ವೆಸ್ಟರ್ನ್‌ ಟಾಯ್ಲೆಟ್‌, ಇಂಡಿಯನ್‌ ಶೈಲಿಯಲ್ಲಿ ಕುಳಿತವನ ಗುದದ್ವಾರಕ್ಕೆ 20 ಹೊಲಿಗೆ!

Published : Sep 02, 2020, 05:59 PM IST

ಅತಿ ಹೆಚ್ಚು ನೆಮ್ಮದಿ ಎಲ್ಲಿ ಸಿಗುತ್ತದೆ ಎಂದು ಕೇಳಿದರೆ, ಒಂದು ಬಾರಿ ಬಾತ್‌ರೂಂ ನೆನಪಾಗುವುದು ಸಹಜ. ಇಲ್ಲಿ ಎಲ್ಲರೂ ತಮ್ಮ ಪ್ರೆಶರ್ ಹೊರ ಹಾಕುತ್ತಾರೆ. ಈ ಮೂಲಕ ಜನರು ತಮ್ಮ ಚಿಂತೆಯನ್ನು ಮರೆಯುತ್ತಾರೆ. ಆದರೆ ಇಲ್ಇ ನಡೆಯುವ ಕೆಲ ಘಟನೆಗಳು ನೆಮ್ಮದಿ ಕಸಿದು ಜೀವನ ಪರ್ಯಂತ ನೋವು ನೀಡುತ್ತವೆ. ಚೀನಾದ ಯುವಕನಿಗೆ ಟಾಯ್ಲೆಟ್‌ನಲ್ಲಿ ಬಹಳ ಕಹಿ ಅನುಭವವಾಗಿದ್ದು, ಆತನ ದೇಹಕ್ಕೆ ಬರೋಬ್ಬರಿ 20 ಹೊಲಿಗೆಗಳು ಬಿದ್ದಿವೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ವ್ಯಕ್ತಿ ತಾನು ಟಾಯ್ಲೆಟ್‌ ಸೀಟ್‌ ಮೇಲೆ ಕುಳಿತುಕೊಂಡ ಮರುಕ್ಷಣವೇ ಶೌಚಾಲಯ ಭಾರೀ ಸದ್ದಿನೊಂದಿಗೆ ಛಿದ್ರ ಛಿದ್ರವಾಗಿದೆ. ಇಷ್ಟೇ ಅಲ್ಲದೇ ಈತ ತನ್ನ ಚಿಕಿತ್ಸೆಯ ಖರ್ಚು ಮಾತ್ರವಲ್ಲದೇ, ಹೋಟೆಲ್‌ಗೆ ಹಾನಿ ಮಾಡಿದ ಶೌಚಾಲಯದ ವೆಚ್ಚವನ್ನೂ ನೀಡಬೇಕಾಗಿದೆ. ಆತ ಹೋಟೆಲ್ ವಿರುದ್ಧ ದೂರು ನೀಡಿದ್ದಾನೆ, ಆದರೆ ಹೋಟೆಲ್ ಸಿಬ್ಬಂದಿ ಮಾತ್ರ ಆತನನ್ನೇ ದೂರಿದ್ದಾರೆ.

PREV
17
ವೆಸ್ಟರ್ನ್‌ ಟಾಯ್ಲೆಟ್‌, ಇಂಡಿಯನ್‌ ಶೈಲಿಯಲ್ಲಿ ಕುಳಿತವನ ಗುದದ್ವಾರಕ್ಕೆ 20 ಹೊಲಿಗೆ!

ಈ ಘಟನೆ ಚೀನಾದಲ್ಲಿ ನಡೆದಿದೆ. ಇಲ್ಲಿನ ಶಾಂಕ್ಸೀಯ 25 ವರ್ಷದ ಯುವಕನೊಬ್ಬ ತಾಯುವಾನ್‌ನ ಹೋಟೆಲ್‌ಗೆ ತೆರಳಿದ್ದ. ಅಲ್ಲೇ ಆತನಿಗೆ ಈ ಕಹಿ ಅನುಭವ ಆಗಿದೆ. 

