ಮಾಲಿನ್ಯ, ತ್ಯಾಜ್ಯ ನಿರ್ವಹಣೆ ಎಲ್ಲೆಡೆ ಒಂದೇ ರೀತಿ ಇರಲ್ಲ. ಆದರೆ ಜನರು ಶುದ್ಧ ಗಾಳಿ, ಉತ್ತಮ ತ್ಯಾಜ್ಯ ನಿರ್ವಹಣೆ, ಸುರಕ್ಷಿತ ನೈರ್ಮಲ್ಯ ಹೊಂದಿರುವ ಸ್ಥಳಗಳಲ್ಲಿ ವಾಸಿಸಲು ಇಷ್ಡಪಡುತ್ತಾರೆ.
ಯೇಲ್, ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ವಿಶ್ವ ಆರ್ಥಿಕ ವೇದಿಕೆಗಳು ಪರಿಸರ ಕಾರ್ಯಕ್ಷಮತೆ ಸೂಚ್ಯಂಕ (EPI) ರಚಿಸಿವೆ. ಈ ಸೂಚ್ಯಂಕ ಪರಿಸರದ ಚೈತನ್ಯ, ಹವಾಮಾನ ಬದಲಾವಣೆ ಮತ್ತು ಪರಿಸರ ಆರೋಗ್ಯದ ಮೇಲೆ ಕೇಂದ್ರೀಕರಿಸುತ್ತದೆ. 11 ಗುಂಪುಗಳಾಗಿ ವರ್ಗೀಕರಿಸಲಾದ 40 ಗುಣಲಕ್ಷಣಗಳ ಆಧಾರದ ಮೇಲೆ ದೇಶಗಳನ್ನು ಮೌಲ್ಯಮಾಪನ ಮಾಡುತ್ತದೆ.