ರಾತ್ರಿ ಬೆಳಗಾಗೋದ್ರಲ್ಲಿ ಟ್ರೆಂಡ್ ಆದ ದನನೀರ್: ವೈರಲ್ ಆದ ಚೆಲುವೆ ಇವಳೇ ನೋಡಿ

First Published | Feb 16, 2021, 6:52 PM IST

#pawrihorihai ಎಂಬ ಹ್ಯಾಶ್ಟ್ಯಾಗ್ ಸಿಕ್ಕಾಪಟ್ಟೆ ಟ್ರೆಂಡ್ ಆಯ್ತು. ಅದೇನು ಅಂತ ಎಲ್ಲರಿಗೂ ಗೊತ್ತಾಗೋ ಮುನ್ನವೇ ಅದರ ಹಿಂದಿನ ಮುದ್ದು ಮುಖದ ಚೆಲುವೆಯೇ ವೈರಲ್ ಆದಳು, ಯಾರಾಕೆ..? ಇಲ್ಲಿ ನೋಡಿ

ಈಕೆಯೇ ನೋಡಿ ದನನೀರ್. ಹೆಸರು ಒಂಚೂರು ವಿಚಿತ್ರ ಅನಿಸ್ತಿದ್ಯಲ್ಲಾ..? ಈಕೆ ನಮ್ಮ ದೇಶದವಳಲ್ಲ, ಪಾಕಿಸ್ತಾನದ ಚೆಲುವೆ.
undefined
ಗೆಳತಿಯರ ಜೊತೆ ಎಲ್ಲರಂತೆ ಒಂದು ಟ್ರಿಪ್ ಹೋಗಿದ್ದಳು. ಆ ಟ್ರಿಪ್ನಲ್ಲಿ ಫನ್ಗೆಂದು ಒಂದು ವಿಡಿಯೋ ಕೂಡಾ ಮಾಡಿದ್ದಳು.
undefined
Tap to resize

ಎಲ್ಲರೂ ಮಾಡೋ ಸಾಮಾನ್ಯ ಸೆಲ್ಫೀ ವಿಡಿಯೋ. ಆದ್ರೆ ಆ ವಿಡಿಯೋ ಸೋಷಿಯಲ್ ಮೀಡಿಯಾಗೆ ಅಪ್ ಆಗ್ತಿದ್ದ ಹಾಗೆ ಅಸಾಮಾನ್ಯ ಆಯ್ತು.
undefined
ಸಿಂಪಲ್ ಆದ ಒಂದು ವಿಡಿಯೋ ದನನೀರ್ನ ಫುಲ್ ಫೇಮಸ್ ಮಾಡಿಬಿಟ್ಟಿದೆ. #pawrihorihai ಅನ್ನೋ ಟ್ಯಾಗ್ ಅಂತೂ 17 ಸಾವಿರಕ್ಕೂ ಹೆಚ್ಚೂ ಟ್ವೀಟ್ ಪಡೆದಿದೆ.
undefined
ಮುದ್ದು ಮುಖದ ಚೆಲುವೆ ಹೆಚ್ಚೇನೂ ಮಾಡಿಲ್ಲ, ಕೈಯಲ್ಲಿ ಮೊಬೈಲ್ ಹಿಡಿದು, ಇದು ನಮ್ಮ ಕಾರು, ಇದು ನಾವು, ಪಾರ್ಟಿ ಆಗ್ತಿದೆ ಅಂತಷ್ಟೇ ಹೇಳಿದ್ದು.
undefined
ಇಷ್ಟೇ ಹೇಳಿದ ಮೇಲೆ ಈ ವಿಡಿಯೋ ಸೋಷಿಯಲ್ ಮೀಡಿಯಾಗೆ ಬೆಂಕಿ ಹಚ್ಚಿದ್ಯಾಕೆ ಅಂತೀರಾ..? ಅಲ್ಲೇ ಇರೋದು ಮ್ಯಾಟರ್
undefined
ಪಾಶ್ಚಿಮಾತ್ಯ ಸಂಸ್ಕೃತಿ ಮೋಹಿಸಿ, ಇಂಗ್ಲಿಷ್ ಭಾಷೆ ಮಾತನಾಡುವ, ಪದವನ್ನು ಉಚ್ಛರಿಸುವ ರೀತಿಯನ್ನೇ ಬದಲಾಯಿಸಿಕೊಂಡವರಿಗೆ ಟಾಂಗ್ ಕೊಡುವಂತಿದೆ ಈ ವಿಡಿಯೋ
undefined
ಬ್ಲೈಂಡ್ ಆಗಿ ವೆಸ್ಟರ್ನ್ ಸಂಸ್ಕೃತಿ ಫಾಲೋ ಮಾಡುವವರನ್ನು ಪಾಕ್ನಲ್ಲಿ ಬರ್ಗರ್ ಬಚ್ಚಾ ಅಂತಾರೆ. ಈ ಸಂಬಂಧ ಈಕೆ ಬಹಳಷ್ಟು ಮಾಕಿಂಗ್ ವಿಡಿಯೋ ಪೋಸ್ಟ್ ಮಾಡಿದ್ದಾರೆ.
undefined
ತಮ್ಮ ಸೆಲ್ಫೀ ವಿಡಿಯೋದಲ್ಲಿ ಪಾರ್ಟಿ ಅನ್ನೋ ಪದವನ್ನು ಬೇಕೆಂದೇ ಪ್ವಾರಿ ಅನ್ನೋ ತರ ಉಚ್ಚರಿಸಿದ್ದಾರೆ ದನನೀರ್.
undefined
ಇದೇ ಕಾರಣಕ್ಕೆ ನೋಡಿ ವಿಡಿಯೋ ವೈರಲ್ ಆಗಿದ್ದು, ಇದಕ್ಕೆ ಭಾರತ ಮ್ಯೂಸಿಕ್ ಕಂಪೋಸರ್ ಯಶ್ ರಾಜ್ ಮ್ಯೂಸಿಕ್ ಹಾಕಿ ರಿಮಿಕ್ಸ್ ಮಾಡಿ ವಿಡಿಯೋ ಮಾಡಿದ್ದಾರೆ.
undefined
ಎಡಿಟೆಡ್ ವರ್ಷನ್ ಅಂತೂ 3 ಮಿಲಿಯನ್ಗೂ ಹೆಚ್ಚು ವೀಕ್ಷಣೆ ಪಡೆದಿದೆ.ಅಂತೂ ಇಂತೂ ತನ್ನ ಒಂದೇ ಒಂದು ವಾಕ್ಯದಿಂದ ರಾತ್ರಿ ಬೆಳಗಾಗೋದ್ರಲ್ಲಿ ಫೇಮಸ್ ಆಗಿದ್ದಾಳೆ ದನನೀರ್
undefined
ನೆಟ್ಟಿಗರು ಯಾವುದನ್ನೂ ಮೆಚ್ತಾರೋ, ಯಾರನ್ನ ಟ್ರೋಲ್ ಮಾಡ್ತಾರೋ, ಯಾರನ್ನ ಸ್ಟಾರ್ ಮಾಡ್ತಾರೋ ಒಂದೂ ಗೊತ್ತಾಗಲ್ಲ ಅಲ್ವಾ..?
undefined

Latest Videos

click me!