Trump Dollar: ಡೊನಾಲ್ಡ್ ಟ್ರಂಪ್ ಚಿತ್ರವಿರುವ $1 ನಾಣ್ಯ ಬಿಡುಗಡೆ, ಆದರೆ ಇದರ ಅಸಲಿ ಬೆಲೆ ಬೇರೆಯೇ ಇದೆ!

Published : Sep 03, 2026, 01:18 PM IST

ಅಮೆರಿಕದ ಕಾನೂನು ಪ್ರಕಾರ ಅಧಿಕಾರದಲ್ಲಿರು ವ್ಯಕ್ತಿ, ಜೀವಂತವಿರುವ ವ್ಯಕ್ತಿಯ ಚಿತ್ರವಿರುವ ನಾಣ್ಯ ಬಿಡುಗಡೆ ಮಾಡುವಂತಿಲ್ಲ. ಆದರೆ ಅಮೆರಿಕದಲ್ಲಿ ದೊನಾಲ್ಡ್ ಟ್ರಂಪ್ ಚಿತ್ರವಿರುವ ಒಂದು ಡಾಲರ್ ಮುಖಬೆಲೆಯ ನಾಣ್ಯ ಬಿಡುಗಡೆಯಾಗಿದ್ದು ಭಾರೀ ಸದ್ದು ಮಾಡುತ್ತಿದೆ.

PREV
14
Trump Dollar: ಟ್ರಂಪ್ ಚಿತ್ರವಿರುವ ನಾಣ್ಯ ಬಿಡುಗಡೆ

ಆಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರ ಚಿತ್ರವಿರುವ ಹೊಸ ನಾಣ್ಯವೊಂದು ಬಿಡುಗಡೆಯಾಗಿರುವ ಸುದ್ದಿ ಭಾರಿ ಸದ್ದು ಮಾಡುತ್ತಿದೆ. ಒಂದು ಡಾಲರ್ ಮುಖಬೆಲೆಯ ಈ ನಾಣ್ಯ ಇದೀಗ ಚಲಾವಣೆಗೆ ಸಿದ್ಧವಾಗಿದೆ. ಟ್ರಂಪ್ ಚಿತ್ರವಿರುವ ಒಂದು ಡಾಲರ್ ಬೆಲೆ ಮತ್ತು ವಿನ್ಯಾಸದ ಬಗ್ಗೆ ಜಾಗತಿಕವಾಗಿ ಚರ್ಚೆ ಹುಟ್ಟುಹಾಕಿದೆ. ಈ ನಾಣ್ಯದ ಕಾನೂನುಬದ್ಧ ಮೌಲ್ಯ ಕೇವಲ ಒಂದು ಡಾಲರ್ ($1) ಆದರೂ, ಇದನ್ನು ಕೊಳ್ಳಲು ಜನರು ಹೆಚ್ಚು ಹಣ ನೀಡಬೇಕಾಗಿದೆ!

24
ಟ್ರಂಪ್ ಚಿತ್ರವಿರುವ ನಾಣ್ಯದ ವಿಶೇಷತೆ ಏನು?

ಈ ವಿಶೇಷ ನಾಣ್ಯವನ್ನು ಯುಎಸ್ ಮಿಂಟ್‌ನಿಂದ ಬಿಡುಗಡೆ ಮಾಡಲಾಗಿದೆ ಎಂದು ವರದಿಗಳು ಹೇಳುತ್ತಿವೆ. ಆದರೆ ವಿಚಿತ್ರವೆಂದರೆ ನಾಣ್ಯ ಬಿಡುಗಡೆಯಾಗಿದ್ದರೂ ಇದನ್ನು ಸಾಮಾನ್ಯ ಚಲಾವಣೆಗೆ ಇನ್ನೂ ಬಿಟ್ಟಿಲ್ಲ. ಬದಲಾಗಿ, ಸಂಗ್ರಹಕಾರರಿಗಾಗಿ (collectors) ಮತ್ತು ಟ್ರಂಪ್ ಬೆಂಬಲಿಗರಿಗಾಗಿ ವಿಶೇಷ ದರದಲ್ಲಿ ಮಾರಾಟ ಮಾಡಲಾಗುತ್ತಿದೆ! ಇದು ಒಂದು ರೀತಿಯಲ್ಲಿ ಸ್ಮರಣಾರ್ಥ ನಾಣ್ಯದಂತೆ ಕಾಣುತ್ತಿದೆ.

