ಮನೆಯಲ್ಲಿದ್ದು ಹಣ ಸಂಪಾದಿಸಲು NASA ಆಫರ್, ಒಂದು ಡಿಮಾಂಡ್ ಪೂರೈಸಿ 26 ಲಕ್ಷ ಗಳಿಸಿ!

First Published | Jun 29, 2020, 6:17 PM IST

ಕಣ್ಣಿಗೆ ಕಾಣದ ಕೊರೋನಾ ವೈರಸ್ ಮನುಷ್ಯರ ಜೀವನ ಶೈಲಿಯನ್ನೇ ಬದಲಾಯಿಸಿದೆ. ಈ ವೈರಸ್‌ನಿಂದಾಗಿ ಹಲವಾರು ದೇಶಗಳು ಲಾಕ್‌ಡೌನ್ ಘೋಷಿಸಿವೆ. ಅನೇಕ ದೇಶಗಳ ಅರ್ಥ ವ್ಯವಸ್ಥೆ ಭಾರೀ ಕುಸಿತ ಕಂಡಿದೆ ಹಾಗೂ ಅನೇಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನೀವು ಮನೆಯಲ್ಲಿದ್ದುಕೊಂಡೇ 26 ಲಕ್ಷ ರೂಪಾಯಿ ಹಣ ಸಂಪಾದಿಸುವ ಅವಕಾಶ ಸಿಕ್ಕರೆ? ಹೌದು... ಇದು ತಮಾಷೆಯಲ್ಲ. ಈ ಆಫರ್ ಯಾವುದೋ ಫ್ರಾಡ್ ಕಂಪನಿಯದ್ದಲ್ಲ, ಬದಲಾಗಿ ನಾಸಾ ಕೊಟ್ಟಿದ್ದು. ಅಮೆರಿಕದ ಅಂತರಿಕ್ಷ ಸಂಸ್ಥೆ ಜನರಿಗೊಂದು ಚಾಲೆಂಜ್ ಕೊಟ್ಟಿದೆ. ಇದನ್ನು ಯಾರು ಪೂರೈಸುತ್ತಾರೋ ಅವರ ಖಾತೆಗೆ 26 ಲಕ್ಷ ರೂಪಾಯಿ ಸೇರುವುದು ಖಚಿತ. ಅಷ್ಟಕ್ಕೂ ಈ ಚಾಲೆಂಜ್ ಏನು? ಇಲ್ಲಿದೆ ವಿವರ.

ನಾಸಾ ಇತ್ತೀಚೆಗಷ್ಟೇ ಅಂತರಿಕ್ಷ ಹಾಗೂ ಚಂದ್ರನ ಮೇಲೆ ಬಳಸುವಂತಹ ಟಾಯ್ಲೆಟ್ ಡಿಸೈನ್ ನಿರ್ಮಿಸಿಕೊಟ್ಟವರಿಗೆ ನಾಸಾ ಪರವಾಗಿ 26 ಲಕ್ಷ ರೂಪಾಯಿ ಕೊಡುವುದಾಗಿ ಘೋಷಿಸಿದೆ. ಅಂದರೆ ಜನರು ಗಗನಯಾನಿಗಳಿಗೆ ಟಾಯ್ಲೆಟ್ ಡಿಸೈನ್ ಮಾಡಿಕೊಡಬೇಕು.
undefined
ನಾಸಾ ಅತ್ಯುತ್ತಮವಾದ ಮೂರು ಡಿಸೈನ್‌ಗಳಿಗೆ ಅವಾರ್ಡ್‌ ನೀಡುವುದಾಗಿ ಘೋಷಿಸಿದೆ. ಬಾಹ್ಯಾಕಾಶ ಅಥವಾ ಚಂದ್ರನ ಮೇಲೆ ತೆರಳಲು ಯಾವ ರೀತಿಯ ಟಾಯ್ಲೆಟ್ ಅಗತ್ಯವಿದೆಯೋ ಅಂತಹದ್ದು ಈವರೆಗೆ ಲಭ್ಯವಿಲ್ಲ. ಇದೇ ಕಾರಣದಿಂದ ಗಗನಯಾನಿಗಳು ಬಹಳಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ.
undefined

