ವುಹಾನ್‌ ಲ್ಯಾಬ್‌ನ ಶಾಕಿಂಗ್ ಫೋಟೋ ರಿವೀಲ್: ವೈರಸ್ ಇಟ್ಟಿದ್ದ ಫ್ರಿಡ್ಜ್ ಒಮ್ಮೆ ನೋಡಿ

First Published Apr 19, 2020, 3:17 PM IST

ಕೊರೋನಾ ಅಟ್ಟಹಾಸ ವಿಶ್ವದ 200ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಕಂಡು ಬರುತ್ತಿದೆ. ಈವರೆಗೂ ಈ ವೈರಸ್‌ನಿಂದ 1.60 ಲಕ್ಷ ಮಂದಿ ಮೃತಪಟ್ಟಿದ್ದಾರೆ. ವುಹಾನ್‌ನಿಂದ ಈ ಹರಡಿದ ಮಾರಕ ವೈರಸ್‌ಗೆ ಚೀನಾವೇ ಕಾರಣ ಎನ್ನಲಾಗುತ್ತಿದೆ. ಅಮೆರಿಕ, ಬ್ರಿಟನ್ ಹಾಗೂ ಫ್ರಾನ್ಸ್‌ನಂತಹ ರಾಷ್ಟ್ರಗಳು ಕೊರೋನಾ ಇಷ್ಟೊಂದು ಹರಡಲು ಚೀನಾವೇ ಕಾರಣ ಎಂದು ಆರೋಪಿಸುತ್ತಿವೆ. ಈ ಆರೋಪಗಳು ದಿನೇ ದಿನೇ ಹೆಚ್ಚಾಉತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಫೋಟೋ, ವಿಡಿಯೋ ಹಾಗೂ ಅನೇಕ ವರದಿಗಳು ಬರಲಾರಂಭಿಸಿವೆ. ಚೀನಾಗೆ ಸಂಬಂಧಿಸಿದಂತೆ ಈಗ ಮತ್ತೊಂದು ವಿಚಾರ ಬಯಲಾಗಿದ್ದು, ಕೆಲ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ.

