ಮೊರೊಕ್ಕೋದಿಂದ 60,000ಕ್ಕೂ ಹೆಚ್ಚು ವಲಸಿಗರು ಏಕಾಏಕಿ ಸಮುದ್ರ ಮಾರ್ಗದ ಮೂಲಕ ಉತ್ತರ ಆಫ್ರಿಕಾದಲ್ಲಿರುವ ಸ್ಪೇನ್ ನಿಯಂತ್ರಣದ ಪುಟ್ಟ ನಗರ ಸೆಯುಟಾಗೆ ನುಗ್ಗಿದ್ದಾರೆ. ಇಷ್ಟೆಲ್ಲ ಆತಂಕ ಎದುರಾಗಿದ್ರೂ ಸ್ಪೇನ್ ಸರ್ಕಾರ ನುಸುಳುಕೋರರನ್ನ ಗಡಿಪಾರು ಮಾಡುವಂತಿಲ್ಲ ಏಕೆ?
ಮೊರೊಕ್ಕೋದಿಂದ 60,000ಕ್ಕೂ ಹೆಚ್ಚು ವಲಸಿಗರು ಏಕಾಏಕಿ ಸಮುದ್ರ ಮಾರ್ಗದ ಮೂಲಕ ಉತ್ತರ ಆಫ್ರಿಕಾದಲ್ಲಿರುವ ಸ್ಪೇನ್ ನಿಯಂತ್ರಣದ ಪುಟ್ಟ ನಗರ ಸೆಯುಟಾಗೆ ನುಗ್ಗಿದ್ದು, ಯುರೋಪ್‌ನಲ್ಲಿ ಮತ್ತೊಂದು ವಲಸೆ ಬಿಕ್ಕಟ್ಟಿನ ಆತಂಕ ಸೃಷ್ಟಿಸಿದೆ. ಈ ಮಹಾ ವಲಸೆ ನಿಯಂತ್ರಿಸಲು ಸ್ಪೇನ್ ಸರ್ಕಾರ ಇದೀಗ ಸೇನೆ ನಿಯೋಜಿಸಿದೆ. ವಲಸಿಗರ ನೋಂದಣಿಗಾಗಿ ಸಹಾಯ ಕೇಂದ್ರಗಳನ್ನೂ ಸ್ಥಾಪಿಸಲಾಗಿದೆ.
27
ಸ್ಪೇನ್ ಮಹಾ ವಲಸೆ
ತರಾಜಲ್ ಬೀಚ್ ಮತ್ತು ಫನೈಟ್ ನಗರಗಳಿಂದ ಸಮುದ್ರದಲ್ಲಿ ಈಜಿಕೊಂಡು ಬಂದ ಸಾವಿರಾರು ಜನರು ಸೆಯುಟಾ ನಗರದ ಗಡಿ ಬೇಲಿಗಳನ್ನು ಮುರಿದು ಒಳನುಗ್ಗುತ್ತಿದ್ದಾರೆ. ಈ ವಲಸೆ ಪ್ರಯತ್ನದ ವೇಳೆ 41 ಮಂದಿ ಸಮುದ್ರದಲ್ಲಿ ಕೊಚ್ಚಿಹೋಗಿದ್ದಾರೆ ಎನ್ನಲಾಗಿದೆ.
37
ಸ್ಪೇನ್‌ಗೆ ನುಗ್ಗಿದ ವಲಸಿಗರು: ಯುರೋಪ್‌ಗೆ ಆತಂಕ ಸೃಷ್ಟಿ
ಈ ಬೆಳವಣಿಗೆ ಈಗಾಗಲೇ ವಲಸಿಗರ ಸಮಸ್ಯೆಯಿಂದ ಹೈರಾಣಾಗಿರುವ ಯುರೋಪ್‌ನಲ್ಲಿ ಆತಂಕ ಸೃಷ್ಟಿಸಿದೆ. ಸೆಯುಟಾವನ್ನು ದಾರಿ ಮಾಡಿಕೊಂಡು ತಮ್ಮ ದೇಶಕ್ಕೂ ವಲಸಿಗರು ಕಾಲಿಡುವ ಆತಂಕ ಹಿನ್ನೆಲೆಯಲ್ಲಿ ನೆರೆಯ ಇಟಲಿಯು ಸ್ಪೇನ್ ಅನ್ನು ಐರೋಪ್ಯ ಒಕ್ಕೂಟದ ಮುಕ್ತ ಸಂಚಾರ ವಲಯದಿಂದ ಕೈಬಿಡಲು ಆಗ್ರಹಿಸಿದೆ. ಫಿನ್‌ಲೆಂಡ್ ಕೂಡ ಅದನ್ನು ಬೆಂಬಲಿಸಿದೆ. ಸ್ಪೇನ್ ಜತೆಗಿನ ಗಡಿಗಳನ್ನು ಫ್ರಾನ್ಸ್ ಬಂದ್ ಮಾಡಿದೆ.
ಸಿಯುಟಾ ನಗರದ ಜನಸಂಖ್ಯೆ 84000ದಷ್ಟಿದೆ. ಆದರೆ ಇದೀಗ ಒಂದೇ ದಿನ 60000 ಅಕ್ರಮ ವಲಸಿಗರು ದೇಶದೊಳಗೆ ನುಗ್ಗಿದ್ದಾರೆ. ಜೊತೆಗೆ ಅಕ್ರಮ ವಲಸಿಗರ ತಡೆಗೆ ನಿಯೋಜಿತ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಅವರನ್ನು ಓಡಿಸಿದ್ದಾರೆ.