34
ನಾಣ್ಯದ ಬೆಲೆ $1 ಆದರೆ ಇದನ್ನ ಖರೀದಿಸುವುದು ದುಬಾರಿ!

ಈ ನಾಣ್ಯದ ಬೆಲೆ ಕೇಳಿದರೆ ನೀವು ಅಚ್ಚರಿ ಪಡಬಹುದು. ಒಂದೇ ಒಂದು ನಾಣ್ಯವನ್ನು ಅದರ ಮುಖಬೆಲೆಗೆ ಮಾರಾಟ ಮಾಡುತ್ತಿಲ್ಲ. ಬದಲಾಗಿ, 25 ನಾಣ್ಯಗಳ ಒಂದು ರೋಲ್ ಅನ್ನು ಬರೋಬ್ಬರಿ 61 ಡಾಲರ್‌ಗಳಿಗೆ ($61) ಮಾರಾಟ ಮಾಡಲಾಗುತ್ತಿದೆ. ಅಂದರೆ, ಪ್ರತಿ ನಾಣ್ಯಕ್ಕೆ ಸುಮಾರು $2.44 ಬೀಳುತ್ತದೆ.ಅಷ್ಟೇ ಅಲ್ಲ, 100 ನಾಣ್ಯಗಳಿರುವ ಬ್ಯಾಗ್‌ ಒಂದನ್ನು ಖರೀದಿಸುವುದಾದರೆ, ಅದಕ್ಕೆ 154.50 ಡಾಲರ್ ($154.50) ಬೆಲೆ ನಿಗದಿಪಡಿಸಲಾಗಿದೆ. ಈ ಲೆಕ್ಕಾಚಾರದಲ್ಲಿ ಪ್ರತಿ ನಾಣ್ಯಕ್ಕೆ ಸುಮಾರು $1.55 ತಗಲುತ್ತದೆ. ಮುಖಬೆಲೆಗಿಂತ ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತಿದ್ದರೂ, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂಬುದು ಅಚ್ಚರಿ.

44
ಈ ನಾಣ್ಯ ಬಿಡುಗಡೆ ಬಗ್ಗೆ ಒಂದು ಗಂಭೀರ ಪ್ರಶ್ನೆ ಹುಟ್ಟು ಹಾಕಿದೆ

ಈ ನಾಣ್ಯದ ಬಿಡುಗಡೆಯು ಒಂದು ಗಂಭೀರ ಪ್ರಶ್ನೆ ಹುಟ್ಟುಹಾಕಿದೆ. ಸಾಮಾನ್ಯವಾಗಿ, ಅಮೆರಿಕದ ಕಾನೂನಿನ ಪ್ರಕಾರ ಅಧಿಕಾರದಲ್ಲಿರುವ ಅಥವಾ ಜೀವಂತವಿರುವ ಅಧ್ಯಕ್ಷರ ಚಿತ್ರವನ್ನು ಕರೆನ್ಸಿ ಅಥವಾ ನಾಣ್ಯಗಳ ಮೇಲೆ ಮುದ್ರಿಸುವಂತಿಲ್ಲ. ಹೀಗಿರುವಾಗ ಟ್ರಂಪ್ ಅವರ ಚಿತ್ರವಿರುವ ನಾಣ್ಯ ಹೇಗೆ ಬಿಡುಗಡೆಯಾಯಿತು ಎಂಬುದು ಕುತೂಹಲಕಾರಿ ಸಂಗತಿಯಾಗಿದೆ. ಬಹುಶಃ ಇದು ಅಧಿಕೃತ ಚಲಾವಣೆಯ ನಾಣ್ಯವಲ್ಲದೆ, ಕೇವಲ ಸ್ಮರಣಿಕೆ ಅಥವಾ ಸಂಗ್ರಹಯೋಗ್ಯ ವಸ್ತುವಾಗಿರುವುದರಿಂದ ಈ ನಿಯಮ ಅನ್ವಯವಾಗುವುದಿಲ್ಲ ಎನ್ನಲಾಗುತ್ತಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories