ಐದು ತಿಂಗಳಿಗೇ ಹುಟ್ಟಿದ ಮಗು, ಅಪ್ಪ-ಅಮ್ಮನ ಮಡಿಲಲ್ಲಿ ಕೊನೆಯುಸಿರೆಳೆಯಿತು!
First Published | Aug 30, 2020, 4:29 PM ISTತಾಯಿಯ ಗರ್ಭದಲ್ಲಿ ಪುಟ್ಟ ಮಗುವೊಂದು ಒಂಭತ್ತು ತಿಂಗಳ ಅವಧಿ ಕಳೆಯುತ್ತದೆ. ಈ ನಡುವೆ ವೀರ್ಯವೊಂದು ಆರೋಗ್ಯಯುತ ಮಗುವಾಗಿ ಬದಲಾಗುತ್ತದೆ. ಒಂಭತ್ತು ತಿಂಗಳಲ್ಲಿ ಶಿಶುವಿಗೆ ಕಣ್ಣು, ಕಿವಿ ಸೇರಿದಂತೆ ದೇಹದ ಭಾಗಗಳೆಲ್ಲವೂ ಬೆಳೆಯುತ್ತವೆ. ಆದರೆ ಒಂದು ವೇಳೆ ಯಾವುದಾದರೂ ಕಾರಣದಿಂದ ಶಿಶು ಗರ್ಭದಲ್ಲೇ ಮೃತಪಟ್ಟರೆ ಇದು ತಾಯಿಯನ್ನು ಮಾನಸಿಕವಾಗಿ ಘಾಸಿಗೊಳಿಸುತ್ತದೆ. ಇನ್ನು ಅಮೆರಿಕದಲ್ಲಿ ಪ್ರತಿ ವರ್ಷ ಹತ್ತು ಲಕ್ಷ ಮಹಿಳೆಯರಿಗೆ ಅಬಾರ್ಷನ್ ಆಗುತ್ತದೆ. ಹೀಗಿರುವಾಗ ಅನೇಕ ಮಂದಿ ಮಹಿಳೆಯರು ಸೊಶಿಯಲ್ ಮೀಡಿಯಾದಲ್ಲಿ ತಾವು ತನ್ನ ಮಗುವನ್ನು ಕಳೆದುಕೊಂಡ ನೋವಿನ ಕತೆಯನ್ನು ಶೇರ್ ಮಾಡಿಕೊಳ್ಳುತ್ತಾರೆ. ಕೆಲ ಸಮಯದ ಹಿಂದೆ ಪೆಂನ್ಸಿಲ್ವೇನಿಯಾದ ದಂಪತಿಯೊಂದು ತಮ್ಮ ಕಂದನನ್ನು ಕಳೆದುಕೊಂಡ ನೋವನ್ನು ಹಂಚಿಕೊಂಡಿದ್ದರು. ಈ ದಂಪತಿಯ ಶಿಶು ಕೇವಲ 19 ವಾರಗಳಲ್ಲಿ ಗರ್ಭದಿಂದ ಹೊರ ಬಂದಿತ್ತು. ದಂಪತಿ ಇದರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿತ್ತು. ಗರ್ಭದಿಂದ ಐದು ತಿಂಗಳ ಮೊದಲೇ ಹೊರ ಬಂದ ಈ ಭ್ರೂಣವನ್ನು ನೋಡಿದವರೆಲ್ಲರೂ ಬೆಚ್ಚಿ ಬಿದ್ದಿದ್ದರು. ಈ ಫೋಟೋಗಳು ಶಾಕಿಂಗ್ ಆಗಿದ್ದರೂ ಇದರಲ್ಲಿ ದಂಪತಿಯ ನೋವೂ ಕಾಣಿಸಿಕೊಂಡಿತ್ತು. ಇಲ್ಲಿವೆ ನೋಡಿ ಆ ಚಿತ್ರಗಳು.