ಕಳೆದ ಆಗಸ್ಟ್‌ನಲ್ಲಿಯೇ ಚೀನಾದಲ್ಲಿ ಕೊರೋನಾ ಇತ್ತು!  ಹಾವರ್ಡ್ ಸ್ಟಡಿ, ಚೀನಾ ಲೇವಡಿ!

First Published Jun 9, 2020, 9:07 PM IST

ಲಂಡನ್ (ಜೂ. 09 ) ಚೀನಾದ ವುಹಾನ್ ನಿಂದ ಕಳೆದ ಆಗಸ್ಟ್ ನಲ್ಲಿಯೇ  ಕೊರೋನಾ ಹರಡಿದೆ ಎಂಬ ಹಾವರ್ಡ್ ಯುನಿವರ್ಸಿಟಿ ಅಧ್ಯಯನವನ್ನು ಚೀನಾ ಸಾರಾಸಗಟಾಗಿ ತಳ್ಳಿಹಾಕಿದೆ. ಇದೊಂದು ಹಾಸ್ಯಾಸ್ಪದ ಸಂಗತಿ ಎಂದು ಕುಹಕವಾಡಿದೆ. 

ಕೊರೋನಾ ವೈರಸ್ ಆಗಸ್ಟ್ ನಲ್ಲಿ ಇತ್ತು ಎಂಬುದಕ್ಕೆ ಯಾವ ದಾಖಲೆಗಳು ಇಲ್ಲ ಎಂದು ಚೀನಾ ಹೇಳಿದೆ.
undefined
2019 ರ ಕೊನೆ ಅಂದರೆ ಡಿಸೆಂಬರ್ ನಲ್ಲಿ ಕೊರೋನಾ ಮೊದಲನೆಯದಾಗಿ ಕಾಣಿಸಿಕೊಂಡಿತ್ತು. ಕೆಮ್ಮು ಪ್ರಾಥಮಿಕ ಸಿಮ್ಟಮ್ ಎಂದು ಕರೆಯಲಾಗಿತ್ತು.
undefined
ಉಪಗ್ರಹ ಆಧಾರದಲ್ಲಿ ಆಸ್ಪತ್ರೆಗೆ ಬಂದು ಹೋಗುವವರು, ಸುತ್ತಲಿನ ವಾತಾವರಣದ ಆಧಾರಲ್ಲಿ ಕಳೆದ ಆಗಸ್ಟ್ ತಿಂಗಳಿನ ವಿಚಾರ ಇಟ್ಟುಕೊಂಡು ಈ ಸ್ಟಡಿ ಮಾಡಲಾಗಿದೆ. ಚಿಕಿತ್ಸೆಗೆ ಹೆಚ್ಚಿನ ಜನ ಬಂದಿದ್ದಾರೆ ಎಂದ ಮಾತ್ರಕ್ಕೆ ಅದನ್ನು ಕೊರೋನಾ ಎಂದು ಅಂದೆಯೇ ಹೇಗೆ ಹೇಳುತ್ತಿರೀ ಎಂದು ಚೀನಾ ಪ್ರಶ್ನೆ ಮಾಡಿದೆ.
undefined
ಕಳೆದ ಆಗಸ್ಟ್ ನಲ್ಲಿ ಆಸ್ಪತ್ರೆಯ ಸುತ್ತಲಿನ ವಿಚಾರ ಮತ್ತು ಆಗುಹೋಗುಗಳ ಆಧಾರದಲ್ಲಿ ಆಗಸ್ಟ್ ಬಲ್ಲಿಯೇ ಕೊರೋನಾ ಇತ್ತು ಎಂಬ ಅಭಿಪ್ರಾಯವನ್ನು ಅಧ್ಯಯನ ನಡೆಸಿದ ಪೌಲ್ ಡಿಗಾರ್ಡ್ ಹೇಳಿದ್ದರು.
undefined
ಚೀನಾದ ಜನರು ಕೆಮ್ಮು ಮತ್ತು ಗಂಟಲು ನೋವಿನಂಥಹ ವಿಚಾರಕ್ಕೆ ಆಗಸ್ಟ್ ವೇಳೆ ಪದೇ ಪದೇ ಆನ್ ಲೈನ್ ನಲ್ಲಿ ಪ್ರಶ್ನೆ ಕೇಳಿದ್ದರು ಎಂಬುದನ್ನು ಆಧಾರ ಮಾಡಿಕೊಳ್ಳಲಾಗಿದೆ.
undefined
ಇದು ಹಾಸ್ಯಾಸ್ಪದ ಸಂಗತಿ, ಟ್ರಾಫಿಕ್ ಸಂಗತಿ ಇಟ್ಟುಕೊಂಡು ಇಂಥ ನಿರ್ಧಾರಕ್ಕೆ ಬಂದಿರುವುದು ಹಾಸ್ಯಾಸ್ಪದ ಎಂದು ಚೀನಾ ವಿದೇಶಾಂಗ ಇಲಾಖೆ ವಕ್ತಾರ ಹುವಾ ಚುವಾಂಗ್ ತಿರುಗೇಟು ನೀಡಿದ್ದಾರೆ.
undefined
ಕೆಮ್ಮು ಮತ್ತು ಗಂಡಲು ನೋವಿನ ಕಾರಣಕ್ಕೆ ಹೆಚ್ಚಿನ ಜನರು ಆಸ್ಪತ್ರೆ ಕಡೆ ಮುಖ ಮಾಡುತ್ತಿದ್ದರು ಎಂಬುದು ಅಧ್ಯಯನದ ಮತ್ತೊಂದು ಅಂಶ.
undefined
click me!