57
ಸೆಯುಟಾಗೆ ವಲಸಿಗರು ನುಗ್ಗಿದ್ದು ಏಕೆ?
ಸೆಯುಟಾವು ಮೊರಕ್ಕೋದ ಉತ್ತರ ಕರಾವಳಿಗೆ ಹೊಂದಿಕೊಂಡಿರುವ ಪುಟ್ಟ ನಗರವಾಗಿದ್ದು, ಸ್ಪೇನ್‌ನಿಂದ ಈ ನಗರವನ್ನು ಗಿಬ್ರಾಲ್ಟರ್ ಜಲಸಂಧಿ ಪ್ರತ್ಯೇಕಿಸುತ್ತದೆ. ಈ ನಗರ ಆಫ್ರಿಕಾದ ಜತೆಗೆ ಯುರೋಪ್ ಹೊಂದಿರುವ ಏಕೈಕ ಭೂ ಗಡಿಯಾಗಿದೆ. ಇದು ಉತ್ತಮ ಭವಿಷ್ಯಕ್ಕಾಗಿ ಯುರೋಪ್‌ಗೆ ತೆರಳು ಬಯಸುವ ಆಫ್ರಿಕಾದ ವಲಸಿಗರಿಗೆ ಸುಲಭದ ರಹದಾರಿಯಾಗಿ ಪರಿಣಮಿಸಿದೆ.
67
ಸೆಯುಟಾ ಯಾವ ದೇಶಕ್ಕೆ ಸೇರಿದ್ದು?
ಸೆಯುಟಾ 1580ರಿಂದಲೂ ಸ್ಪೇನ್ ವಶದಲ್ಲಿದೆ. ಇದರ ಮೇಲೆ ಮೊರಕ್ಕೋ ಹಕ್ಕು ಸಾಧಿಸುತ್ತಾ ಬಂದಿರುವುದು ಒಂದು ಕಡೆಯಾದರೆ, ಮತ್ತೊಂದೆಡೆ ಇತ್ತೀಚೆಗೆ ತನ್ನ ವಿರೋಧಿ ಅಲ್ಜೀರಿಯಾ ಜತೆ ಹೆಚ್ಚುತ್ತಿರುವ ಸ್ಪೇನ್ ಆತ್ಮೀಯತೆ ಮೊರೊಕ್ಕೋ ಕಣ್ಣು ಕೆಂಪಗಾಗಿಸಿದೆ. ಇದೇ ಕಾರಣಕ್ಕೆ ಮೊರೊಕ್ಕೋ ಈ ಮಹಾ ವಲಸೆಗೆ ಪ್ರೋತ್ಸಾಹ ನೀಡಿದೆ ಎನ್ನಲಾಗುತ್ತಿದೆ. ವಲಸಿಗರನ್ನು ಮುಕ್ತವಾಗಿ ಸ್ಪೀಕರಿಸುವ ಸ್ಪೇನ್‌ನ ನಿಯಮದಿಂದಾಗಿ 2021ರಲ್ಲೂ 10,000 ಮಂದಿ ಸೆಯುಟಾಗೆ ಮಹಾ ವಲಸೆ ಬಂದಿದ್ದರು.
77
ಮೊರಕ್ಕೋ ದಿಢೀರ್ ವಲಸೆಗೆ ಕಾರಣವೇನು?
ಸಮುದ್ರ ಮಾರ್ಗವಾಗಿ ದೇಶಕ್ಕೆ ಪ್ರವೇಶ ಮಾಡಿದವರನ್ನು ಏಕಪಕ್ಷೀಯವಾಗಿ ಅವರ ತವರು ದೇಶಕ್ಕೆ ಗಡೀಪಾರು ಮಾಡುವಂತಿಲ್ಲ ಎಂದು ಇತ್ತೀಚೆಗೆ ಸ್ಪೇನ್‌ನ ಸುಪ್ರೀಂಕೋರ್ಟ್‌ನ ಆದೇಶ ನೀಡಿತ್ತು. ಈ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡ ವಲಸಿಗರು ಏಕಾಏಕಿ ಸೆಯುಟಾದೊಳಗೆ ನುಗ್ಗಿದ್ದಾರೆ. ಒಮ್ಮೆ ಸೆಯುಟಾ ಪ್ರವೇಶ ಮಾಡಿದರೆ ಅವರು ಮತ್ತೆ ಸ್ಪೇನ್‌ನಲ್ಲಿ ಆಶ್ರಯ ಕೇಳಬಹುದು. ಹೀಗಾಗಿ ಎಲ್ಲರೂ ಅಲ್ಲಿಗೆ ನುಗ್ಗುತ್ತಿದ್ದಾರೆ.
ಎಚ್ಚರಿಕೆ ಗಂಟೆ:
ಈ ಘಟನೆ ಯುರೋಪ್ ಪಾಲಿಗೆ ಎಚ್ಚರಿಕೆಯ ಗಂಟೆ ಎಂದೇ ಹೇಳಲಾಗುತ್ತಿದೆ. 2015ರ ಮಹಾ ವಲಸೆ ಬಿಕ್ಕಟ್ಟಿನ ಬಳಿಕ ಯುರೋಪ್‌ನ ಸಾಮಾಜಿಕ ರಚನೆಯೇ ಬದಲಾಗಿದೆ. ರಾಜಕೀಯವಾಗಿ ಯುರೋಪ್ ಇದೀಗ ವಿಘಟನೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