ವಾಷಿಂಗ್ಟನ್‌ನಲ್ಲಿ ಪಿಎಂ ಮೋದಿಗೆ ಅದ್ಧೂರಿ ಸ್ವಾಗತ, ಏರ್‌ಪೋರ್ಟ್‌ ಹೊರಗೆ ಜನಸ್ತೋಮ!

First Published | Sep 23, 2021, 8:13 AM IST

ಈ ಚಿತ್ರಗಳು ಭಾರತದ ಪ್ರತಿಷ್ಠೆ ಮತ್ತು ಗೌರವವ ವಿಶ್ವಾದ್ಯಂತ ಹೇಗೆ ವೃದ್ಧಿಸಿದೆ ಎಂಬುವುದಕ್ಕೆ ಸಾಕ್ಷಿಯಾಗಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ತಮ್ಮ ಮೂರು ದಿನಗಳ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಬುಧವಾರ ವಾಷಿಂಗ್ಟನ್ ಡಿಸಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ, ಎಲ್ಲೆಡೆ 'ಮೋದಿ-ಮೋದಿ' ಎಂಬ ಧ್ವನಿ ಆಗಸದಲ್ಲಿ ಪ್ರತಿಧ್ವನಿಸಿದೆ. ಅವರನ್ನು ಸ್ವಾಗತಿಸಲು ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಭಾರತೀಯ ಮೂಲದ ಮಂದಿ ಜಂಟಿ ಬೇಸ್ ಆಂಡ್ರ್ಯೂಸ್ ನಲ್ಲಿ ಜಮಾಯಿಸಿದ್ದರು. ಕೋವಿಡ್ 19(Coronavirus) ರ ಬಳಿಕ ಮೋದಿಯಮೊದಲ ಅಮೆರಿಕ(USA) ಭೇಟಿ ಇದಾಗಿದೆ. ಅಮೆರಿಕಕ್ಕೆ ಆಗಮಿಸಿದ ಮೋದಿಯನ್ನು ಉಪಕಾರ್ಯದರ್ಶಿ ಟಿಎಚ್ ಬ್ರಿಯಾನ್ ಮೆಕೇನ್ ಸೇರಿದಂತೆ ಯುಎಸ್ ಆಡಳಿತದ ಇತರ ಅಧಿಕಾರಿಗಳು ಬರಮಾಡಿಕೊಂಡರು.

ಅನಿವಾಸಿ ಭಾರತೀಯರು ಮೋದಿಯನ್ನು ಕಾಣಲು ಬಹಳಷ್ಟು ಉತ್ಸಾಹದಿಂದ ನೆರೆದಿದ್ದರು. ದೀರ್ಘ ಪ್ರಯಾಣದ ಹೊರತಾಗಿಯೂ, ಮೋದಿಯವರ ಮುಖದಲ್ಲಿ ಯಾವುದೇ ದಣಿವು ಇರಲಿಲ್ಲ. ಜನರನ್ನು ನಗು ನಗುತ್ತಲೇ ಭೇಟಿಯಾಗಿದ್ದಾರೆ.

ಈ ಸ್ವಾಗತದಿಂದ ಬಹಳಷ್ಟು ಸಂತೋಷಗೊಂಡ ಪ್ರಧಾನಿ ಮೋದಿ, ಈ ಬಗ್ಗೆ ಟ್ವೀಟ್ ಮಾಡಿದ್ದು, "ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ಸಮುದಾಯಕ್ಕೆ, ಅವರ ಆತ್ಮೀಯ ಸ್ವಾಗತಕ್ಕಾಗಿ ಧನ್ಯವಾದಗಳು. ನಮ್ಮ ದೇಶದ ವಲಸಿಗರು ನಮ್ಮ ಶಕ್ತಿ. ಭಾರತೀಯ ವಲಸಿಗರು ಜಗತ್ತಿನಾದ್ಯಂತ ತಮ್ಮನ್ನು ತಾವು ಗುರುತಿಸಿಕೊಳ್ಳುವಂತೆ ಮಾಡಿರುವುದು ಶ್ಲಾಘನೀಯ ಎಂದಿದ್ದಾರೆ.

