ನಾಲ್ಕು ದಿನಗಳ ಕದನ ವಿರಾಮ ಒಪ್ಪಂದವು ಸೋಮವಾರ ಮಧ್ಯರಾತ್ರಿ ಮುಕ್ತಾಯಗೊಳ್ಳಲಿದೆ. ಈ ಅವಧಿಯಲ್ಲಿ ಇಸ್ರೇಲ್‌ನಲ್ಲಿರುವ 150 ಪ್ಯಾಲೆಸ್ತೀನ್ ಕೈದಿಗಳಿಗೆ ಬದಲಾಗಿ ಹಮಾಸ್ ಒಟ್ಟು 50 ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಇಸ್ರೇಲ್ - ಹಮಾಸ್ ಯುದ್ಧ ಸುಮಾರು 50 ದಿನಗಳಿಂದ ನಡೆಯುತ್ತಿದೆ. ಕತಾರ್ ಮಧ್ಯಸ್ಥಿಕೆಯಿಂದ ಈ ಯುದ್ಧಕ್ಕೆ 4 ದಿನಗಳ ಕದನ ವಿರಾಮವೂ ಜಾರಿಯಲ್ಲಿದೆ.
210
ಈ ಹಿನ್ನೆಲೆ ಯುದ್ಧ ಅಂತ್ಯವಾಗಬಹುದೇನೋ ಎಂಬ ಆಶಾವಾದ ಹಲವರಲ್ಲಿದೆ. ಆದರೆ, ಯುದ್ಧ ಮುಂದುವರಿಯುತ್ತದೆ. ಗೆಲ್ಲೋವರೆಗೆ ನಾವು ಅದನ್ನು ನಿಲ್ಸಲ್ಲ ಎಂದು ಇಸ್ರೇಲ್ ಪ್ರಧಾನಿ ಸಾರಿದ್ದಾರೆ. ಅದೂ ಶತ್ರು ನೆಲ ಗಾಜಾದಲ್ಲೇ.
310
ಹೌದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಯುದ್ಧ ಪ್ರಾರಂಭವಾದ ನಂತರ ಮೊದಲ ಬಾರಿಗೆ ಭಾನುವಾರ ಗಾಜಾಕ್ಕೆ ಭೇಟಿ ನೀಡಿದ್ದಾರೆ. ಈ ಮೂಲಕ ಎರಡು ದಶಕಗಳಲ್ಲಿ ಗಾಜಾ ಪಟ್ಟಿಗೆ ಭೇಟಿ ನೀಡಿದ ಇಸ್ರೇಲ್‌ನ ಮೊದಲ ಪ್ರಧಾನಿ ಎನಿಸಿಕೊಂಡಿದ್ದಾರೆ.
410
ಅಕ್ಟೋಬರ್ 7 ರಂದು ಯುದ್ಧ ಪ್ರಾರಂಭವಾದ ನಂತರ ಮೊದಲ ಬಾರಿಗೆ ಮೊದಲ ಬಾರಿಗೆ ಇಸ್ರೇಲ್‌ನಿಂದ ಹೊರಗೆ ಕಾಲಿಟ್ಟಿರೋ ಇಸ್ರೇಲ್ ಪ್ರಧಾನಿ ಯುದ್ಧದಲ್ಲಿ ಗೆಲ್ಲೋವರೆಗೆ ಹಾಗೂ ಅದು ಮುಗಿಯೋವರೆಗೆ ಮುಂದುವರಿಯುತ್ತೇವೆ ಎಂದೂ ಹೇಳಿದ್ದಾರೆ. ಈ ಬಗ್ಗೆ ಇಸ್ರೇಲ್ ಪ್ರಧಾನಿ ಕಚೇರಿ ಇಂಟರ್‌ನೆಟ್‌ನಲ್ಲಿ ವಿಡಿಯೋ ತುಣುಕನ್ನು ಅಪ್ಲೋಡ್ ಮಾಡಿದೆ.
