ಪ್ಯಾಲೆಸ್ತೀನ್‌ ಪರ ನಿಂತ ಮಾಜಿ ನೀಲಿ ತಾರೆ ಕೆಲಸಕ್ಕೇ ಬಂತು ಕುತ್ತು!

First Published | Oct 10, 2023, 12:28 PM IST

ಇಸ್ರೇಲ್‌ ವಿರುದ್ದ ದಾಳಿ ಮಾಡಿದ ಪ್ಯಾಲೆಸ್ತೀನ್‌ ಪರ ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪೋಸ್ಟ್‌ ಮಾಡಿದ್ದ ಮಾಜಿ ನೀಲಿತಾರೆ ಮಿಯಾ ಖಲೀಫಾ ಕೆಲಸಕ್ಕೇ ಕುತ್ತು ಬಂದಿದೆ. ಹಾಗಾದ್ರೆ ಮಾಜಿ ನೀಲಿ ಚಿತ್ರಗಳ ತಾರೆ ಏನಂದಿದ್ರು ನೋಡಿ..

ಇಸ್ರೇಲ್ ಮತ್ತು ಹಮಾಸ್ ಸಂಘರ್ಷದ ಕುರಿತು ಸಂದೇಶಗಳನ್ನು ಪೋಸ್ಟ್ ಮಾಡಿದ ನಂತರ ಮಾಜಿ ನೀಲಿ ತಾರೆ ಮಿಯಾ ಖಲೀಫಾ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ. ವಾರಾಂತ್ಯದಲ್ಲಿ ಇಸ್ರೇಲ್‌ನ ಮೇಲೆ ಹಮಾಸ್‌ನ ಮಾರಣಾಂತಿಕ ದಾಳಿಯ ನಂತರ ಮಾಜಿ ನೀಲಿ ಚಲನಚಿತ್ರ ತಾರೆ ಎಕ್ಸ್‌ (ಈ ಹಿಂದಿನ ಟ್ವಿಟ್ಟರ್‌) ನಲ್ಲಿ ಪ್ಯಾಲೆಸ್ತೀನ್‌ ಪರ ಸರಣಿ ಟ್ವೀಟ್‌ಗಳನ್ನು ಮಾಡಿದ್ದರು.
 

ಹಮಾಸ್‌ ಉಗ್ರಗಾಮಿಗಳು ತಮ್ಮ ಶತ್ರು ಇಸ್ರೇಲ್‌ ಮೇಲೆ ಸಂಘಟಿತ ದಾಳಿ ನಡೆಸಿ ನೂರಾರು ಜನರನ್ನು ಕೊಂದಿದ್ದಾರೆ. ಅನೇಕರನ್ನು ಒತ್ತೆಯಾಳುಗಳಾಗಿ ತೆಗೆದುಕೊಳ್ಳಲಾಗಿದೆ ಮತ್ತು ಇಸ್ರೇಲ್ ಗಾಜಾದ ಮೇಲೆ ಪ್ರತೀಕಾರದ ವೈಮಾನಿಕ ದಾಳಿಯನ್ನು ಹುಟ್ಟುಹಾಕಿದ್ದು, ಇದರಿಂದ ಸಾವಿರಾರು ಜನರ ಸಾವು ನೋವು ಸಂಭವಿಸಿದೆ. 
 

Tap to resize

ಲೆಬನಾನ್‌ ಮೂಲದ ಹಾಗೂ ಅಮೆರಿಕದಲ್ಲಿ ವಾಸ ಮಾಡ್ತಿರುವ ಮಿಯಾ ಖಲೀಫಾ ಇತ್ತೀಚೆಗೆ ಪ್ಯಾಲೆಸ್ತೀನ್‌ ಪರ ಅನೇಕ ಟ್ವೀಟ್‌ಗಳನ್ನು ಮಾಡಿದ್ದರು. ಇದಕ್ಕೆ ತೀವ್ರ ಟೀಕೆಯನ್ನು ಎದುರಿಸುತ್ತಿದ್ದಾರೆ.
 

