ಜುಕರ್‌ಬರ್ಗ್‌ ಅಲ್ಲ, ಫೇಸ್ಬುಕ್‌ನಲ್ಲಿ ಮೊದಲ ಖಾತೆ ತೆರೆದ ವ್ಯಕ್ತಿ ಇವರೇ ನೋಡಿ!

First Published Aug 15, 2020, 5:44 PM IST

ಸೋಶಿಯಲ್ ಮೀಡಿಯಾಗಳಲ್ಲಿ ಫೇಸ್‌ಬುಕ್ ಇವತ್ತಿಗೂ ಎಲ್ಲರಿಗೂ ಅಚ್ಚುಮೆಚ್ಚು. ಇಂದು ಮಿಲಿಯನ್‌ಗಟ್ಟಲೇ ಮಂದಿ ಫೇಸ್‌ಬುಕ್‌ನಲ್ಲಿದ್ದಾರೆ. ಆದರೆ ಇದರಲ್ಲಿ ಮೊದಲ ಖಾತೆ ತೆರೆದ ವ್ಯಕ್ತಿ ಯಾರೆಂದು ನಿಮಗೆ ಗೊತ್ತಾ? ಈ ಪ್ರಶ್ನೆ ಕೇಳಿದ ಕೂಡಲೇ ಇನ್ಯಾರು, ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ ಅನ್ನೋರೋ ಹೆಚ್ಚು. ಆದರೆ ಫೇಸ್‌ಬುಕ್‌ನಲ್ಲಿ ಮೊದಲ ಖಾತೆ ತೆರೆದ ವ್ಯಕ್ತಿ ಮಾರ್ಕ್ ಜುಕರ್‌ ಬರ್ಗ್‌ ಅಲ್ಲ! ಹಾಗಾದ್ರೆ ಯಾರು? ಇಲ್ಲಿದೆ ವಿವರ

ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ತನ್ನ ರೂಂ ಮೇಟ್ ಹಾಗೂ ಹಾರ್ವರ್ಡ್‌ನ ಗೆಳೆಯನೊಂದಿಗೆ ಸೇರಿ ಇದನ್ನು ನಿರ್ಮಿಸಿದ್ದರು. ಇದು 2004ರಲ್ಲಿ ಆರಂಭವಾಗಿತ್ತು. ಆರಂಭದಲ್ಲಿ ಕಾಲೇಜು ನೆಟ್ವರ್ಕಿಂಗ್ ರೂಪದಲ್ಲಿ ಶುರುವಾಗಿದ್ದ ಇದು, ಅಂದು 'ದ ಫೇಸ್‌ಬುಕ್' ಎಂಬ ಹೆಸರು ಪಡೆದಿತ್ತು.
undefined
ಆದರೆ ಫೇಸ್‌ಬುಕ್ ಹುಟ್ಟು ಹಾಕಿದ ಜುಕರ್‌ಬರ್ಗ್‌ ಇದರಲ್ಲಿ ಖಾತೆ ತೆರೆದ ನಾಲ್ಕನೇ ವ್ಯಕ್ತಿಯಾಗಿದ್ದಾರೆ. ಅವರಿಗಿಂತ ಮೊದಲು ತೆರೆಯಲಲಾದ ಮೂರು ಖಾತೆಗಳು ಕಂಪನಿಯು ಟೆಸ್ಟಿಂಗ್‌ಗಾಗಿ ಓಪನ್ ಮಾಡಿತ್ತು.
undefined
ಎರಿ ಹ್ಯಾಸಿಟ್ ಫೇಸ್‌ಬುಕ್‌ನಲ್ಲಿ ಖಾತೆ ತೆರೆದ ಮೊದಲ ವ್ಯಕ್ತಿ. ಆದರೆ ಅವರು ಫೌಂಡರ್ ಮೆಂಬರ್ ಆಗಿರಲಿಲ್ಲ. ಅವರಿಗೆ ಕೇವಲ ಕೇವಲ ಮಾರ್ಕ್‌ ಜುಕರ್‌ಬರ್ಗ್ ಹಾಗೂ ಸಹ ಸಂಸ್ಥಾಪಕ ಕ್ರಿಸ್‌ ಹ್ಯೂಸ್‌ ಪರಚಯವಿತ್ತು. ಆದರೆ ಅವರ ಖಾತೆ ಟೆಸ್ಟಿಂಗ್‌ಗಾಗಿ ಮೊಟ್ಟ ಮೊದಲು ತೆರೆಯಲಾಗಿತ್ತು.
undefined
ಮೂರು ಟೆಸ್ಟಿಂಗ್ ಖಾತೆ ತೆರೆದ ಬಳಿಕ ಮಾರ್ಕ್ ತಮ್ಮ ಅಕೌಂಟ್ ತೆರೆದಿದ್ದರು. ಇದಾದ ಬಳಿಕ 'ದ ಫೇಸ್‌ಬುಕ್'(ಆರಂಭಿಕ ಹೆಸರು) ಕಾಲೇಜು ಮಾತ್ರವಲ್ಲದೇ ಯೂರೋಪ್‌ನಾದ್ಯಂತ ಫೇಮಸ್ ಆಯ್ತು.
undefined
2004ರಲ್ಲಿ ಸೀನ್ ಪಾರ್ಕರ್ ಈ ಕಂಪನಿಯ ಅಧ್ಯಕ್ಷರಾದರು ಹಾಗೂ ಇದಾದ ಬಳಿಕ 2005ರಲ್ಲಿ ಕಂಪನಿಯ ಹೆಸರು Thefacebook ನಿಂದ ಬದಲಾಯಿಸಿ ಕೇವಲ ಫೇಸ್‌ಬುಕ್ ಎಂದಿಡಲಾಯ್ತು.
undefined
ಇನ್ನು Thefacebook ಡೊಮೇನ್ ಖರೀದಿಸಲು ಮಾರ್ಕ್ ಜುಕರ್‌ಬರ್ಗ್ ಎರಡು ಲಕ್ಷ ಡಾಲರ್ ಪಾವತಿಸಿದ್ದರು. ಯಾಕೆಂದರೆ ಇದು AboutFace Corporation ಬಳಿ ಇತ್ತು.
undefined
2009ರ ಒಂದು ಬೆವ್‌ಸೈಟ್‌ ವರದಿಯನ್ವಯ ಪೇಸ್‌ಬುಕ್ ವಿಶ್ವದ ಅತಿದೊಡ್ಡ ಸೋಶಿಯಲ್ ಮೀಡಿಯಾ ನೆಟ್ವರ್ಕಿಂಗ್ ವೆಬ್‌ಸೈಟ್ ಆಗಿ ಮಾರ್ಪಾಡಾಯಿತು.
undefined
click me!