Modi In US: ನೀವು ಇಡೀ ವಿಶ್ವಕ್ಕೇ ಪ್ರೇರಣೆ: ಕಮಲಾ ಹ್ಯಾರಿಸ್ ಭೇಟಿಯಾದ ಮೋದಿ!

First Published Sep 24, 2021, 8:54 AM IST

ಕೋವಿಡ್ 19(Covid 19) ಅವಾಂತರದ ಬಳಿಕ, ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ(narendra Modi), ಉಪಾಧ್ಯಕ್ಷೆ ಕಮಲಾ ಹ್ಯಾರಿಸ್(kamala Harris) ಅವರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಭಯೋತ್ಪಾದನೆ(Terrorism) ಮತ್ತು ಕೊರೋನಾ ಬಿಕ್ಕಟ್ಟಿನಂತಹ ಪ್ರಮುಖ ವಿಷಯಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು. ಹ್ಯಾರಿಸ್ ಅವರನ್ನು ಭೇಟಿ ಬಳಿಕ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅವರು ಇಡೀ ಜಗತ್ತಿಗೆ ಸ್ಫೂರ್ತಿ. ಭಾರತ ಮತ್ತು ಅಮೆರಿಕ ನಡುವಿನ ಸ್ನೇಹವನ್ನು ಮತ್ತಷ್ಟು ಬಲಪಡಿಸುವ ಹಲವು ವಿಷಯಗಳನ್ನು ನಾವು ಚರ್ಚಿಸಿದ್ದೇವೆ. ಈ ವಿಷಯಗಳು ಮೌಲ್ಯಗಳು ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಆಧರಿಸಿವೆ ಎಂದಿದ್ದಾರೆ. ಗುರುವಾರ ಈ ಸಭೆ ನಡೆದಿದ್ದು, ಭಾರತೀಯ ಮೂಲದ ಉಪರಾಷ್ಟ್ರಪತಿ ಭಾರತದ ಪ್ರಧಾನಿಯನ್ನು ಭೇಟಿಯಾಗುತ್ತಿರುವುದು ಇದೇ ಮೊದಲು ಎಂಬುವುದು ಉಲ್ಲೇಖನೀಯ.

ಭೇಟಿಯ ಸಮಯದಲ್ಲಿ, ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕೂಡ ಭಯೋತ್ಪಾದನೆಯ ಬಗ್ಗೆ ಪ್ರಸ್ತಾಪಿಸಿ, ಪಾಕಿಸ್ತಾನವನ್ನು ದೂಷಿಸಿದ್ದಾರೆ. ಪಾಕಿಸ್ತಾನದ ನೆಲದಲ್ಲಿ ಹಲವು ಭಯೋತ್ಪಾದಕ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹ್ಯಾರಿಸ್ ಹೇಳಿದ್ದಾರೆ. ಭಾರತ ಮತ್ತು ಅಮೆರಿಕದ ಭದ್ರತೆಯ ಮೇಲೆ ಯಾವುದೇ ಪರಿಣಾಮ ಬೀರದಂತೆ ಭಯೋತ್ಪಾದಕರನ್ನು ನಿಯಂತ್ರಿಸುವಂತೆ ಹ್ಯಾರಿಸ್ ಪಾಕಿಸ್ತಾನಕ್ಕೆ ಎಚ್ಚರಿಕೆಯನ್ನೂ ನೀಡಿದ್ದಾರೆ.
 

ಹ್ಯಾರಿಸ್ ಭೇಟಿಯಾದ ಪಿಎಂ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ನನ್ನನ್ನು ಇಲ್ಲಿ ಸ್ವಾಗತಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಹೇಳಿದ್ದಾರೆ. ಕೆಲ ಸಮಯದ ಹಿಂದೆ ನನಗೆ ಅವರೊಂದಿಗೆ ಮಾತನಾಡುವ ಅವಕಾಶ ಸಿಕ್ಕಿತ್ತ. ಆಗ ಭಾರತವು ಕೊರೋನಾದ ಎರಡನೇ ಅಲೆಯನ್ನು ಎದುರಿಸುತ್ತಿತ್ತು. ಇದರಲ್ಲಿ, ಅಮೆರಿಕ ಚಾಚಿದ ಸಹಾಯಹಸ್ತಕ್ಕೆ ಧನ್ಯವಾದಗಳು ಎಂದಿದ್ದಾರೆ.