510
ಯಾವುದೂ ನಮ್ಮನ್ನು ತಡೆಯುವುದಿಲ್ಲ, ಮತ್ತು ಯುದ್ಧದ ಎಲ್ಲಾ ಗುರಿಗಳನ್ನು ಸಾಧಿಸುವ ಶಕ್ತಿ, ಇಚ್ಛೆ ಮತ್ತು ನಿರ್ಣಯವನ್ನು ನಾವು ಹೊಂದಿದ್ದೇವೆ ಎಂದು ನಮಗೆ ಮನವರಿಕೆಯಾಗಿದೆ ಮತ್ತು ನಾವು ಮಾಡುತ್ತೇವೆ ಎಂದೂ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
610
ಇಸ್ರೇಲ್ 2005 ರಲ್ಲಿ ಗಾಜಾದಿಂದ ತನ್ನ ಗಡಿಯನ್ನು ಹಿಂತೆಗೆದುಕೊಂಡಿದ್ದ ಇಸ್ರೇಲ್ ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಗಡಿಗೆ ಮರಳಿತ್ತು. ಅಲ್ಲದೆ, ತನ್ನ 21 ವಸಾಹತುಗಳನ್ನು ನಾಶಪಡಿಸಿತು ಮತ್ತು ಕರಾವಳಿ ಎನ್‌ಕ್ಲೇವ್‌ನ ನಿಯಂತ್ರಣವನ್ನು ಪ್ಯಾಲೆಸ್ತೀನ್ ಅಥಾರಿಟಿ (PA) ಗೆ ಹಸ್ತಾಂತರಿಸಿತು.
710
ಆದರೆ 2007 ರಲ್ಲಿ ಪ್ಯಾಲೆಸ್ತೀನ್ ಅಥಾರಿಟಿಯ ಫತಾಹ್ ಪಕ್ಷವನ್ನು ರಕ್ತಸಿಕ್ತ ದಂಗೆಯಲ್ಲಿ ಎನ್‌ಕ್ಲೇವ್‌ನಿಂದ ಹೊರಹಾಕಲಾಯಿತು. ಆ ನಂತರ, ಗಾಜಾ ಯುದ್ಧದಲ್ಲಿ ನಾಲ್ಕು ದಿನಗಳ ವಿರಾಮದ ನಡುವೆ ಇಸ್ರೇಲ್ ಪ್ರಧಾನಿ ಮೊದಲ ಬಾರಿಗೆ ಗಾಜಾಗೆ ಭೇಟಿ ನೀಡಿದ್ದಾರೆ.
810
ಅಭೂತಪೂರ್ವ ಅಕ್ಟೋಬರ್ 7 ರ ಉಗ್ರರ ದಾಳಿಯಲ್ಲಿ ದಕ್ಷಿಣ ಇಸ್ರೇಲ್‌ನಿಂದ ಸುಮಾರು 240 ಬಂಧಿತರನ್ನು ಹಮಾಸ್ ಒತ್ತೆಯಾಳಾಗಿ ತೆಗೆದುಕೊಂಡಿತು. ಮತ್ತು ಸುಮಾರು 1,200 ಜನರನ್ನು ಕೊಂದಿದ್ದರು. ಅವರಲ್ಲಿ ಹೆಚ್ಚಿನವರು ನಾಗರಿಕರು ಎಂದು ಇಸ್ರೇಲಿ ಅಧಿಕಾರಿಗಳು ತಿಳಿಸಿದ್ದರು.
910
ಬಳಿಕ, ಹಮಾಸ್ ಅನ್ನು ತೊಡೆದುಹಾಕಲು ಇಸ್ರೇಲ್ ಪ್ರತಿಜ್ಞೆ ಮಾಡಿದೆ ಮತ್ತು ವೈಮಾನಿಕ ಬಾಂಬ್ ದಾಳಿ ಹಾಗೂ ಗಾಜಾದ ಮೇಲೆ ಸೇನಾ ಆಕ್ರಮಣವನ್ನು ಪ್ರಾರಂಭಿಸಿತು ಮತ್ತು 15,000 ಕ್ಕೂ ಹೆಚ್ಚು ಜನರನ್ನು ಕೊಂದಿದೆ ಎಂದು ಹಮಾಸ್ ಹೇಳಿದೆ.
1010
ನಾಲ್ಕು ದಿನಗಳ ಕದನ ವಿರಾಮ ಒಪ್ಪಂದವು ಸೋಮವಾರ ಮಧ್ಯರಾತ್ರಿ ಮುಕ್ತಾಯಗೊಳ್ಳಲಿದೆ. ಈ ಅವಧಿಯಲ್ಲಿ ಇಸ್ರೇಲ್‌ನಲ್ಲಿರುವ 150 ಪ್ಯಾಲೆಸ್ತೀನ್ ಕೈದಿಗಳಿಗೆ ಬದಲಾಗಿ ಹಮಾಸ್ ಒಟ್ಟು 50 ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.