ಸ್ಮಶಾನದಲ್ಲೂ ಕ್ಯೂಆರ್‌ ಕೋಡ್‌, ಸ್ಕ್ಯಾನ್‌ ಮಾಡಿದ್ರೆ ಸಿಗುತ್ತೆ ಮೃತರ ವಿವರ: ನಿಜಾನಾ?

First Published Sep 19, 2021, 4:34 PM IST

ಸೋಶಿಯಲ್ ಮೀಡಿಯಾದಲ್ಲಿ ಅನೇಕ ಫೋಟೋ, ವಿಡಿಯೋಗಳು ವೈರಲ್ ಆಗುತ್ತವೆ. ಇವುಗಳಲ್ಲಿ ನಿಜ ಯಾವುದು? ಸುಳ್ಳು ಯಾವುದು? ಎಂದು ಪತ್ತೆ ಹಚ್ಚುವುದೇ ಕಷ್ಟ. ಇತ್ತೀಚೆಗೆ ಇದೇ ರೀತಿ ನಕಲಿ ಫೋಟೋ ವೈರಲ್ ಆಗುತ್ತಿದೆ, ಇದರಲ್ಲಿ ಜಪಾನ್‌ನ ಸ್ಮಶಾನದಲ್ಲಿ ಕ್ಯೂಆರ್ ಕೋಡ್ ಇದೆ ಎಂದು ಹೇಳಲಾಗಿದೆ. ಅದನ್ನು ಮೃತ ವ್ಯಕ್ತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಸ್ಕ್ಯಾನ್ ಮಾಡಬಹುದು ಎಂಬ ಸಂದೇಶವೂ ಹರಿದಾಡಿದೆ. ಈ ಚಿತ್ರ ಸಂಪೂರ್ಣವಾಗಿ ನಕಲಿಯಾಗಿದ್ದರೂ ಭಾರೀ ವೈರಲ್ ಆಗಿದೆ. ಹೀಗಿರುವಾಗ, ಏಷ್ಯಾನೆಟ್ ನ್ಯೂಸ್ ಈ ಚಿತ್ರದ ಫ್ಯಾಕ್ಟ್‌ ಚೆಕ್‌ ನಡೆಸಿ, ಇದರ ಅಸಲಿಯತ್ತನ್ನು ಬಯಲು ಮಾಡಿದೆ.

ವೈರಲ್ ಫೋಟೋದಲ್ಲೇನಿದೆ?
ಮಹಿಳೆಯೊಬ್ಬಳು ಸ್ಮಶಾನದಲ್ಲಿ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ವೈರಲ್ ಆಗಿದ್ದು, ಜಪಾನ್‌ನಲ್ಲಿ ಕ್ಯೂಆರ್ ಕೋಡ್‌ಗಳಿರುವ ಸಮಾಧಿಗಳಿವೆ ಎಂಬ ಸಂದೇಶ ಹರಡಲಾಗುತ್ತಿದೆ. ಈ ಮೂಲಕ ಮೃತರ ಬಗ್ಗೆ ಮಾಹಿತಿ ಪಡೆಯಲು ಸ್ಕ್ಯಾನ್ ಮಾಡಬಹುದು ಎನ್ನಲಾಗಿದೆ.
 

ವೈರಲ್ ಆದ ಈ ಚಿತ್ರದ ಸತ್ಯಾಸತ್ಯತೆ ತಳಿಯಲು ಗೂಗಲ್ ರಿವರ್ಸ್‌ ಇಮೇಜ್ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಹೀಗಿರುವಾಗ ಚೀನಾದ ಅನಕ ವೆಬ್‌ಸೈಟ್ಗಳು 2015ರಲ್ಲಿ ವರದಿ ಮಾಡಿದ ಸುದ್ದಿಗಳ ಲಿಂಕ್‌ಗಳು ಪತ್ತೆಯಾಗಿವೆ.

ಇಲ್ಲಿ ಸಿಕ್ಕ ಮಾಹಿತಿ ಅನ್ವಯ 2015 ರಲ್ಲಿ, ಚೋಂಗ್‌ಕಿಂಗ್‌ನ ಫಾರಿನರ್ಸ್ ಸ್ಟ್ರೀಟ್ ಎಂಬ ಥೀಮ್ ಪಾರ್ಕ್‌ನಲ್ಲಿ ಚೀನಾ ಎರಡನೇ ಮಹಾಯುದ್ಧದ ಸಂತ್ರಸ್ತರಿಗೆ ಸ್ಮಾರಕವನ್ನು ನಿರ್ಮಿಸಿತ್ತು. ಉದ್ಯಾನವನಕ್ಕೆ ಭೇಟಿ ನೀಡುವವರು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಸಂತ್ರಸ್ತರಿಗೆ ಗೌರವ ಸಲ್ಲಿಸಬಹುದಾಗಿತ್ತು.

1937 ರಲ್ಲಿ ಎರಡನೇ ಮಹಾಯುದ್ಧದ ಮೊದಲು ನಾನ್ಜಿಂಗ್ ಹತ್ಯಾಕಾಂಡ ನಡೆಇತ್ತು. ಈ ಮೂಲಕ ಚೀನಾ-ಜಪಾನ್ ಯುದ್ಧ ಪ್ರಾರಂಭವಾಯಿತು. ಚೀನಾದ ಆಕ್ರಮಣದ ಬಳಿಕ, ಜಪಾನಿನ ಇಂಪೀರಿಯಲ್ ಆರ್ಮಿಯ ಸೈನಿಕರು ಚೀನಾದ ನಾಗರಿಕರನ್ನು ಹತ್ಯೆ ಮಾಡಿದರು. ಒಂದು ವರದಿಯ ಪ್ರಕಾರ, ಹತ್ಯಾಕಾಂಡದಲ್ಲಿ ಸತ್ತ ಚೀನಿಯರ ಸಂಖ್ಯೆ 300,000 ಆಸುಪಾಸು ಎನ್ನಲಾಗಿದೆ.

ಏಶಿಯಾನೆಟ್ ನ್ಯೂಸ್ ವೈರಲ್ ಚಿತ್ರವನ್ನು ಪರಿಶೀಲಿಸಿದಾಗ ಅದು ಜಪಾನ್‌ನಿದ್ದಲ್ಲ, ನೈರುತ್ಯ ಚೀನಾದ ಫೋಟೋ ಎಂಬುವುದು ಸ್ಪಷ್ಟವಾಗಿದೆ. 2015 ರಲ್ಲಿ ಥೀಮ್ ಪಾರ್ಕ್‌ನಲ್ಲಿ ತೆಗೆದ ಫೋಟೋ ಆಗಿದೆ. ಇನ್ನು ವೈರಲ್ ಆದ ಫೋಟೋದಲ್ಲಿ ಕಾಣುವ ಸಮಾಧಿಯು ನಿಜವಲ್ಲ. ಈ ಪಾರ್ಕ್ ಅನ್ನು ಎರಡನೇ ಮಹಾಯುದ್ಧದ ಸಮಯದಲ್ಲಿ ಚೀನಾದಲ್ಲಿ ಜಪಾನಿನ ಸೈನಿಕರು ಬಾಂಬ್ ದಾಳಿಗೆ ಬಲಿಯಾದವರ ನೆನಪಿಗಾಗಿ ನಿರ್ಮಿಸಲಾಗಿದೆ. 

click me!