ಇದೇ ವೇಳೆ ಹ್ಯಾರಿಸ್ ಅವರನ್ನು ಅಮೆರಿಕದ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಒಂದು ಮಹತ್ವದ ಘಟನೆ ಎಂದು ಮೋದಿ ಬಣ್ಣಿಸಿದ್ದಾರೆ. ಇದೇ ವೇಳೆ ಭಾರತಕ್ಕೆ ಭೇಟಿ ನೀಡುವಂತೆ ಹ್ಯಾರಿಸ್‌ ಅವರಿಗೆ ಮೋದಿ ಆಹ್ವಾನಿಸಿದ್ದಾರೆ. ಅಲ್ಲದೇ ಭಾರತ ಮತ್ತು ಅಮೆರಿಕವು ಪ್ರಪಂಚದ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರಗಳಂತೆ ಸಹಜ ಪಾಲುದಾರರು ಎಂದು ಹೇಳಿದರು. ಈ ಸಿನರ್ಜಿ ಮತ್ತು ಸಹಯೋಗವು ಬೆಳೆಯುತ್ತಲೇ ಇದೆ ಎಂದಿದ್ದಾರೆ.

ಮೋದಿ ಜೊತೆಗಿನ ಸಭೆಯಲ್ಲಿ ಕಮಲಾ ಹ್ಯಾರಿಸ್ ಲಸಿಕೆ ರಫ್ತು ಮಾಡಿದ ವಿಚಾರವಾಗಿ ಭಾರತವನ್ನು ಶ್ಲಾಘಿಸಿದ್ದಾರೆ. ಭಾರತದಲ್ಲಿ ಪ್ರತಿದಿನ ಒಂದು ಕೋಟಿಗೂ ಹೆಚ್ಚು ಲಸಿಕೆಗಳನ್ನು ನೀಡಲಾಗುತ್ತಿದೆ ಎಂದು ಹ್ಯಾರಿಸ್ ಹೇಳಿದ್ದಾರೆ. ಭಾರತ ಮತ್ತು ಪೆಸಿಫಿಕ್ ಸಾಗರಗಳಲ್ಲಿ ಮುಕ್ತ ವ್ಯಾಪಾರ ಮತ್ತು ಮುಕ್ತ ಮಾರ್ಗಗಳ ಪ್ರಚಾರದ ಬಗ್ಗೆಯೂ ಮೋದಿ ಮತ್ತು ಹ್ಯಾರಿಸ್ ಭೇಟಿಯಲ್ಲಿ ಚರ್ಚಿಸಲಾಯಿತು. ಇದರ ಹೊರತಾಗಿ, ಇಬ್ಬರೂ ನಾಯಕರು ಹವಾಮಾನ ಬದಲಾವಣೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡಿದರು.

ಈ ಹಿಂದೆ ಪ್ರಧಾನಿ ಮೋದಿ ವಾಷಿಂಗ್ಟನ್ ಡಿಸಿ ತಲುಪಿದಾಗ ಅವರನ್ನು ಅಲ್ಲಿನ ಅನಿವಾಸಿ ಭಾರತೀಯರು ಆತ್ಮೀಯವಾಗಿ ಸ್ವಾಗತಿಸಿದರು. ರಾಜಧಾನಿ ದೆಹಲಿಯಿಂದ ಏರ್ ಫೋರ್ಸ್ -1 ಬೋಯಿಂಗ್ 777-337 ಇಆರ್ ವಿಮಾನದಲ್ಲಿ ಮೋದಿ ಬುಧವಾರ ಅಮೆರಿಕಕ್ಕೆ ತೆರಳಿದರು. ಈ ಹಿಂದೆ ಮೋದಿ 2019 ರಲ್ಲಿ ಅಮೆರಿಕಕ್ಕೆ ಹೋಗಿದ್ದರು. ಅಮೆರಿಕಕ್ಕೆ ಆಗಮಿಸಿದ ನಂತರ, ಮೋದಿ ಅವರನ್ನು ಯುಎಸ್ ಆಡಳಿತದ ಉಪ ಕಾರ್ಯದರ್ಶಿ ಟಿಎಚ್ ಬ್ರಿಯಾನ್ ಮೆಕೇನ್ ಸೇರಿದಂತೆ ಇತರ ಅಧಿಕಾರಿಗಳು ಬರಮಾಡಿಕೊಂಡಿದ್ದರು. 

click me!