ನೀವು ಪ್ಯಾಲೆಸ್ತೀನ್‌ ಪರಿಸ್ಥಿತಿಯನ್ನು ನೋಡಬಹುದಾದರೆ ಮತ್ತು ಪ್ಯಾಲೆಸ್ತೀನ್‌ ಪರವಾಗಿ ಇರದಿದ್ದರೆ, ನೀವು ವರ್ಣಭೇದ ನೀತಿಯ ತಪ್ಪು ಕಡೆಯಲ್ಲಿದ್ದೀರಿ ಮತ್ತು ಇತಿಹಾಸವು ಅದನ್ನು ತೋರಿಸುತ್ತದೆ ಎಂದು ಪೋಸ್ಟ್‌ ಮಾಡಿದ್ದರು. ಅಲ್ಲದೆ, ಇಸ್ರೇಲ್‌ಗೆ ಬೆಂಬಲಸಿದ್ದ ಕೈಲೀ ಜೆನ್ನರ್‌ ವಿರುದ್ಧ ಮುಗಿಬಿದ್ದಿದ್ದರು.

ಅಲ್ಲದೆ, "ಯಾರಾದರೂ ದಯವಿಟ್ಟು ಪ್ಯಾಲೆಸ್ತೀನ್‌ನಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರಿಗೆ ಅವರ ಫೋನ್‌ಗಳನ್ನು ತಿರುಗಿಸಲು ಮತ್ತು ಅಡ್ಡಲಾಗಿ ಚಿತ್ರಿಸಲು ಹೇಳಬಹುದೇ" ಎಂದು ಎಕ್ಸ್‌ (ಈ ಹಿಂದಿನ ಟ್ವಿಟ್ಟರ್) ಪೋಸ್ಟ್‌ನಲ್ಲಿ ಹೇಳಿದ್ದರು.

 ಹಾಗೂ, "ನಕಲಿ ಗುಸ್ಸಿ ಶರ್ಟ್‌ಗಳಲ್ಲಿ ಜಿಯೋನಿಸ್ಟ್ ವರ್ಣಭೇದ ನೀತಿಯ ಆಡಳಿತವನ್ನು ಗೆರಿಲ್ಲಾ ಹೋರಾಟಗಾರರು ಉರುಳಿಸುತ್ತಿದ್ದಾರೆ ಎಂದು ನನಗೆ ನಂಬಲಾಗುತ್ತಿಲ್ಲ - ಈ ಕ್ಷಣಗಳ ಜೀವನಚರಿತ್ರೆಗಳು ಅದನ್ನು ಉತ್ತಮವಾಗಿ ಪ್ರತಿಬಿಂಬಿಸುತ್ತವೆ’’ ಎಂದೂ ಇನ್ನೊಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ. 

ಈ ಸಂದೇಶಗಳು ರೆಡ್‌ ಲೈಟ್‌ ಹಾಲೆಂಡ್‌ನ ಗಮನ ಸೆಳೆದಿದ್ದು, ಇದರಿಂದ ಆ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಮಿಯಾ ಖಲೀಫಾಳನ್ನು ಕೆಲಸದಿಂದ ತೆಗೆದುಹಾಕಿರೋದಾಗಿ ಹೇಳಿದ್ದಾರೆ. ಅಲ್ಲದೆ, ಉಗ್ರರ ಪರ ನಿಂತಿರೋದಿಕ್ಕೆ ಟೀಕೆಯನ್ನೂ ಮಾಡಿದ್ದಾರೆ.
 

ಉತ್ತರ ಅಮೆರಿಕ ಮತ್ತು ಯೂರೋಪ್‌ನಲ್ಲಿ ಫಂಕ್ಷನಲ್‌ ಅಣಬೆಗಳು ಮತ್ತು ಮಶ್ರೂಮ್ ಹೋಮ್ ಗ್ರೋ ಕಿಟ್‌ಗಳ ಉತ್ಪಾದನೆ, ಬೆಳವಣಿಗೆ ಮತ್ತು ಮಾರಾಟದಲ್ಲಿ ರೆಡ್‌ ಲೈಟ್‌ ಹಾಲೆಂಡ್‌ ಕಂಪನಿ  ತೊಡಗಿಸಿಕೊಂಡಿದೆ. ಈ ವರ್ಷದ ಆರಂಭದಲ್ಲಿ, ಈ ಕಂಪನಿ ಮಿಯಾ ಖಲೀಫಾ ಅವರನ್ನು 'ಸಲಹೆಗಾರ'ರಾಗಿ ನೇಮಿಸಿಕೊಂಡಿದ್ದರು.

