ನರಕಕ್ಕಿಂತ ಕಡಿಮೆ ಇಲ್ಲ ಅಫ್ಘಾನಿಸ್ತಾನ, ದೇಶ ಬಿಡಲು ಬಯಸುವ ಭಾರತೀಯರು ಕೂಡಲೇ ಸಂಪರ್ಕಿಸಿ!

First Published Aug 10, 2021, 5:01 PM IST

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಪ್ರಾಬಲ್ಯ ದಿನೇ ದಿನೇ ಹೆಚ್ಚುತ್ತಿದ್ದು, ಭಾರೀ ಆತಂಕ ಸೃಷ್ಟಿಸಿದೆ. ತಾಲಿಬಾನ್ ಆಡಳಿತ ವೈಖರಿ, ಮಾನವ ನಾಗರೀಕತೆ ಬಹಳ ಕೆಟ್ಟದಾಗಿದೆ. ಅಫ್ಘಾನಿಸ್ತಾನದ ಪರಿಸ್ಥಿತಿ ಪ್ರಸ್ತುತ ನರಕಕ್ಕಿಂತ ಕೆಟ್ಟದಾಗಿದೆ. ಜನರ ಮನೆ ನಾಶಗೊಂಡಿವೆ, ತಿನ್ನಲು ಅಥವಾ ಮಲಗಲು ಸ್ಥಳವಿಲ್ಲ. ಇವೆಲ್ಲಕ್ಕಿಂತಲೂ ಮಿಗಿಲಾಗಿ ಸಾವಿನ ಭಯ ಕಾಡುತ್ತಿದೆ. ಏತನ್ಮಧ್ಯೆ, ಪ್ರಪಂಚದಾದ್ಯಂತದ ದೇಶಗಳು ತಮ್ಮ ನಾಗರಿಕರನ್ನು ಅಲ್ಲಿಂದ ಸುರಕ್ಷಿತವಾಗಿ ಸ್ಥಳಾಂತರಿಸಲು ಪ್ರಯತ್ನಿಸುತ್ತಿವೆ. ಭಾರತ ಕೂಡ ತನ್ನ ದೇಶದ ಜನರನ್ನು ಅಫ್ಘಾನಿಸ್ತಾನದಿಂದ ಮರಳಿ ಕರೆತರುವ ಪ್ರಕ್ರಿಯೆ ಆರಂಭಿಸಿದೆ. ಅಫ್ಘಾನಿಸ್ತಾನದ ಮಜರ್-ಷರೀಫ್‌ನಲ್ಲಿರುವ ಭಾರತೀಯ ದೂತಾವಾಸವು ಎಲ್ಲಾ ಭಾರತೀಯರನ್ನು ಭಾರತಕ್ಕೆ ಮರಳುವಂತೆ ಹೇಳಿದೆ. ಇದಕ್ಕಾಗಿ, ವಿಶೇಷ ವಿಮಾನ ಇಂದು, ಮಂಗಳವಾರ ಸಂಜೆ ದೆಹಲಿಗೆ ಹೊರಡಲಿದೆ. ಆದಾಗ್ಯೂ, ಅಗತ್ಯವಿದ್ದರೆ ಈ ಸೌಲಭ್ಯವನ್ನು ಮತ್ತೊಮ್ಮೆ ಆಯೋಜಿಸಬಹುದು. ಹೀಗಾಗಿ ತವರುನಾಡಿಗೆ ಮರಳಲು ಬಯಸುವವರು ತಮ್ಮ ಪೂರ್ಣ ಹೆಸರು, ಪಾಸ್‌ಪೋರ್ಟ್ ಸಂಖ್ಯೆ, ಮುಕ್ತಾಯ ದಿನಾಂಕ 0785891303 ಮತ್ತು 0785891301 ಈ ಸಂಖ್ಯೆಗಳಿಗೆ ವಾಟ್ಸಾಪ್ ಮಾಡಬಹುದು. ಅಪ್ಘಾನಿಸ್ತಾನದ ಪರಿಸ್ಥಿತಿ ವಿವರಿಸುವ ಕೆಲ ಚಿತ್ರಗಳು...

ಎರಡು ವಾರಗಳ ನಂತರ ಅಫ್ಘಾನಿಸ್ತಾನದ ಲಷ್ಕರ್ಗಾ ಎಂಬ ಸ್ಥಳದಿಂದ ಕಾಬೂಲ್ ತಲುಪಿದ ವ್ಯಕ್ತಿ. ಈತ ತನ್ನ ಮನೆಯನ್ನು ಯಾರು ನಾಶಪಡಿಸಿದ್ದಾರೆಂದು ತಿಳಿದಿಲ್ಲ. ಸೈನ್ಯವೇ ಅಥವಾ ತಾಲಿಬಾನಿಯರೇ ಎಂದು ತಿಳಿಯದು ಎಂದು ನಿರಾಶೆಯಿಂದ ಹೇಳಿದ್ದಾರೆ. ಸದ್ಯ ಎಲ್ಲವನ್ನೂ ಈತ ಕಳೆದುಕೊಂಡಿದ್ದಾನೆ.
 

