ಚೀನಾದಲ್ಲಿ ಹೀಗೆ ಆರಂಭವಾಗಿತ್ತು ವಿನಾಶಕಾರಿ ಪ್ರಯೋಗ, ಶಾಕಿಂಗ್ ಫೋಟೋ ವೈರಲ್!

First Published May 3, 2020, 5:33 PM IST

ಇಡೀ ವಿಶ್ವವೇ ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿದೆ. ಈ ವೈರಸ್ ಸದ್ಯ ಇಡೀ ವಿಶ್ವಕ್ಕೇ ವ್ಯಾಪಿಸಿದೆ. ಈ ವೈರಸ್ ಜನರನ್ನು ಮನೆಯಲ್ಲೇ ಉಳಿದುಕೊಳ್ಳುವಂತೆ ಮಾಡಿದೆ. ಹೀಗಿದ್ದರೂ ಈವರೆಗೆ ಈ ವೈರಸ್ ತಡೆಗಟ್ಟುವ ಲಸಿಕೆ ಪತ್ತೆಯಾಗಿಲ್ಲ. ಆದರೆ ಕೊರೋನಾದಿಂದ ಚೇತರಿಸಿಕೊಂಡವರ ರಕ್ತ ಈ ವೈರಸ್ ನಿವಾರಿಸುವಲ್ಲಿ ಬಹಳಷ್ಟು ಸಹಾಯಕವಾಗಿಇದೆ ಎಂಬುವುದು ವೈದ್ಯರ ಮಾತಾಗಿದೆ. ಇನ್ನು ಈ ವಿನಾಶಕಾರಿ ವೈರಸ್ ಸಂಬಂದ ಚಿತ್ರ ವಿಚಿತ್ರ ವದಂತಿಗಳು ಹಬ್ಬಲಾರಂಭಿಸಿವೆ. ಕೆಲವರು ಇದು ವುಹಾನ್‌ ಲ್ಯಾಬ್‌ನಿಂದ ಹಬ್ಬಿದೆ ಎಂದರೆ, ಚೀನಾ ಮಾತ್ರ ಇದು ವುಹಾನ್‌ ಮಾರ್ಕೆಟ್‌ನಿಂದ ಹಬ್ಬಿದೆ ಎನ್ನುತ್ತಿದೆ. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ಲ್ಯಾಬ್‌ನಿಂದಲೇ ಇದು ಹಬ್ಬಿದೆ ಎಂಬುವುದಕ್ಕೆ ನನ್ನ ಬಳಿ ಸಾಕ್ಷಿ ಇದೆ ಎಂದಿದ್ದರು. ಇದೀಗ ವುಹಾನ್ ಲ್ಯಾಬ್‌ನ ಅಧಿಕೃತ ವೆಬ್‌ಸೈಟಿನಲ್ಲಿ ಕೆಲ ಫೋಟೋಗಳನ್ನು ಶೇರ್ ಮಾಡಲಾಗಿದ್ದು, ಇದರಲ್ಲಿ ವಿಜ್ಞಾನಿಗಳು ಬಾವಲಿಗಳನ್ನು ಹಿಡಿಯುತ್ತಿರುವ ದೃಶ್ಯಗಳಿವೆ. 
 

