7 ವರ್ಷ ಸಾಕಿದ್ದ ಮಗನೇ ಆಕೆಯನ್ನು ಗರ್ಭಿಣಿ ಮಾಡಿದ!

First Published | Jun 10, 2020, 4:54 PM IST

ಕೆಲವೊಮ್ಮೆ ನಾವು ಕೇಳುವ ಸುದ್ದಿಗಳು ಅದೆಷ್ಟು ವಿಚಿತ್ರವಾಗಿರುತ್ತವೆ ಎಂದರೆ, ಅದನ್ನು ಕೇಳಿ ನೋಡಿದ ಬಳಿಕ ಸಂಬಂಧಗಳೇನು ಎಂಬ ಪ್ರಶ್ನೆ ಏಳುತ್ತದೆ. ಅದರಲ್ಲೂ ವಿಶ್ವದಲ್ಲಿ ತಾಯಿ ಹಾಗೂ ಮಗನ ಸಂಬಂಧ ಅತ್ಯಂತ ಸುಂದರವಾದದ್ದು. ತಾಯಿ ತನ್ನ ಮಗುವಿಗಾಗಿ ಏನು ಬೇಕಾದರೂ ಮಾಡಲು ಸಿದ್ಧಳಾಗಿರುತ್ತಾಳೆ. ಆದರೆ ಸದ್ಯ ಬೆಳಕಿಗೆ ಬಂಧ ಘಟನೆ ಬಹಳ ವಿಚಿತ್ರವಾಗಿದೆ. ಇಲ್ಲೊಬ್ಬ ಮಹಿಳೆ ಓರ್ವ ವಿಚ್ಛೇದಿತ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ಈ ವೇಳೆ ಆ ವ್ಯಕ್ತಿಗೆ ಮೊದಲ ಪತ್ನಿಯಿಂದಾದ ಓರ್ವ ಏಳು ವರ್ಷದ ಮಗನಿದ್ದ. ಹೀಗಿರುವಾಗ ಈ ಮಹಿಳೆ ತನ್ನ ಮಲಮಗನನ್ನು ಬಹಳ ಮುದ್ದಿನಿಂದ ಸಾಕಿ ಬೆಳೆಸಿದ್ದಾಳೆ. ಆದರೆ ಆತ ಯುವಕನಾಗುತ್ತಿದ್ದಂತೆಯೇ ಮಹಿಳೆಗೆ ಆತನ ಮೇಲೆ ಪ್ರೀತಿ ಹುಟ್ಟಿಕೊಂಡಿದೆ. ಇಂದು ಆ ಮಹಿಳೆ ತನ್ನ ಮಲಮಗನ ಮಗುವಿನ ತಾಯಿಯಾಗಲಿದ್ದಾಳೆ. ಇಲ್ಲಿದೆ ಈ ಕಹಾನಿಯ ಸಂಪೂರ್ಣ ವಿವರ.
35 ವರ್ಷದ ಮರಿನಾ ಬಾಮ್‌ಶೇವಾ ತನ್ನ 20 ವರ್ಷದ ಮಲಮಗನ ಮಗುವಿನ ತಾಐಇಯಾಗಲಿದ್ದಾಳೆ. ಈ ಬ್ಲಾಗರ್ ಸದ್ಯ ಈ ನಿಟ್ಟಿನಲ್ಲಿ ತನ್ನ ಗಂಡನನ್ನು ಬಿಟ್ಟು ಮನೆಯಿಂದ ಪರಾರಿಯಾಗಿದ್ದಾಳೆ.

ಮರೀನಾ ತನ್ನ ಈ ಪ್ರೀತಿಗಾಗಿ 45 ವರ್ಷದ ಮಾಜಿ ಗಂಡ ಅಲೆಕ್ಸಸ್ ಶವರ್ರೀನ್‌ರನ್ನು ಬಿಟ್ಟಿದ್ದಾಳೆ. ಮರಿನಾ ಆಗೂ ಅಲೆಕ್ಸಸ್ ಇಬ್ಬರೂ ಹದಿಮೂರು ವರ್ಷ ಸಂಸಾರ ನಡೆಸಿದ್ದಾರೆ.
ಇನ್ನು ಮರೀನಾ ಅಲೆಕ್ಸ್ ಮದುವೆಯಾದಾಗ ಇಬ್ಬರು ಮಕ್ಕಳಿದ್ದರು. ಅಲ್ಲದೇ ಈ ದಂಪತಿ ಐವರು ಮಕ್ಕಳನ್ನು ದತ್ತು ಪಡೆದಿದ್ದರು.
Tap to resize

