ಕೊರೋನಾ ಎಫೆಕ್ಟ್: ಮನುಷ್ಯನ ಓಡಾಟಕ್ಕೆ ಬ್ರೇಕ್, ಪ್ರಕೃತಿ ಬ್ಯೂಟಿಫುಲ್!

Published : May 02, 2020, 06:19 PM IST

ಕೊರೋನಾ ವೈರಸ್ ಅಟ್ಟಹಾಸ ನಿಲ್ಲುವ ಲಕ್ಷಣಗಳೇ  ಕಾಣುತ್ತಿಲ್ಲ. ಈವರೆಗೂ ವಿಶ್ವದಲ್ಲಿ ಕೊರೋನಾ ವೈರಸ್‌ನಲ್ಲಿ ಎರಡು ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. 34 ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಬೇರೆ ಹಾದಿಯಿಲ್ಲದೇ ನಷ್ಟ ಎದುರಿಸುತ್ತಿರುವ ದೇಶಗಳಲ್ಲಿ ಲಾಕ್‌ಡೌನ್ ಹೇರಲಾಗುತ್ತಿದೆ. ಕೊರೋನಾ ಪ್ರಕರಣ ಮೊಟ್ಟ ಮೊದಲು ಚೀನಾದಲ್ಲಿ ದಾಖಲಾಗಿದ್ದು, ಮಾರ್ಚ್‌ ಅಂತ್ಯದೊಳಗೆ ಇದು ಬಹುತೇಕ ಇಡೀ ವಿಶ್ವಕ್ಕೇ ವ್ಯಾಪಿಸಿದೆ. ಇನ್ನು ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ಘೋಷಿಸಿರುವುದರಿಂದ ಯಾರಿಗಾದರೂ ಲಾಭ ಆಗಿದೆ ಎಂದರೆ ಅದು ಪ್ರಕೃತಿಗೆ. ಲಾಕ್‌ಡೌನ್ ನಡುವೆ ನಿಸರ್ಗ ತನ್ನ ಹಳೆಯ ಸೌಂದರ್ಯವನ್ನು ಮರಳಿ ಪಡೆದಿದೆ. ಇಂದು ವಿಶ್ವದಾದ್ಯಂತ ಕಾಣಿಸಿಕೊಂಡಿರುವ ಫೋಟೋಗಳಿಂದ ಪ್ರಕೃತಿ ಮತ್ತೆ ನಳನಳಿಸುತ್ತಿದ್ದು, ಮನುಷ್ಯರಿಲ್ಲದೇ ನಿಸರ್ಗ ಬಹಳ ಸುಂದರವಾಗಿದೆ ಎಂಬುವುದರಲ್ಲಿ ಅನುಮಾನವಿಲ್ಲ.  

PREV
110
ಕೊರೋನಾ ಎಫೆಕ್ಟ್: ಮನುಷ್ಯನ ಓಡಾಟಕ್ಕೆ ಬ್ರೇಕ್, ಪ್ರಕೃತಿ ಬ್ಯೂಟಿಫುಲ್!

ಬ್ರೆಜಿಲ್‌ನ ರಿಯೋ ಡಿ ಜೆನೆರಿಯೋನಲ್ಲಿ ಕೊರೊನಾದಿಂದ ಲಾಕ್‌ಡೌನ್ ಹೇರಲಾಗಿದೆ. ಜನರು ಮನೆಯಲ್ಲಿ ಕೈದಿಗಳಂತಿದ್ದಾರೆ. ಹೀಗಿರುವಾಗ ಇಲ್ಲಿನ ವಿಶ್ವ ಪ್ರಸಿದ್ಧ ಯೇಸು ಪ್ರತಿಮೆ ಸುಂದರವಾಗಿ ಕಂಡು ಬಂದಿದೆ. ಇಲ್ಲಿ ಈವರೆಗೂ ಒಟ್ಟು 92 ಸಾವಿರ ಕೊರೋನಾ ವೈರಸ್ ಪ್ರಕರಣಗಳು ವರದಿಯಾಗಿವೆ.

210

ಇದು ಜರ್ಮನಿಯಲ್ಲಿ ಕಂಡು ಬಂದ ದೃಶ್ಯ. ಇಲ್ಲಿನ ಫ್ರ್ಯಾಂಕ್‌ಫರ್ಟ್‌ ಬಳಿ ಓಡುತ್ತಿರುವ ಕುದುರೆಗಳ ದೃಶ್ಯ. ಇಲ್ಲಿ ಈವರೆಗೂ ಒಟ್ಟು 6700ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಅಲ್ಲದೇ 1.64 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.