ವುಹಾನ್‌ ಇನ್ಸ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಲ್ಯಾಬ್‌ನ ಕೆಲ ದೃಶ್ಯಗಳು ವೈರಲ್ ಆಗಿವೆ. ಈ ಫೋಟೋಗಳಲ್ಲಿ ಯಾವ ರೆಫ್ರಿಜರೇಟರ್‌ನಿಂದ 1500 ಪ್ರಕಾರದ ವೈರಸ್‌ ಇಟ್ಟಿದ್ದಾರೋ, ಅದರ ಸೀಲ್ ಮುರಿದ ದೃಶ್ಯವಿದೆ. ಇದರಲ್ಲಿ ಬಾವಲಿಗಳಿಂದ ಹರಡುವ ವೈರಸ್ ಕೂಡಾ ಇದೆ ಎನ್ನಲಾಗಿದೆ.
undefined
ಈ ಫೋಟೋ ಎಲ್ಲಕ್ಕಿಂತ ಮೊದಲು ಅಮೆರಿಕದ ಸರ್ಕಾರಿ ಪತ್ರಿಕೆ ಚೈನಾ ಡೈಲಿ ಮೇಲ್‌ನಲ್ಲಿ 2018 ರಲ್ಲಿ ಪ್ರಕಟವಾಗಿತ್ತು. ಇದನ್ನು ಇತ್ತೀಚೆಗಷ್ಟೇ ಟ್ವಿಟರ್‌ನಲ್ಲೂ ಶೇರ್ ಮಾಡಲಾಗಿತ್ತು. ಬಳಿಕ ಇದನ್ನು ಡಿಲೀಟ್ ಮಾಡಲಾಗಿತ್ತು.
undefined
ಈ ಫೋಟೋ ಕುರಿತಾಗಿ ವ್ಯಕ್ತಿಯೊಬ್ಬ ಟ್ವೀಟ್ ಮಾಡುತ್ತಾ ಇದಕ್ಕಿಂತ ಒಳ್ಳೆ ಸೀಲ್ ಅಡುಗೆ ಕೋಣೆಯಲ್ಲಿರುವ ನಮ್ಮ ಫ್ರಿಡ್ಜಜ್‌ಗಿರುತ್ತದೆ ಎಂದಿದ್ದರು.
undefined
ಇದಕ್ಕೂ ಮುನ್ನ ವರದಿಯೊಂದರಲ್ಲಿ ಒಬ್ಬ ಇಂಟರ್ನ್‌ ಮಾಡಿದ ಎಡವಟ್ಟಿನಿಂದ ವುಹಾನ್‌ ಲ್ಯಾಬ್‌ನಿಂದ ಈ ವೈರಸ್ ಲೀಕ್ ಆಗಿತ್ತು ಎನ್ನಾಗಿತ್ತು.
undefined
ಇನ್ನು ಅಮೆರಿಕದ ಚಾನೆಲ್ ಫಾಕ್ಸ್ ನ್ಯೂಸ್ ಕೂಡಾ ಈ ಬಗ್ಗೆ ವರದಿ ಪ್ರಸಾರ ಮಾಡಿದ್ದು, ಕೊರೋನಾ ಚೀನಾದ ವುಹಾನ್‌ ಇನ್ಸಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಕೆಲಸ ಮಾಡುವ ಓರ್ವ ಇಂಟರ್ನ್‌ನಿಂದ ಎಡವಟ್ಟಾಗಿ ಲೀಕ್ ಆಗಿತ್ತು ಎಂದಿತ್ತು. ಈ ವರದಿ ಕುರಿತಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ ಪ್ರತಿಕ್ರಿಯಿಸಿದ್ದರು.
undefined
ಪ್ ಈ ಸಂಬಂಧ ತನಿಖರ ನಡೆಸುವ ಕುರಿತಾಗಿಯೂ ಹೇಳಿದ್ದರು. ಅಲ್ಲದೇ ಯಾವ ಇಂಟರ್ನ್‌ನಿಂದ ಈ ವೈರಸ್ ಲೀಕ್ ಆಗಿತ್ತೋ ಆತನೂ ಈ ಮಹಾಮಾರಿ ಹೊಡೆತಕ್ಕೆ ನಲುಗಿದ್ದ ಎಂದು ಚಾನೆಲ್‌ ತನ್ನ ವರದಿಯಲ್ಲಿ ಹೇಳಿತ್ತು.
undefined
ಅದಕ್ಕೂ ಮೊದಲು ಡೈಲಿ ಮೇಲ್‌ ಚೀನಾದ ವುಹಾನ್‌ನಲ್ಲಿರುವ ಲ್ಯಾಬ್‌ನಿಂದ ಹರಡಿದೆ ಎನ್ನಲಾದ ವೈರಸ್ ಸಂಶೋಧನೆಗೆ ಅಮೆರಿಕ ಫಂಡಿಂಗ್ ಮಾಡಲಾಗಿತ್ತು. ಹೀಗಾಗಿ ಚೀನಾದ ಗುಹೆಯಿಂದ ತಂದಿದ್ದ ಬಾವಲಿ ಮೇಲೆ ಸಂಶೋಧನೆ ನಡೆಯುತ್ತಿತ್ತು ಎಂದು ವರದಿ ಪ್ರಕಟಿಸಿತ್ತು.
undefined
ವುಹಾನ್‌ನಲ್ಲಿರುವ ಈ ಲ್ಯಾಬ್‌ ವೆಟ್ ಮಾರ್ಕೆಟ್ ಬಳಿ ಇದೆ. ಹೀಗಿರುವಾಗ ಇದೇ ಲ್ಯಾಬ್‌ನಿಂದ ಈ ವೈರಸ್‌ ಹರಡಿತ್ತು ಎಂಬ ಆರೋಪ ಹಲವಾರು ಬಾರಿ ಕೇಳಿ ಬಂದಿದೆ
undefined
click me!