ಉಕ್ರೇನಿಯನ್ ಈ ಪ್ರತಿದಾಳಿಗೆ ಮುನ್ನ, ರಷ್ಯಾ ಭಾನುವಾರದ ರಾತ್ರಿ ಉಕ್ರೇನ್‌ನ ವಿವಿಧ ಪ್ರದೇಶಗಳ ಮೇಲೆ 109 ಡ್ರೋನ್‌ಗಳು ಮತ್ತು 5 ಕ್ಷಿಪಣಿಗಳನ್ನು ಉಡಾಯಿಸಿತ್ತು ಎಂದು ಉಕ್ರೇನ್ ವಾಯುಪಡೆ ಮಾಹಿತಿ ನೀಡಿದೆ. ಯುದ್ಧದ ನಡುವೆಯೇ, ರಷ್ಯಾ ಮತ್ತು ಉಕ್ರೇನ್ ಸೋಮವಾರ ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ಶಾಂತಿ ಮಾತುಕತೆ ನಡೆಸಲಿವೆ ಎಂದು ಅಧಿಕೃತ ಘೋಷಣೆ ಬಂದಿದ್ದರೂ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ದಾಳಿ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಮತ್ತಷ್ಟು ಬಿಗಡಾಯಿಸಿ, ಆಂತರಿಕ ಬದಲಾವಣೆಗಳಿಗೆ ದಾರಿ ಮಾಡಬಹುದು. ಸೈಬೀರಿಯಾದಂತಹ ಅತ್ಯಂತ ಒಳನಾಡಿನ ಪ್ರದೇಶದಲ್ಲೂ ಸುರಕ್ಷತೆ ನೆಲೆಗೊಳ್ಳದಿರುವುದು ರಷ್ಯಾ ಸೇನೆಗೆ ತೀವ್ರ ಆತಂಕದ ವಿಷಯವಾಗಿದೆ.