310

ಲಾಸ್‌ ವೇಗಸ್‌ನಲ್ಲಿ ಸಾಮಾನ್ಯ ದಿನಗಳಲ್ಲಿ ಇಲ್ಲಿ ಜನಸಂದಣಿ ಕಂಡು ಬರುತ್ತಿತ್ತು. ಆದರೆ ಆಕ್‌ಡೌನ್‌ನಿಂದ ಇಲ್ಲಿ ಕ್ಯಾಸಿನೋ ಹಾಗೂ ಇತರ ವ್ಯವಹಾರಗಳು ಬಂದ್ ಆಗಿವೆ. ಆದರೆ ಇಲ್ಲಿನ ಸೌಂದರ್ಯ ಲಾಕ್‌ಡೌನ್ ಬಳಿಕ ಮತ್ತಷ್ಟು ಹೆಚ್ಚಿದೆ.

410

ಇಸ್ರೇಲ್‌ನ ತೆಲ್‌ಅವೀವ್ ನಗರದಲ್ಲಿರುವ ಹಯರ್‌ಕಾನ್ ಪಾರ್ಕ್‌ನಲ್ಲಿ ಪ್ರಾಣಿಗಳು ತಿರುಗಾಡುತ್ತಿರುವುದು ಕಂಡು ಬಂದಿದೆ.. ಇಲ್ಲಿ ಕೊರೋನಾದ ಹದಿನಾರು ಸಾವಿರ ಪಪಪ್ರಕರಣಗಳು ಬೆಳಕಿಗೆ ಬಂದಿದ್ದು, 225 ಮಂದಿ ಬಲಿಯಾಗಿದ್ದಾರೆ.

510

ಕ್ಯಾಲಿಫೋರ್ನಿಯಾದ ಖಾಲಿ ರಸ್ತೆಗಳೂ ಸುಂದರವಾಗಿ ಕಾಣುತ್ತಿವೆ. ಲಾಕ್‌ಡೌನ್‌ಗೂ ಮುನ್ನ ಇದು ವಾಹನಗಳಿಂದ ತುಂಬಿ ತುಳುಕಾಡುತ್ತಿತ್ತು. ಇಲ್ಲಿ ಈವರೆಗೂ ಒಟ್ಟು 52 ಸಾವಿರಕ್ಕೂ ಅಧಿಕ ಪ್ರಕರಣಗಳು ಬೆಳಕಿಗೆ ಬಂದಿದ್ದು, 2100ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ.

610

ಇದು ಕ್ಯಾಲಿಫೋರ್ನಿಯಾದ ಸೇಂಟ್ ಮೊನಿಕಾ ಬೀಚ್‌ನದ್ದಾಗಿದೆ. ಇಲ್ಲಿ ಖಾಲಿಯಾದ ಲೈಫ್‌ಗಾರ್ಡ್‌ ಸ್ಟೇಷನ್‌ನನ್ನೇ ಪಕ್ಷಿಗಳು ತಮ್ಮ ಗೂಡನ್ನಾಗಿ ಮಾಡಿವೆ.

710

ಇದು ಭಾರತದ ರಾಜಧಾನಿ ದೆಹಲಿಯ ರಾಜಪಥದ್ದಾಗಿದೆ. ರಾಷ್ಟ್ರಪತಿ ಭವನದ ಬಳಿ ಲಾಕ್‌ಡೌನ್ ನಡುವೆ ಮೌನ ಮನೆ ಮಾಡಿದೆ. ಭಾರತದಲ್ಲಿ ಕೊರೋನಾ ವೈರಸ್‌ನ 37 ಸಾವಿರಕ್ಕೂ ಅಧಿಕ ಪ್ರಕರಣಗಳು ಬೆಳಕಿಗೆ ಬಂದಿವೆ. ಅಲ್ಲದೇ 1200 ಅಧಿಕ ಮಂದಿ ಮೃತಪಟ್ಟಿದ್ದಾರೆ.

810

ಲಾಕ್‌ಡೌನ್‌ನಿಂದ ಬಹುತೇಕ ಅದೃಶ್ಯವಾಗಿದ್ದ ಪಕ್ಷಿಗಳೆಲ್ಲಾ ಮತ್ತೆ ಕಾಣಲಾರಂಭಿಸಿವೆ. ಕ್ಯಾಲಿಫೋರ್ನಿಯಾದಲ್ಲಿ ಕಂಡು ಬಂದ ದೃಶ್ಯ.

910

ಇದೇ ರೀತಿ ರೊಮಾನಿಯಾದ ಒಂದು ಪಾರ್ಕ್‌ನಲ್ಲಿ ನಹಂಸವೊಂದು ನೀರಿನಲ್ಲಿ ವಿಹರಿಸುತ್ತಿರುವ ವಿಡಿಯೋ.

1010

ಸ್ಪೇನ್‌ನಲ್ಲಿ ಕೊರೋನಾ ವೈರಸ್‌ನ ಎರಡು ಲಕ್ಷದ ನಲ್ವತ್ತು ಸಾವಿರಕ್ಕೂ ಅಧಿಕ ಪ್ರಕರಣಗಳು ಬೆಳಕಿಗೆ ಬಂದಿವೆ. ಅಲ್ಲದೇ ಇಪ್ಪತ್ತನಾಲ್ಕು ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

click me!

Recommended Stories