ಅಲ್ಲಿ ಮಿಯ ಖಲೀಫಾ 'ಕಾರ್ಯತಂತ್ರದ ಸಾಮಾಜಿಕ ಉದ್ದೇಶ ಮತ್ತು ಸಮುದಾಯ ತೊಡಗಿಸಿಕೊಳ್ಳುವ ಉಪಕ್ರಮಗಳನ್ನು' ಮತ್ತು ಕಂಪನಿಯ ಆನ್‌ಲೈನ್ ಉಪಸ್ಥಿತಿಯನ್ನು ಬೆಳೆಸಲು ಸಹಾಯ ಮಾಡಲು ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್ ಅನ್ನು ಒದಗಿಸುವ ಕಾರ್ಯವನ್ನು ನಿರ್ವಹಿಸ್ತಿದ್ದರು. 
 

ಈ ಮದ್ಯೆ, ರೆಡ್ ಲೈಟ್ ಹಾಲೆಂಡ್ ಸಿಇಒ ಟಾಡ್ ಶಪಿರೊ ಅವರು ಇಸ್ರೇಲ್ ವರ್ಸಸ್ ಹಮಾಸ್‌ನಲ್ಲಿನ ಪೋಸ್ಟ್‌ಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. 'ಸ್ವಾತಂತ್ರ್ಯ ಹೋರಾಟಗಾರರಿಗೆ ಹೇಳಿ' ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ ಕಂಪನಿ ಸ್ಥಾಪಕ ಟಾಡ್‌ ಶಪಿರೋ, "ಇದೊಂದು ಭಯಾನಕ ಟ್ವೀಟ್ @miakhalifa "ನಿಮ್ಮನ್ನು ತಕ್ಷಣವೇ ವಜಾಗೊಳಿಸಲಾಗಿದೆ ಎಂದು ಪರಿಗಣಿಸಿ ಎಂದು ಪೋಸ್ಟ್‌ ಮಡಿದ್ದಾರೆ.

ಇದು ಅಸಹ್ಯಕರ. ದಯವಿಟ್ಟು ವಿಕಸನಗೊಳ್ಳಿರಿ ಮತ್ತು ಉತ್ತಮ ಮಾನವರಾಗಿರಿ. "ನೀವು ಸಾವು, ಅತ್ಯಾಚಾರ, ಹೊಡೆತಗಳು ಮತ್ತು ಒತ್ತೆಯಾಳುಗಳನ್ನು ಕ್ಷಮಿಸುವ ಸಂಗತಿಯು ನಿಜವಾಗಿಯೂ ಘೋರವಾಗಿದೆ. ಯಾವುದೇ ಪದಗಳು ನಿಮ್ಮ ಅಜ್ಞಾನವನ್ನು ವಿವರಿಸಲು ಸಾಧ್ಯವಿಲ್ಲ. ಮಾನವರು ಒಗ್ಗೂಡಬೇಕು, ವಿಶೇಷವಾಗಿ ದುರಂತದ ಸಂದರ್ಭದಲ್ಲಿ. ನೀವು ಉತ್ತಮ ವ್ಯಕ್ತಿಯಾಗಲು ನಾನು ಪ್ರಾರ್ಥಿಸುತ್ತೇನೆ. ಆದರೂ, ಇದು ನಿಮಗೆ ತುಂಬಾ ತಡವಾಗಿದೆ ಎಂದು ಸ್ಪಷ್ಟವಾಗಿ ತೋರುತ್ತದೆ." ಎಂದೂ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಆದರೂ, ತನ್ನ ಪೋಸ್ಟ್‌ಗಳನ್ನು ಸಮರ್ಥಿಸಿಕೊಂಡಿರೋ ಮಿಯಾ ಖಲೀಫಾ, ಪ್ಯಾಲೆಸ್ತೀನ್‌ ಮುಕ್ತವಾಗುವವರೆಗೆ ಇದು ಮುಕ್ತ ಪ್ಯಾಲೆಸ್ತೀನ್‌’’ ಎಂದು ಮತ್ತೊಂದು ಪೋಸ್ಟ್‌ ಮಾಡಿದ್ದಾರೆ. 

Latest Videos

click me!