Fact Check: ಸೆಕ್ಸಿಯಾಗಿದ್ದಕ್ಕೆ ಕೆಲಸ ಕಳೆದುಕೊಂಡ್ಲಾ ಪಾಕ್ ಟೀಚರ್?
First Published | Aug 29, 2020, 7:21 PM ISTಮಾದಕ ಮೈಮಾಟ ಹೊಂದಿದ್ದ ಕಾರಣಕ್ಕೆ ಪಾಕಿಸ್ತಾನದ ಲಾಹೋರ್‌ನಲ್ಲಿ ಕಾಲೇಜು ಶಿಕ್ಷಕಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂಬ ಸುದ್ದಿಯೊಂದು ಕಳೆದ ವಾರ ಸಖತ್ ಸದ್ದು ಮಾಡಿತ್ತು. 'ರಿಪಬ್ಲಿಕ್ ಆಫ್ ಬಜ್' ಎಂಬ ವೆಬ್ಸೈಟ್‌ನಲ್ಲಿ ಪ್ರಕಟವಾದ ವರದಿಯಂತೆ ವಿವಾಹಿತೆ, ಎರಡು ಮಕ್ಕಳ ತಾಯಿಯಾದ ಆಸಿಯಾ ಝುಬೈರ್ ಎಂಬಾಕೆಯು ಸೆಕ್ಸೀ ಫಿಗರ್ ಹೊಂದಿರುವ ಕಾರಣ, ಇದು ಕಾಲೇಜು ವಿದ್ಯಾರ್ಥಿಗಳ ಕಣ್ಣಿಗೆ ಬೀಳಲು 'ಅತಿಯಾದ ಆಕರ್ಷಣೆ'ಯಾಗಿರುವುದರಿಂದ ಆಗಸ್ಟ್ 11ರಂದು ಆಕೆಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎನ್ನಲಾಗಿತ್ತು. ಸಲ್ವಾರ್ ಕಮೀಜ್ ಧರಿಸಿರುವ ಯುವತಿಯೊಬ್ಬಳ ಫೋಟೋ ಹಾಕಿ ಅದೇ ಆಸಿಯಾ ಝುಬೈರ್ ಎಂಬಂತೆ ಬಿಂಬಿಸಲಾಗಿತ್ತು. ಸ್ವತಃ ಝುಬೈರ್ ತನ್ನ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದ ಸ್ಕ್ರೀನ್‌ಶಾಟ್ ಹಾಕಲಾಗಿತ್ತು. ಆಕೆ ವಿಷಯ ಪ್ರಸ್ತಾಪಿಸಿ, 'ನಾನು ಕಾಲೇಜಿಗೆ ಸಲ್ವಾರ್ ಕಮೀಜ್ ಹಾಕಿಕೊಂಡು ಹೋಗುವ ಜೊತೆಗೆ ವಿಷಯ ಜ್ಞಾನ ಹೊಂದಿರುವೆ. ಅದು ಬಿಟ್ಟು ಅವರಿಗಿನ್ನೇನು ಬೇಕು? ಇದೊಂದು ಅವಮಾನಕಾರಿ ನಡೆ' ಎಂದು ಪೋಸ್ಟ್‌ನಲ್ಲಿ ಹೇಳಿದ್ದರು. ಈ ಸುದ್ದಿ ಟ್ವಿಟ್ಟರ್, ಇನ್ಸ್ಟಾಗ್ರಾಂಗಳಲ್ಲಿ ವೈರಲ್ ಆಗಿ, ಈ ಕುರಿತು ಹಲವಾರು ಮೀಮ್ಸ್‌ಗಳು, ಐ ಸಪೋರ್ಟ್ ಆಸಿಯಾ ಎಂಬ ಸ್ಲೋಗನ್‌ಗಳು ಬಹಳವಾಗಿ ಓಡಾಡಿದ್ದವು. ಈ ಸುದ್ದಿಯ ಅಸಲಿಯತ್ತೇನು ಎಂದು ತಡಕಾಡಿದಾಗ ಸಿಕ್ಕಿದ್ದಿಷ್ಟು.