ಮರೀನಾ ಎಲ್ಲಾ ಮಕ್ಕಳ ವಿಶೇಷ ಆರೈಕೆ ಮಾಡುತ್ತಿದ್ದರು. ಜೊತೆಗೆ ತಮ್ಮ ಕಾಳಜಿಯೂ ವಹಿಸುತ್ತಿದ್ದರು. ಹೀಗಿರುವಾಗ ಅವರು ಬರೋಬ್ಬರಿ 58 ಕೆಜಿ ತೂಕ ಕಳೆದುಕೊಂಡಿದ್ದರು. ಅವರು ಈ ಬಗ್ಗೆ ಇನ್ಸ್ಟಾಗ್ರಾಂನಲ್ಲೂ ಬರೆದುಕೊಂಡಿದ್ದಾರೆ.
ಅವರು ತೂಕ ಕಳೆದುಕೊಂಡಿದ್ದರೂ ಗರ್ಭಿಣಿಯಾಗಲು ಸಾಧ್ಯವಾಗಿರಲಿಲ್ಲ. ಹಲವಾರು ಬಾರಿ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆಕೆಗೆ ತನ್ನದೇ ಒಂದು ಮಗು ಬೇಕೆಂಬ ಆಸೆ ಇತ್ತು.
ಹೀಗಿರುವಾಗ ಒಂದು ದಿನ ಅಲೆಕ್ಸಸ್ ಮರೀನಾ ತನ್ನ ಹಿರಿಯ ಮಗನೊಂದಿಗೆ ಬೆಡ್‌ರೂಂನಲ್ಲಿರುವುದನ್ನು ನೋಡಿದ್ದಾರೆ. ಇದಾದ ಬಳಿಕ ಆತ ಮರೀನಾಗೆ ಡೈವೋರ್ಸ್ ನೀಡಿದ್ದಾನೆ. ಹೀಗಿರುವಾಗ ಮರೀನಾ ಏಳು ವರ್ಷ ತಾನು ಸಾಕಿದ್ದ ಮಗನೊಂದಿಗೆ ಸಂಬಂಧ ಬೆಳೆಸಿದ್ದಾಳೆ.
ಸದ್ಯ ಅಲೆಕ್ಸಸ್ ಮರೀನಾ ವಿರುದ್ಧ ಮಗುವಿಗಾಗಿ ತನ್ನ ಮಗನನ್ನು ಬಲೆಗೆ ಹಾಕಿಕೊಂಡಿದ್ದಾಳೆಂಬ ಆರೋಪ ಹೊರಿಸಿದ್ದಾರೆ. ತನ್ನ ಮಗನಿಗೆ ಒಬ್ಬ ಗೆಳತಿಯೂ ಇರಲಿಲ್ಲ. ಹೀಗಿರುವಾಗ ಆತ ಮರೀನಾಳನ್ನು ಪ್ರೀತಿಸುತ್ತಿರುವುದು ಅಸಾಧ್ಯವಾದ ವಿಚಾರ ಎಂದಿದ್ದಾರೆ.
ಸೋಶಿಯಲ್ ಮಿಡಿಯಾದಲ್ಲೂ ಮರೀನಾ ಪರ ವಿರೋಧ ಮಾತುಗಳು ಕೇಳಿ ಬಂದಿವೆ. ಹಲವಾರು ಮಂದಿ ಈ ವಿಚಾರವಾಗಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಆದರೆ ಈ ಜೊಡಿ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಂಡಿಲಲ್ಲ. ಇಬ್ಬರೂ ಮುಂದಿನ ತಿಂಗಳು ಮದುವೆಯಾಗಲಿದ್ದಾರೆ, ಹಾಗೂ ಮಗುವನ್ನು ಸ್ವಾಗತಿಸಲು ತಯಾರಾಗಿದ್ದಾರೆ.

Latest Videos

click me!