ಈ ಚಿತ್ರವು ಉತ್ತರ ಪ್ರಾಂತ್ಯದ ಜನರದ್ದಾಗಿದೆ.  ಇವರೆಲ್ಲರೂ ತಾಲಿಬಾನಿಯರ ಭಯದಿಂದ ಪಲಾಯನ ಮಾಡಿ ಕಾಬೂಲ್‌ನಲ್ಲಿ ಆಶ್ರಯ ಪಡೆದಿದ್ದಾರೆ. ಅವರೊಂದಿಗೆ ಚಿಕ್ಕ ಮಕ್ಕಳೂ ಇದ್ದಾರೆ. ಯುದ್ಧದಿಂದ ಹಾನಿಗೊಳಗಾದ ದೇಶದಲ್ಲಿ ಅವರ ಜೀವನ ನರಕಕ್ಕಿಂತ ಕೆಟ್ಟದಾಗಿದೆ. ತಿನ್ನಲು ಊಟವಿಲ್ಲ, ವಾಸಿಸಲು ಸ್ಥಳವಿಲ್ಲ. ಸಾವು ಯಾವ ಕ್ಷಣದಲ್ಲಾದರೂ ಎದುರಾಗುವ ಭೀತಿ ಇದೆ. 
 

ಈ ಚಿತ್ರ ಕಾಬೂಲಿನ್ದಾಗಿದೆ, ಆಡಿ ನಕ್ಕು ನಲಿಯಬೇಕಾದ ಮಕ್ಕಳು ಬಾಲ್ಯದಲ್ಲಿ ಇಂತಹ ದುಸ್ಥಿತಿಗೆ ತಲುಪಿದ್ದಾರೆ. ಪ್ರತಿಯೊಬ್ಬರೂ ತನ್ನ ಜೀವ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಮಕ್ಕಳು ಆಟವಾಡುವುದನ್ನು ಮರೆತಿದ್ದಾರೆ, ಅವರ ಪುಟ್ಟ ಕಣ್ಗಳಲ್ಲಿ ವಿಚಿತ್ರವಾದ ಭಯ ಮತ್ತು ದುಃಖವನ್ನು ಸ್ಪಷ್ಟವಾಗಿ ಕಾಣಬಹುದು. ಮುರಿದ ಮನೆಗಳಲ್ಲಿ ಕುಟುಂಬಗಳು ಭಯದಿಂದ ದಿನ ದೂಡುತ್ತಿದ್ದಾರೆ.

ಈ ಚಿತ್ರ Afghanistan National Defense and Security Forces(ANDSF) ಕಾಬೂಲ್ ಪ್ರಾಂತ್ಯದ ಶಾಕರ್ ದಾರಾ ಜಿಲ್ಲೆಯಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕರದ್ದಾಗಿದೆ. ಇವರಲ್ಲಿ 3 ಮಂದಿ ಗಾಯಗೊಂಡಿದ್ದು, ಉಳಿದ ಮೂವರು ಸೈನಿಕರ ಕೈಯ್ಯಲ್ಲಿ ಸಿಕ್ಕಿಬಿದ್ದಿದ್ದಾರೆ. ಅಫ್ಘಾನಿಸ್ತಾನದಿಂದ ಇಂತಹ ಅನೇಕ ಚಿತ್ರಗಳು ಪ್ರತಿದಿನ ಹೊರಬರುತ್ತವೆ.
 

ಹಲವು ವರ್ಷಗಳಿಂದ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತು ಸರ್ಕಾರಿ ಪಡೆಗಳ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಅಮೆರಿಕ ತನ್ನ ಸೇನ ಹಿಂತೆಗೆದುಕೊಂಡ ನಂತರ ತಾಲಿಬಾನ್ ಅಟ್ಟಹಾಸ ಮತ್ತೆ ಆರಂಭವಾಗಿದೆ. ನಿಧಾನವಾಗಿ ಉಗ್ರರು ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ. ತಾಲಿಬಾನ್ ಆಡಳಿತ ನಡೆಸುವ ರೀತಿ ನಾಗರಿಕ ಸಮಾಜಕ್ಕೆ ಕಳವಳಕಾರಿಯಾಗಿದೆ.

click me!