Russia Ukraine Crisis : ಪತ್ನಿ, ಮಕ್ಕಳ ಪೋಟೋ ಹಂಚಿ ಸಂದೇಶ ಕೊಟ್ಟ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ

Published : Feb 26, 2022, 02:53 PM ISTUpdated : Feb 26, 2022, 03:50 PM IST

ಕಳೆದ 2 ದಿನಗಳಿಂದ ರಷ್ಯಾ-ಉಕ್ರೇನ್ ಸಮರ (Russia Ukraine Crisis) ನಡೆಯುತ್ತಿದೆ. ಅದರ ಮುಂದೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelenskyy)  ಅಸಹಾಯಕರಾಗಿದ್ದಾರೆ. ಆದರೂ ಕೊನೆಯುಸಿರ ವರೆಗೂ ಹೋರಾಡುವ ಸಂಕಲ್ಪ ತೊಟ್ಟಿದ್ದಾರೆ. ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಇತ್ತೀಚೆಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ತಮ್ಮ ಹೆಂಡತಿ ಮತ್ತು ಮಕ್ಕಳ ಬಗ್ಗೆ ಮಾತನಾಡುವಾಗ ಅಸಹಾಯಕ ಮತ್ತು ಭಾವುಕರಾಗಿದ್ದಾರೆ. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಅವರ ಕುಟುಂಬದ ಪರಿಚಯ ಇಲ್ಲಿದೆ.

PREV
19
Russia Ukraine Crisis :   ಪತ್ನಿ, ಮಕ್ಕಳ ಪೋಟೋ ಹಂಚಿ ಸಂದೇಶ ಕೊಟ್ಟ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ

 19 ಏಪ್ರಿಲ್ 2019 ರಂದು ಉಕ್ರೇನ್ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ವೊಲೊಡಿಮಿರ್ ಝೆಲೆನ್ಸ್ಕಿಗೆ ದೇಶಕ್ಕೆ ಮುಂದೆ ಈ ರೀತಿಯ ಪರಿಸ್ಥಿತಿ ಎದುರಾಗುತ್ತದೆ ಎಂಬ ಯಾವ ಕಲ್ಪನೆಯೂ ಇರಲಿಲ್ಲ. 
 


 

29

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದರು.  ಇದರಲ್ಲಿ ನಾನು ರಷ್ಯಾದ ಮೊದಲ ಗುರಿಯಾಗಿದ್ದು, ನನ್ನ ಕುಟುಂಬ ಎರಡನೇ ಸ್ಥಾನದಲ್ಲಿದೆ ಎಂದು ಹೇಳಿದ್ದರು. 

 

39

'ನಾನು ಭವಿಷ್ಯದಲ್ಲಿ ಅಧ್ಯಯನ ಮಾಡಲು ಮಗನನ್ನು ವಿದೇಶಕ್ಕೆ ಕಳುಹಿಸುವುದಿಲ್ಲ' ಎಂದು ರಷ್ಯಾದ ಉಕ್ರೇನ್ ಬಿಕ್ಕಟ್ಟಿನ ಸಿಕ್ಕಿಬಿದ್ದ ಮಗನ ಬಗ್ಗೆ ಮಾತನಾಡುತ್ತ  ತಾಯಿ ಒಬ್ಬರು ಕಣ್ಣೀರು ಹಾಕಿದ ದೃಶ್ಯ ಸಾಮಾನ್ಯವಾಗಿತ್ತು .

