ಕೊರೋನಾ ಹೆಚ್ಚಾದ ಕಾರಣ ಕೆಲವು ದೇಶಗಳು ಎರಡನೇ ಸಾರಿ ಲಾಕ್ ಡೌನ್ ಘೋಷಣೆ ಮಾಡಿವೆ.
ರೋಬೋಟ್ ಗಳನ್ನು ಬಳಸಿ, ಡ್ರೋಣ್ ಗಳನ್ನು ಬಳಸಿ ಕೊರೋನಾ ಸೋಂಕಿತ ಝೋನ್ ಗಳನ್ನು ಸಾನಿಟೈಸ್ ಮಾಡಿದ್ದನ್ನು ನೋಡಿದ್ದೇವೆ.
ಅಮೆರಿಕದ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಈಗ ಹೊಸ ಸಂಶೋಧನೆಯೊಂದನ್ನು ಮುಂದೆ ಇಟ್ಟಿದೆ.
SARS-CoV-2 ಸೇರಿದಂತೆ ಕೊರೋನಾ ವೈರಸ್ ನ್ನು ಅಲ್ಟ್ರಾಸೌಂಡ್ ವೈಬ್ರೇಶನ್ ನಿಂದ ನಿಯಂತ್ರಣಕ್ಕೆ ತರಬಹುದು ಎಂದು ಹೇಳಿದೆ.
ಸರಿಯಾದ ಫ್ರಿಕ್ವೆನ್ಸಿಯಲ್ಲಿ ವೈದ್ಯಕೀಯ ಆಧಾರದಲ್ಲಿ ಶಬ್ದ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದೆ.
25 ರಿಂದ 100 ಮೇಗಾಹರ್ಟ್ ವೈಬ್ರೇಶನ್ ಕೊರೋನಾದ ಸೆಲ್ ಗಳನ್ನು ನಾಶಮಾಡುತ್ತದೆ ಎಂದು ಸಂಶೋಧನೆ ಹೇಳಿದೆ.
ಪ್ರಾಥಮಿಕ ಮಾಹಿತಿಗಳ ಆಧಾರದಲ್ಲಿ ವರದಿ ನೀಡಲಾಗಿದ್ದು ಇನ್ನು ಹೆಚ್ಚಿನ ಸಂಶೋಧನೆ ನಡೆಸಲಾಗುವುದು ಎಂದು ತಿಳಿಸಲಾಗಿದೆ.