ರುಚಿಯಾದ ಚಿಕನ್ ಆರ್ಡರ್, ತಿಂದಾದ ಬಳಿಕ ಬಾಕ್ಸ್ ನೋಡಿ 12 ಗಂಟೆ ವಾಂತಿ!
First Published | Jul 25, 2020, 5:15 PM IST2020ನೇ ವರ್ಷದಲ್ಲಿ ಏನು ಬೇಕಾದ್ರೂ ನಡೆಯುತ್ತೆ. ಹೀಗಿರುವಾಗ ಆನ್‌ಲೈನ್ ಡೆಲಿವರಿ ಜನರ ಬದುಕನ್ನು ಮತ್ತಷ್ಟು ಸುಲಭವಾಗಿಸಿದೆ. ಈ ಸೇವೆಯಿಂದ ಜನರು ಮನೆಯಲ್ಲೇ ಇದ್ದು ತಮ್ಮಿಷ್ಟದ ತಿಂಡಿ, ಊಟ ತರಿಸಿ ತಿನ್ನಬಹುದಾಗಿದೆ. ಈ ಹಿಂದೆ ಮನೆಯಲ್ಲಿ ಮಾಡಬೇಕಾದ ಅಥವಾ ಹೊರ ಹೋಗಿ ತಿನ್ನಬೇಕಾದ ಅನಿವಾರ್ಯತೆ ಇತ್ತು. ಆದರೀಗ ಹಾಗಲ್ಲ, ಕರೆ ಮಾಡಿ ಅಥವಾ ಆನ್‌ಲೈನ್ ಮೂಲಕ ಮನೆ ಬಾಗಿಲಿಗೇ ಊಟ ತರಿಸಿಕೊಳ್ಳಬಹುದು. ಕೊರೋನಾ ಅಟ್ಟಹಾಸದಿಂದಾಗಿ ಅನೇಕ ಮಂದಿ ಈ ಸೇವೆಗೆ ಕೊಂಚ ವಿರಾಮ ನೀಡಿದ್ದಾರಾದರೂ, ಇನ್ನೂ ಕೆಲ ಮಂದಿ ಆನ್‌ಲೈನ್ ಮೂಲಕ ತರಿಸಿಕೊಳ್ಳುತ್ತಿದ್ದಾರೆ. ಈ ಸೇವೆ ನೀಡುವವರೂ ಶುದ್ಧ ಆಹಾರ ನೀಡುತ್ತೇವೆಂಬ ಭರವಸೆ ಜನರಲ್ಲಿ ಮೂಡಿಸುತ್ತಿದ್ದರೂ, ಅನೇಕ ಕಡೆ ಇದನ್ನು ಅನುಸರಿಸಲಾಗುತ್ತಿಲ್ಲ. ಸದ್ಯ ಮಹಿಳೆಯೊಬ್ಬಳು ಕೊರೋನಾತಂಕ ನಡುವೆ ಆನ್‌ಲೈನ್ ಮೂಲಕ ಬಿರಿಯಾನಿ ತರಿಸಿಕೊಂಡಿದ್ದು, ಹಸಿವಿನಿಂದ ಕಂಗಾಲಾದ ಮಹಿಳೆ ಅದನ್ನು ಗಬ ಗಬನೇ ತಿಂದಿದ್ದಾಳೆ. ಆದರೆ ಕೊನೆಯ ತುತ್ತು ತಿನ್ನಬೇಕೆನ್ನುವಷ್ಟರಲ್ಲಿ ಬಾಕ್ಸ್‌ನಲ್ಲಿದ್ದ ದೃಶ್ಯ ಕಂಡು ಆಕೆ ಕಂಗಾಲಾಗಿದ್ದಾಳೆ. ಅಲ್ಲದೇ ಆಕೆಯ ಆರೋಗ್ಯ ಸ್ಥಿತಿಯೂ ಹದಗೆಟ್ಟಿದೆ.