ನೋ ಪ್ಯಾಂಟ್ಸ್ ಡೇ; ಪ್ಯಾಂಟಿಯಲ್ಲೇ ಪೇಟೆ ಸುತ್ತಿದ ಪ್ಯಾಟೆ ಮಂದಿ!

First Published | May 4, 2024, 11:01 AM IST

ಮೇ 3ರಂದು ಅಮೆರಿಕ, ಲಂಡನ್, ಬರ್ಲಿನ್, ಪ್ರಾಗ್‌ನ ಜನರು ನೋ ಪ್ಯಾಂಟ್ಸ್ ಡೇ ಆಚರಿಸಿದರು, ಬರೀ ಪ್ಯಾಂಟಿಯಲ್ಲಿ ಮೆಟ್ರೋ, ಹೈವೇ, ಹೋಟೆಲ್ ಹೋಗಿ ಸಂಭ್ರಮಿಸಿದರು. 

ಮೆನ್ಸ್ ಡೇ, ವಿಮೆನ್ಸ್ ಡೇ, ಬರ್ಡ್ ಡೇ, ಬರ್ತ್ ಡೇ ಎಲ್ಲ ಓಕೆ, ಇದೇನಿದು ನೋ ಪ್ಯಾಂಟ್ಸ್ ಡೇ? ಅದೂ ನ್ಯಾಷನಲ್ ನೋ ಪ್ಯಾಂಟ್ಸ್ ಡೇ! 

ಮೇ 3ರಂದು ಅಮೆರಿಕ, ಲಂಡನ್ ಸೇರಿದಂತೆ ಹಲ ದೇಶಗಳ ಜನರು ಪ್ಯಾಂಟ್ ಧರಿಸದೆ ಮೆಟ್ರೋ, ಹೈವೇ, ಹೋಟೆಲ್ ಮುಂತಾದೆಡೆ ಕಂಡುಬಂದರು. 

Latest Videos


ಹೌದು, ಇದಕ್ಕೆ ಕಾರಣ ಅಮೆರಿಕ, ಲಂಡನ್, ಬರ್ಲಿನ್,ಆಸ್ಟ್ರೇಲಿಯಾ, ಪ್ರಾಗ್‌ನ ಜನರು ಪ್ರತಿ ವರ್ಷ ಮೇ ಮೊದಲ ಶುಕ್ರವಾರ ನೋ ಪ್ಯಾಂಟ್ಸ್ ಡೇ ಆಚರಿಸುವುದು. 

ರಾಷ್ಟ್ರೀಯ ಪ್ಯಾಂಟ್ ರಹಿತ ದಿನದ ಇತಿಹಾಸ
1980ರ ದಶಕದಲ್ಲಿ ಟೆಕ್ಸಾಸ್‌ನ ಆಸ್ಟಿನ್‌ನಲ್ಲಿ ರಾಷ್ಟ್ರೀಯ ನೋ ಪ್ಯಾಂಟ್ ದಿನದ ಮೊದಲ ನಿದರ್ಶನವು ಪ್ರಾರಂಭವಾಯಿತು.

ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ನೈಟ್‌ಹುಡ್ ಆಫ್ ಬುಹ್ ಎಂಬ ಹೆಸರಿನ ಕ್ಲಬ್ ತಮ್ಮ ಪರೀಕ್ಷೆ ಮುಗಿದ ಸಂಭ್ರಮ ಆಚರಿಸಲು ಪ್ಯಾಂಟ್ ಕಳಚಿ ಒಳಉಡುಪಿನಲ್ಲಿ ಓಡಾಡಿದರು. ಅಲ್ಲಿಂದ ಇದೊಂದು ಸಂಪ್ರದಾಯದಂತೆ ಮುಂದುವರಿಯಿತು. ಹಲವು ದೇಶಗಳು ಇದನ್ನು ಅನುಸರಿಸಿದವು.

ನ್ಯಾಶನಲ್ ನೋ ಪ್ಯಾಂಟ್ ಡೇ ರೀತಿಯಲ್ಲಿಯೇ, ನೋ ಪ್ಯಾಂಟ್ ಸಬ್‌ವೇ ರೈಡ್ ಡೇ ಅನ್ನು 2002 ರಲ್ಲಿ ಇಂಪ್ರೂವ್ ಎವೆರಿವೇರ್, ಹಾಸ್ಯ ಸಂಸ್ಥೆ ಪ್ರಾರಂಭಿಸಿತು. ನಂತರ ಪ್ರಪಂಚದಾದ್ಯಂತ 60 ಕ್ಕೂ ಹೆಚ್ಚು ನಗರಗಳಿಗೆ ಹರಡಿತು.
 

ಇಷ್ಟಕ್ಕೂ ಈ ಆಚರಣೆಗೆ ಯಾವುದೇ ಗುರಿ ಇಲ್ಲ. ಇದೊಂದು ತಮಾಷೆ, ಸಂತೋಷಕ್ಕಾಗಿ ಅಷ್ಟೇ. ಇದನ್ನು ನಾನ್‌ಸೆನ್ಸ್ ಡೇ ಎಂದೂ ಕರೆಯಬಹುದು ಎನ್ನುತ್ತಾರೆ ಆಯೋಜಕರು. 

ಹಲವರು ತಾವು ಪ್ಯಾಂಟ್ ಧರಿಸಿಲ್ಲ ಎಂಬುದು ಸುತ್ತಲಿರುವವರಿಗೆ ಅಚ್ಚರಿ ಉಂಟು ಮಾಡುವುದನ್ನು ಎಂಜಾಯ್ ಮಾಡುತ್ತಾರೆ. ತಾವು ಸಂಪೂರ್ಣ ದೈನಂದಿನ ರೀತಿಯಲ್ಲಿ ಪುಸ್ತಕ ಓದುತ್ತಲೋ, ಮೊಬೈಲ್ ಹಿಡಿದೋ ಸುತ್ತಲಿನವರ ಗಮನ ಅನುಭವಿಸುತ್ತಾರೆ.

ಈ ದಿನ ಹಲವರು ತಮ್ಮ ಕಂಫರ್ಟ್ ಝೋನ್ ‌ನಿಂದ ಹೊರಬಂದು ತಮ್ಮನ್ನು ತಾವು ತಮಾಷೆಯ ವಸ್ತುವಾಗಿ ನೋಡಲು ಕಲಿಯುತ್ತಾರೆ. ಇದೊಂದು ಉತ್ತಮ ಕಲಿಕೆ ಎಂಬುದು ಆಯೋಜಕರ ಮಾತು. 

ಪ್ರತಿದಿನದ ಗಂಭೀರತೆ, ತಲೆಬಿಸಿಗಳು, ಚಿಂತೆಗಳೆಲ್ಲದರಿಂದ ಬ್ರೇಕ್ ತೆಗೆದುಕೊಂಡು ದಿನವೊಂದನ್ನು ಮಜವಾಗಿ ಕಳೆಯುವ ಸಂಭ್ರಮ ನೀಡುವುದರಿಂದ ಹೆಚ್ಚು ಹೆಚ್ಚು ಜನರು ಈ ದಿನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 
 

click me!