Tap to resize

ಮೋದಿ ಅವರು ವಾಷಿಂಗ್ಟನ್ ಡಿಸಿಯ ಜಂಟಿ ಬೇಸ್ ಆಂಡ್ರ್ಯೂಸ್ ತಲುಪುತ್ತಿದ್ದಂತೆಯೇ, ಅಲ್ಲಿದ್ದ ಅನಿವಾಸಿ ಭಾರತೀಯರು ಮೋದಿ-ಮೋದಿ ಎಂಬ ಘೋಷಣೆಗಳನ್ನು ಕೂಗಲಾರಂಭಿಸಿದ್ದಾಋಎ. ಇದನ್ನು ನೋಡಿದ ಮೋದಿ ಮುಗುಳ್ನಕ್ಕು, ಜನರು ಕೈಕುಲುಕಲು ಆರಂಭಿಸಿದ್ದಾರೆ.

ಅನಿವಾಸಿ ಭಾರತೀಯರ ಉತ್ಸಾಹ ಕಂಡು, ಪ್ರಧಾನಿ ನರೇಂದ್ರ ಮೋದಿಗೆ ತಮ್ಮನ್ನು ತಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಜನರನ್ನು ನಗುತ್ತಾ ಭೇಟಿಯಾದರು ಮತ್ತು ಕೈಕುಲುಕಿದರು.
 

ವಾಷಿಂಗ್ಟನ್ ಡಿಸಿಯ ಜಂಟಿ ಬೇಸ್ ಆಂಡ್ರ್ಯೂಸ್ ನಲ್ಲಿ ಮೋದಿಗಾಗಿ ಕಾತುರದಿಂದ ಕಾಯುತ್ತಿರುವ ಅನಿವಾಸಿ ಭಾರತೀಯರು. ಮೋದಿಯವರನ್ನು ಭೇಟಿಯಾಗಲು ಎದುರು ನೋಡುತ್ತಿರುವ ದೃಶ್ಯ.

ಮೋದಿಯವರನ್ನು ವಾಷಿಂಗ್ಟನ್‌ನಲ್ಲಿ ಸ್ವಾಗತಿಸಲು ಬ್ರಿಗೇಡಿಯರ್ ಅನೂಪ್ ಸಿಂಘಾಲ್, ವಾಯುಪಡೆ ಅಧಿಕಾರಿ ಅಂಜನ್ ಭದ್ರ ಮತ್ತು ನೌಕಾ ಅಧಿಕಾರಿ ನಿರ್ಭಯಾ ಬಪ್ನಾ ಅವರೊಂದಿಗೆ ಅಮೆರಿಕದ ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಹಾಜರಿದ್ದರು.
 

ವಾಷಿಂಗ್ಟನ್‌ಗೆ ಆಗಮಿಸಿದ ನಂತರ, ಮೋದಿಯವರನ್ನು ಯುಎಸ್ ಆಡಳಿತದ ಉಪ ಕಾರ್ಯದರ್ಶಿ ಟಿಎಚ್ ಬ್ರಿಯಾನ್ ಮೆಕೇನ್ ಸೇರಿದಂತೆ ಇತರ ಅಧಿಕಾರಿಗಳು ಸ್ವಾಗತಿಸಿದರು. ಮೋದಿಯವರ ಈ ಅಮೆರಿಕ ಭೇಟಿ ಬಹಳ ಮಹತ್ವದ್ದಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಬುಧವಾರ ದೆಹಲಿಗೆ ವಾಯುಪಡೆ 1 ಬೋಯಿಂಗ್ 777 337 ಇಆರ್ ವಿಮಾನದಲ್ಲಿ ಅಮೆರಿಕಕ್ಕೆ ತೆರಳಿದ್ದರು ಎಂಬುವುದು ಉಲ್ಲೇಖನೀಯ. ಅವರು ಶುಕ್ರವಾರ ಅಮೆರಿಕದಲ್ಲಿ ಅಧ್ಯಕ್ಷ ಜೋ ಬೈಡೆನ್ ಅವರನ್ನು ಭೇಟಿಯಾಗಲಿದ್ದಾರೆ.

Latest Videos

click me!