ವುಹಾನ್‌ನ ವೈರಾಲಜಿ ಲ್ಯಾಬ್‌ ತನ್ನ ಅಧಿಕೃತ ವೆಬ್‌ಸೈಟಿನಲ್ಲಿ ಶೇರ್ ಮಾಡಿದ್ದ ಹಲವಾರು ಪೋಟೋಗಳನ್ನು ಡಿಲೀಟ್ ಮಾಡಿದೆ. ಈ ಫೊಟೋಗಳನ್ನು ಚೀನಾ ವಿಶ್ವದಿಂದ ಮುಚ್ಚಿಡಲು ಬಯಸುತ್ತಿದೆ.
undefined
ಈ ಫೋಟೋಗಳಲ್ಲಿ ಚೀನಾದ ಈ ಲ್ಯಾಬ್‌ನ ಕೆಲ ವಿಜ್ಞಾನಿಗಳು ಕಾಡಿನಲ್ಲಿ ಬಾವಲಿಗಳನ್ನು ಹಿಡಿಯುತ್ತಿರುವ ದೃಶ್ಯಗಳು.
undefined
ಇಷ್ಟೇಯಲ್ಲ, ಒಂದು ಫೋಟೋದಲ್ಲಿ ಈ ವಿಜ್ಞಾನಿ ಗುಹೆಯೊಂದರಲ್ಲೂ ಬಾವಲಿ ಹುಡುಕುತ್ತಿರುವುದು ಕಂಡು ಬಂದಿದೆ. ಇನ್ನು ಇಲ್ಲಿ ಹಿಡಿದ ಈ ಬಾವಲಿಗಳನ್ನು ಲ್ಯಾಬ್‌ಗೆ ತೆಗೆದುಕೊಂಡು ಹೋಗಲಾಗಿತ್ತೆನ್ನಲಾಗಿದೆ.
undefined
ವುಹಾನ್‌ನ ಈ ಲ್ಯಾಬ್‌ನಲ್ಲಿ ಹದಿನೈದು ಸಾವಿರಕ್ಕೂ ಅಧಿಕ ವೈರಸ್‌ಗಳನ್ನು ಮಾಡಲಾಗಿದೆ ಎನ್ನಲಾಗಿದೆ.
undefined
ಚೀನಾ ಉದ್ದೇಶಪೂರ್ವಕವಾಗಿ ಈ ವೈರಸ್ ತಯಾರಿಸಿ, ಹಬ್ಬಿಸಿದೆ ಎಂಬುವುದು ಈ ಫೋಟೋಗಳಿಂದಲೇ ಬಯಲಾಗುತ್ತದೆ.
undefined
ಅಮೆರಿಕದ ಸುದ್ದಿಪತ್ರಿಕೆಯೊಂದು ಈ ಫೊಟೋಗಳನ್ನು ವಿಶ್ವದೆದುರು ತೆರೆದಿಟ್ಟು ಚೀನಾದ ಅಸಲಿಯತ್ತನ್ನು ಬಯಲು ಮಾಡಿದೆ. ಜೊತೆಗೆ ಈ ಸಂಶೋಧನೆಗೆ ಚೀನಾಗೆ ಅಮೆರಿಕವೇ ಆರ್ಥಿಕ ನೆರವು ನಿಡಿತ್ತು ಎಂದಿದೆ.
undefined
ಚೀನಾ ಈವರೆಗೆ ಸಾವಿರಾರುಗಟ್ಟಲೇ ವೈರಸ್ ತಯಾರಿಸಿದೆ. ಇದನ್ನು ತಯಾರಿಸಿ ತಯಾರಿಸಿ ವಿಜ್ಞಾನಿಗಳು ಸದ್ಯ ರಕ್ಷಣೆಗೆ ಬೇಕಾದ ಸೂಟ್‌ಗಳನ್ನೂ ಬಳಸುತ್ತಿಲ್ಲ ಎನ್ನಲಾಗಿದೆ.
undefined
ಚೀನಾದ ಸಂಶೋಧಕಿ ಶೀ ಜಹೇಗ್ಲೀಗೆ ಇಡೀ ವಿಶ್ವವೇ ಬ್ಯಾಟ್ ವುಮನ್ ಎಂದು ಹೆಸರಿಟ್ಟಿದೆ. ಹೀಗಿದ್ದರೂ ಆಕೆ ಚೀನಾದ ಮೇಲಿರುವ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಈ ವೈರಸ್ ಮಾಂಸದಿಂದ ಮನುಷ್ರ ದೇಹ ಸೇರಿದೆ, ಲ್ಯಾಬ್‌ನಿಂದಲ್ಲ ಎಂದು ಹೇಳಿದ್ದಾರೆ.
undefined
ಇದು ಮನುಷ್ಯರಿಗೆ ಪ್ರಕೃತಿಯೇ ನೀಡಿದ ಶಿಕ್ಷೆ, ಇದಕ್ಕೂ ಲ್ಯಾಬ್‌ಗೂ ಯಾವುದೇ ಸಂಬಂಧ ಇಲ್ಲ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
undefined
ಅಮೆರಿಕ ಸೇರಿದಂತೆ ಇಡೀ ವಿಶ್ವ, ಚೀನಾ ಕೊರೋನಾ ವಿಚಾರವಾಗಿ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದೆ. ಅಮೆರಿಕ ಕೂಡಾ ಚೀನಾದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮಾತುಗಳನ್ನಾಡಿದೆ.
undefined
click me!