ಉತ್ಖನನದ ವೇಳೆ ಸಿಕ್ತು ಪ್ರಾಣಿಗಳ ಸ್ಮಶಾನ: 2 ಸಾವಿರ ವರ್ಷ ನೆಲದಡಿ ಅಡಗಿತ್ತು ರಹಸ್ಯ!

Published : Mar 02, 2021, 04:22 PM IST

ಪುರಾತತ್ವ ಇಲಾಖೆಯವರು ಉತ್ಖನನದ ವೇಳೆ ಹಳೆಯ ನಾಗರೀಕತೆಗಳನ್ನು ಪತ್ತೆ ಹಚ್ಚುತ್ತಾರೆ. ಹೀಗೆ ಉತ್ಖನನದ ವೇಳೆ ಹಳೇ ಕಾಲದ ಅನೇಕ ರಹಸ್ಯಗಳೂ ಬಹಿರಂಗಗೊಳ್ಳುತ್ತವೆ. ಹೀಗಿರುವಾಗ ಈಜಿಪ್ಟ್‌ನಲ್ಲಿ ನಡೆಯುತ್ತಿರುವ ಉತ್ಖನನದ ವೇಳೆ ಪುರಾತತ್ವ ಇಲಾಖೆಗೆ ಒಂದೇ ಸ್ಥಳದಿಂದ 600 ಶವಗಳು ಸಿಕ್ಕಿವೆ. ಆದರೆ ಇದು ಮಾನವನ ಮೃತದೇಹಗಳಾಗಿರಲಿಲ್ಲ. ಬದಲಾಗಿ ಇದೊಂದು ಪ್ರಾಣಿಗಳ ಸ್ಮಶಾನವಾಗಿತ್ತು. ಹೌದು ಈ ಸ್ಮಶಾನದಲ್ಲಿ ಪ್ರಾಣಿಗಳು ಸಂಪ್ರದಾಯದಂತೆ ಮಣ್ಣು ಮಾಡಲಾಗುತ್ತಿತ್ತು. ಲಭ್ಯವಾದ ಪ್ರಾಣಿಗಳ ಮೃತದೇಹದ ಕುರುಹು ಕಂಡು ಅನುಮಾನಿಸಲಾಗಿದೆ. ಇಷ್ಟೇ ಅಲ್ಲದೇ ಈ ಸಂದರ್ಭದಲ್ಲಿ ಅಅನೇಕ ಶಾಕಿಂಗ್ ರಹಸ್ಯಗಳೂ ಬಯಲಾಗಿವೆ.

PREV
16
ಉತ್ಖನನದ ವೇಳೆ ಸಿಕ್ತು ಪ್ರಾಣಿಗಳ ಸ್ಮಶಾನ: 2 ಸಾವಿರ ವರ್ಷ ನೆಲದಡಿ ಅಡಗಿತ್ತು ರಹಸ್ಯ!

ಈಜಿಪ್ಟ್‌ನ ಪುರಾತತ್ವ ಇಲಾಖೆ ಪತ್ತೆ ಹಚ್ಚಿದ ಈ ಸ್ಮಶಾನ ಅತ್ಯಂತ ಹಳೆಯದ್ದೆಂದು ಹೇಳಲಾಗಿದೆ. ಆದರೆ ಇದು ಮನುಷ್ಯರನ್ನು ಹೂಳುತ್ತಿದ್ದ ಸ್ಮಶಾನವಲ್ಲ, ಪ್ರಾಣಿಗಳನ್ನು ಹೂಳುತ್ತಿದ್ದ ಸ್ಮಶಾನವಾಗಿದೆ.

26

ತಜ್ಞರು ಈವರೆಗಿನ ಉತ್ಖನನದಲ್ಲಿ ಒಟ್ಟು 600 ಪ್ರಾಣಿಗಳ ಮೃತದೇಹದ ಕುರುಹು ಪತ್ತೆ ಹಚ್ಚಿದ್ದಾರೆ. ಇದರಲ್ಲಿ ನಾಯಿ, ಬೆಕ್ಕು ಹಾಗೂ ಮಂಗಗಳ ಮೃತದೇಹಗಳಿವೆ. ಇಲ್ಲಿ ಅನೇಕ ಪ್ರಾಣಿಗಳ ಕತ್ತಿನಲ್ಲಿ ಕಾಲರ್ ಹಾಗೂ ಪಟ್ಟಿಗಳು ಸಿಕ್ಕಿವೆ.