27

ವ್ಯಕ್ತಿಯನ್ನು ಮಿಸ್ಟರ್ ಲೀ ಎಂದು ಗುರುತಿಸಲಾಗಿದೆ. ಹೋಟೆಲ್‌ಗೆ ತೆರಳಿದ ಆತ ಫ್ರೆಶ್ ಆಗಲು ಟಾಯ್ಲೆಟ್‌ಗೆ ತೆರಳಿ ಕುಳಿತುಕೊಂಡ ಮರುಕ್ಷಣವೇ ಅದು ಭಾರೀ ಶಬ್ಧದೊಂದಿಗೆ ಮುರಿದಿದೆ.

37

ಘಟನೆಯಲ್ಲಿ ಮಿಸ್ಟರ್ ಲೀ ದೇಹಕ್ಕೂ ಭಾರೀ ಗಾಯಗಳಾಗಿವೆ. ಚಿಕಿತ್ಸೆ ವೇಳೆ ಆತನ ಗುದದ್ವಾರಕ್ಕೆ ಇಪ್ಪತ್ತು ಹೊಲಿಗೆ ಬಿದ್ದಿವೆ. ಗಂಭೀರ ಸ್ಥಿತಿಯಲ್ಲಿ ಬಿದ್ದಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

47

ಘಟನೆ ಬೆನ್ನಲ್ಲೇ ಹೋಟೆಲ್‌ ಅಧಿಕಾರಿಗಳು ಆತನ ಚಿಕಿತ್ಸೆ ವೆಚ್ಚ ಭರಿಸುವುದಾಗಿ ಹೇಳಿದ್ದರು. ಆದರೆ ಅಚಾನಕ್ಕಾಗಿ ಅವರು ಲೀ ವಿರುದ್ಧವೇ ದೂರು ದಾಖಲಿಸಿದ್ದಾರೆ.

57

ಹೋಟೆಲ್ ಅಧಿಕಾರಿಗಳು ಹೇಳುವ ಅನ್ವಯ ಲೀ ವೆಸ್ಟರ್ನ್‌ ಟಾಯ್ಲೆಟ್‌ನಲ್ಲಿ ಇಂಡಿಯನ್‌ ಸ್ಟೈಲ್‌ನಲ್ಲಿ ಕುಳಿತಿದ್ದ, ಹೀಗಾಗೇ ಈ ಘಟನೆ ನಡೆದಿದೆ. ಹೀಗಾಗಿ ಗಾಯಗೊಂಡ ಲೀ ಹೋಟೆಲ್‌ಗೂ ದಂಡ ಭರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

67

ಘಟನೆ ಬಳಿಕ ಲೀಗೆ ಕುಳಿತುಕೊಳ್ಳಲೂ ಕಷ್ಟವಾಗತೊಡಗಿದೆ. ಆತನಿಗೆ ಎದ್ದು ನಿಂತುಕೊಳ್ಳಲೂ ಆಗುತ್ತಿಲ್ಲ. ಆತನ ಗುದದ್ವಾರಕ್ಕೆ ಇಪ್ಪತ್ತು ಹೊಲಿಗೆ ಹಾಕಿದ್ದಾರೆ. ಸಾಲದೆಂಬಂತೆ ಆಸ್ಪತ್ರೆ ಹಾಗೂ ಹೋಟಲ್ ಖರ್ಚು.

77

ಇನ್ನು ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಹೋಟೆಲ್ ಸಿಬ್ಬಂದಿ ಆರಂಭದಲ್ಲಿ ನಮ್ಮದೇ ತಪ್ಪೆಂದು ನಾವು ಭಾವಿಸಿದ್ದೆವು. ಆದರೆ ಇದಾದ ಬಳಿಕ ಮುರಿದ ಟಾಯ್ಲೆಟ್‌ನಲ್ಲಿ ಪರಿಶೀಲನೆ ನಡೆಸಿದಾಗ ಚಪ್ಪಲಿ ಗುರುತು ಕಾಣಿಸಿದ್ದು, ಇದಾದ ಬಳಿಕ ತಪ್ಪು ಆ ವ್ಯಕ್ತಿಯದ್ದೆಂದು ಸಾಬೀತಾಗಿದೆ ಎಂದಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories