ಟಾ ರಿಕಾ, ಪನಾಮ, ಕೊಲಂಬಿಯಾ, ಈಕ್ವೆಡಾರ್, ಪೆರು, ಚಿಲಿ, ಅರ್ಜೆಂಟೀನಾ ಹೀಗೆ 14 ದೇಶಗಳ ಮೂಲಕ ಹಾದುಹೋಗುತ್ತದೆ. ಪ್ರತಿಯೊಂದು ದೇಶವು ತಮ್ಮ ಭಾಗವನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದೆ.
55
14 ದೇಶಗಳೊಂದಿಗೆ ಒಪ್ಪಂದ
1920 ರ ದಶಕದಲ್ಲಿ ಈ ರಸ್ತೆ ನಿರ್ಮಾಣ ಕಾರ್ಯ ಆರಂಭವಾಯಿತು. ಹಲವು ದೇಶಗಳ ನಡುವೆ ಪ್ರವಾಸೋದ್ಯಮ, ವ್ಯಾಪಾರ, ಸಂಸ್ಕೃತಿಯನ್ನು ಉತ್ತೇಜಿಸಲು ಇದನ್ನು ನಿರ್ಮಿಸಲಾಯಿತು. 1937 ರಲ್ಲಿ 14 ದೇಶಗಳು ಒಪ್ಪಂದ ಮಾಡಿಕೊಂಡು ನಿರ್ವಹಣೆಯಲ್ಲಿ ತೊಡಗಿದವು. 1960 ರಲ್ಲಿ ಸಂಪೂರ್ಣವಾಗಿ ಸಾರ್ವಜನಿಕ ಬಳಕೆಗೆ ತೆರೆಯಲಾಯಿತು. ಇಂದು, ವಿಶ್ವದ ಅತಿ ಉದ್ದದ ಹೆದ್ದಾರಿಯಾಗಿ ಪ್ಯಾನ್-ಅಮೇರಿಕನ್ ಹೆದ್ದಾರಿ ಪ್ರವಾಸಿಗರಿಗೆ ಮತ್ತು ಸಂಶೋಧಕರಿಗೆ ಆಶ್ಚರ್ಯಕರವಾಗಿದೆ.