36

ಆರಂಭದಲ್ಲಿ ಈ ಮೃತದೇಹದ ಕುರುಹು ಕಂಡು ಬಹುಶಃ ಹಳೇ ಕಾಲದಲ್ಲಿ ಇಲ್ಲಿ ಬಲಿ ಅರ್ಪಿಸಿರಬಹುದೆಂಬ ಅನುಮಾನ ವ್ಯಕ್ತಪಡಿಸಲಾಗಿತ್ತು. ಆದರೆ ಮತ್ತಷ್ಟು ಅಧ್ಯಯನ ನಡೆಸಿದಾಗ ಅನುಮಾನ ನಿಜವಲ್ಲ ಎಂಬುವುದು ಸಾಬೀತಾಗಿದೆ.

46

ಇನ್ನು ಪತ್ತೆ ಹಚ್ಚಲಾದ ಪ್ರಾಣಿಗಳ ಮೃತದೇಹದ ಕುರುಹುಗಳಿಂದ ಇವೆಲ್ಲವೂ ಬಹಳ ವೃದ್ಧ ಪ್ರಾಣಿಗಳೆಂಬುವುದು ಸಾಬೀತಾಗಿದೆ. ಇವೆಲ್ಲವೂ ವಯಸ್ಸಾಗಿ ಹಾಗೂ ಅನಾರೋಗ್ಯದಿಂದ ಮೃತಪಟ್ಟ ಪ್ರಾಣಿಗಳಾಗಿವೆ. ಹೀಗಿರುವಾಗ ಹಳೇ ಕಾಲದಲ್ಲಿ ಜನರು ತಾವು ಸಾಕಿದ್ದ ಪ್ರಾಣಿಗಳನ್ನು ಸಂಪ್ರದಾಯಬದ್ಧವಾಗಿ ಮಣ್ಣು ಮಾಡುತ್ತಿದ್ದರೆಂಬುವುದು ತಿಳಿದು ಬಂದಿದೆ.

56

ಹಳೇ ವಸ್ತುಗಳನ್ನು ಪತ್ತೆ ಹಚ್ಚುವ Marta Osypinska ಹಾಗೂ ಅವರ ಪತಿ Piotr, 2011 ರಲ್ಲಿ ಈ ಜಮೀನನ್ನು ಪತ್ತೆ ಹಚ್ಚಿದ್ದರು. ಅಂದು ಇಲ್ಲಿ ಬಲಿ ಅರ್ಪಿಸಲಾಗುತ್ತಿತ್ತೆಂದು ಅನುಮಾನಿಸಲಾಗಿತ್ತು. ಆದರೆ ಬಳಿಕ ನಡೆದ ಅಧ್ಯಯನದಲ್ಲಿ ಸುಳ್ಳೆಂದು ಸಾಬೀತಾಗಿತ್ತು.

66

ಈ ಸ್ಮಶಾನದಲ್ಲಿ ಬೆಕ್ಕಿನ ಮೃತದೇಹದ ಕುರುಹು ಭಾರೀ ಪ್ರಮಾಣದಲ್ಲಿ ಪತ್ತೆಯಾಗಿದೆ. 600ರಲ್ಲಿ ಒಟ್ಟು 100 ಮೃತದೇಹಗಳು ಬೆಕ್ಕಿನದ್ದಾಗಿವೆ. ಈಜಿಪ್ಟ್‌ನಲ್ಲಿ ಬೆಕ್ಕನ್ನು ಬಹಳ ಶುಭ ಎಂದು ಪರಿಗಣಿಸಲಾಗುತ್ತದೆ.  

click me!

Recommended Stories