Latest Videos


ಅತ್ಯಂತ ಹಗುರವಾದ ಹಾಗೂ ಬಳಸಲು ಸುಲಭವಾದ ಟಾಯ್ಲೆಟ್ ಮಾದರಿ ನೀಡಲು ನಾಸಾ ಸೂಚಿಸಿದೆ. ಅಲ್ಲದೇ ಸುಲಭವಾಗಿ ರಿಸೈಕ್ಲಿಂಗ್ ಮಾಡುವಂತಹ ಶೌಚಾಲಯ ಇದಾಗಿರಬೇಕೆಂದು ನಾಸಾ ತಿಳಿಸಿದೆ.
undefined
ಈಗಲ್ಲ, ಈ ಮೊದಲಿಂದಲೂ ನಾಸಾಗೆ ಈ ಶೌಚಾಲಯಗಳು ಬಹುದೊಡ್ಡ ಸಮಸ್ಯೆಯಾಗಿ ಉಳಿದಿವೆ. 1975ರಲ್ಲೂ ಬಾಹ್ಯಾಕಾಶದಿಂದ ಮರಳಿದ ಯಾತ್ರಿಗಳು ಅಲ್ಲಿ ಶೌಚಾಲಯವೇ ಗಂಭೀರವಾದ ಸಮಸ್ಯೆ ಎಂದು ದೂರಿದ್ದರು.
undefined
ಹೀಗಾಗಿ ಸದ್ಯ ನಾಸಾ ಜನರ ಬಳಿ ಅವರ ಕ್ರಿಯೆಟಿವಿಟಿ ತೋರಿಸಲು ಸೂಚಿಸಿದೆ.
undefined
ಯಾರು ಮಾಡಿದ ಡಿಸೈನ್ ನಾಸಾಗೆ ಅತಿ ಹೆಚ್ಚು ಇಷ್ಟವಾಗುತ್ತದೋ ಅವರ ಖಾತೆಗೆ 15 ಲಕ್ಷ, ಎರಡನೇ ಸ್ಥಾನದಲ್ಲಿ ಬರುವವರಿಗೆ 7 ಲಕ್ಷದ 60 ಸಾವಿರ ಹಾಗೂ ಮೂರನೇ ಸ್ಥಾನದಲ್ಲಿ ಬರಿವವರ ಖಾತೆಗೆ 3 ಲಕ್ಷದ 80 ಸಾವಿರ ಹಣ ಹಾಕಲಿದೆ.
undefined
ನಾಸಾ 2024ರಲ್ಲಿ ಮೊದಲ ಬಾರಿ ಓರ್ವ ಮಹಿಳೆಯನ್ನು ಮೂನ್ ಮಿಷನ್‌ಗೆ ಕಳುಹಿಸಲಿದೆ. ಹೀಗಾಗಿ ನಾಸಾಗೆ ಸದ್ಯ ಯೂನಿಸೆಕ್ಸ್ ಬಾತ್‌ರೂಂ ಅವಶ್ಯಕತೆ ಇದೆ.
undefined
ನಾಸಾದ ಈ ಚಾಲೆಂಜ್ ಪೂರ್ಣಗೊಳಿಸಲು ಆಗಸ್ಟ್ 17 ಕೊನೆಯ ದಿನಾಂಕ. ಅಲ್ಲಯವರೆಗೆ ನೀವು ಡಿಸೈನ್ ಕಳುಹಿಸಬಹುದು. ಅಕ್ಟೋಬರ್‌ನಲ್ಲಿ ವಿಜೇತರ ಹೆಸರು ಘೋಷಿಸಲಾಗುತ್ತದೆ.
undefined
ಇನ್ನು ಶೌಚಾಲಯ ಮೈಕ್ರೋ ಗ್ರಾವಿಟಿ ಹಾಗೂ ಲೂನಾರ್ ಗ್ರಾವಿಟಿ ನಡುವೆ ಕಾರ್ಯ ನಿರ್ವಹಿಸುವಂತಿರಬೇಕು.
undefined
click me!