 

 

49

ಹೆಂಡತಿ ಮತ್ತು 2 ಮಕ್ಕಳೊಂದಿಗೆ ಸುಖ-ಸಂತೋಷದ ಕುಟುಂಬ ಇಂದು ಭಯದ ನೆರಳಿನಲ್ಲಿ ಬದುಕುವ ಅನಿವಾರ್ಯತೆಗೆ ಸಿಲುಕಿದೆ. ಅವರು 2003 ರಲ್ಲಿ ಒಲೆನಾ ವೊಲೊಡಿಮಿರಿವ್ನಾ ಝೆಲೆನ್ಸ್ಕಾ (Olena Volodymyrivna Zelenska)  ಅವರನ್ನು ವಿವಾಹವಾದರು. ಅವರು ಸಿವಿಲ್ ಇಂಜಿನಿಯರ್, ಸಮಾಜ ಸೇವಕ, ಉಕ್ರೇನಿಯನ್ ವಾಸ್ತುಶಿಲ್ಪಿ ಮತ್ತು ಚಿತ್ರಕಥೆಗಾರ. 

59

ಡಿಸೆಂಬರ್ 2019 ರಲ್ಲಿ ಅವರು ಫೋಕಸ್ ನಿಯತಕಾಲಿಕದ 100 ಅತ್ಯಂತ ಪ್ರಭಾವಿ ಉಕ್ರೇನಿಯನ್‌ನ ಪಟ್ಟಿಯಲ್ಲಿ 30 ನೇ ಸ್ಥಾನದಲ್ಲಿದ್ದರು. ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಒಲೆನಾ ಅವರಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಮಗಳ ಹೆಸರು ಒಲೆಕ್ಸಾಂಡ್ರಾ ಮತ್ತು ಮಗನ ಹೆಸರು ಕೈರಿಲೋ.


 

69

ಅಧ್ಯಕ್ಷ ಝೆಲೆನ್ಸ್ಕಿ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಕಾಲಕಾಲಕ್ಕೆ ತನ್ನ ಮತ್ತು ಕುಟುಂಬದ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ವೊಲೊಡಿಮಿರ್ ಝೆಲೆನ್ಸ್ಕಿ ಹ್ಯಾಪಿ ಫ್ಯಾಮಿಲಿ ಫೋಟೋ ನೋಡಿ.


 

79

ವೊಲೊಡಿಮಿರ್ ಝೆಲೆನ್ಸ್ಕಿಅವರು 1995-2000 ರಲ್ಲಿ ಕೀವ್ ರಾಷ್ಟ್ರೀಯ ಆರ್ಥಿಕ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದರು. ಇದರೊಂದಿಗೆ, ಅವರು ತಮ್ಮ ನಟನಾ ವೃತ್ತಿಜೀವನದ ಮೇಲೆ ಕೇಂದ್ರೀಕರಿಸಿದರು ಮತ್ತು ಅನೇಕ ಹಾಸ್ಯ ಕಾರ್ಯಕ್ರಮಗಳಲ್ಲಿ  ಭಾಗವಹಿಸಿದರು. 

89

2012 ರಲ್ಲಿ ರಾಜಕೀಯಕ್ಕೆ ಸೇರಿದ ನಂತರ, ಅವರು 2019 ರಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದರು ಮತ್ತು ಪೆಟ್ರೋ ಪೊರೊಶೆಂಕೊ ಅವರನ್ನು ಶೇಕಡಾ 70 ಕ್ಕಿಂತ ಹೆಚ್ಚು ಮತಗಳಿಂದ ಸೋಲಿಸಿದರು.


 

 

99

ಅವರ ಅಧ್ಯಕ್ಷತೆಯಲ್ಲಿ, ಅವರು ಉಕ್ರೇನ್‌ನ ಸಂವಿಧಾನವನ್ನು ತಿದ್ದುಪಡಿ ಮಾಡಿದರು ಮತ್ತು ದೇಶವನ್ನು NATO ಮತ್ತು ಯುರೋಪಿಯನ್ ಒಕ್ಕೂಟದ ಸದಸ್ಯರನ್ನಾಗಿ ಮಾಡುವ ನೀತಿಯನ್ನು ಘೋಷಿಸಿದರು. ಇದನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರೋಧಿಸುತ್ತಿದ್ದಾರೆ.
 

Read more Photos on
click me!

Recommended Stories