ಲಾಕ್‌ಡೌನ್ ವೇಳೆ ಫ್ಲ್ಯಾಟ್‌ನಿಂದ ವಿಚಿತ್ರ ಸದ್ದು, ಬಾಗಿಲು ತೆರೆದ ಪೊಲೀಸರಿಗೆ ಶಾಕ್!

First Published Apr 21, 2020, 6:00 PM IST

ಚೀನಾದಿಂದ ಹುಟ್ಟಿಕೊಂಡ ಕೊರೋನಾ ವೈರಸ್ ಸದ್ಯ ಬಹುತೇಕ ಎಲ್ಲಾ ರಾಷ್ಟ್ರಗಳಿಗೂ ವ್ಯಾಪಿಸಿದೆ. ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಅನೇಕ ರಾಷ್ಟ್ರಗಳು ಲಾಕ್‌ಡೌನ್ ಘೋಷಿಸಿವೆ. ಲಾಕ್‌ಡೌನ್‌ನಿಂದಾಗಿ ಜನರ ಓಡಾಟಕ್ಕೆ ಬ್ರೇಕ್ ಬಿದ್ದಿದೆ. ವೈರಸ್ ಬೇರೆಯವರಿಗೆ ಹರಡಬಾರದೆಂಬ ನಿಟ್ಟಿನಲ್ಲಿ ಈ ಲಾಕ್‌ಡೌನ್ ಹೇರಲಾಗಿದೆ. ಮಲೇಷ್ಯಾದಲ್ಲೂ ಲಾಕ್‌ಡೌನ್ ಹೇರಲಾಗಿದ್ದು, ಈ ನಡುವೆ ಇಲ್ಲಿನ ಫ್ಲ್ಯಾಟ್‌ ಒಂದರಲ್ಲಿದ್ದ ಬರೋಬ್ಬರಿ 19 ಮಂದಿ ಯುವಕ- ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ. ಕಾರಣವೇನು? ಇಲ್ಲಿದೆ ವಿವರ.

ಕೊರೋನಾ ವೈರಸ್ ಮಲೇಷ್ಯಾದಲ್ಲೂ ಆತಂಕ ಹುಟ್ಟು ಹಾಕಿದೆ. ಇಲ್ಲಿ ಈವರೆಗೂ 5,482 ಪ್ರಕರಣಗಳು ವರದಿಯಾಗಿದ್ದು, 92 ಮಂದಿ ಸಾವನ್ನಪ್ಪಿದ್ದಾರೆ.
undefined
ಮಲೇಷ್ಯಾದ ರಾಜಧಾನಿ ಕ್ವಾಲಾಲಂಪುರ ಬಳಿ ಮುಸ್ಲಿಂ ಸಮುದಾಯ ಬಹುದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದಾದ ಬಳಿಕ ಇಲ್ಲಿ ಪ್ರಕರಣಗಳು ಒಂದೇ ಸಮನೆ ಏರಲಾರಂಬಿಸಿದವು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹದಿನೈದು ಸಾವಿರ ಮಂದಿ ಭಾಗಿಯಾಗಿದ್ದರೆನ್ನಲಾಗಿದೆ.
undefined
ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅನೇಕ ಮಂದಿಯಲ್ಲಿ ಕೊರೋನಾ ವೈರಸ್ ಸೋಂಕು ಕಾಣಿಸಿಕೊಂಡಿತ್ತು.
undefined
ಕೊರೋನಾ ಪೀಡಿತರ ಸಂಖ್ಯೆ ಏರಿದ ಎನ್ನಲ್ಲೇ ಇಲ್ಲಿ ಲಾಕ್‌ಡೌನ್ ಹೇರಲಾಗಿತ್ತು. ಈ ಮೂಲಕ ಜನರು ಮನೆಯಲ್ಲಿರಲಿ ಹಾಗೂ ಕೊರೋನಾ ಸೋಂಕು ಹರಡದಿರಲಿ ಎಂಬುವುದು ಸರ್ಕಾರದ ಆಶಯವಾಗಿತ್ತು.
undefined
ಆದರೆ ಈ ನಡುವೆ ಕಜಂಗ್‌ನ ಅಪಾರ್ಟ್‌ಮೆಂಟ್ ನಿವಾಸಿಗರು ಪೊಲೀಸರಿಇಇಗೆ ದೂರೊಂದನ್ನು ನೀಡಿದ್ದಾರೆ ಹಾಗೂ ಫ್ಲ್ಯಾಟ್‌ ಒಂದರಿಂದ ಭಾರೀ ಸದ್ದು ಕೇಳುತ್ತಿರುವುದಾಗಿ ಹೇಳಿದ್ದಾರೆ.
undefined
ಈ ದೂರಿನ ಮೇರೆಗೆ ಇಲ್ಲಿನ ಜಿಲ್ಲಾ ಪೊಲೀಸ್ ಫ್ಲ್ಯಾಟ್‌ ಮೇಲೆ ದಾಳಿ ನಡೆಸಿದಾಗ ಅಲ್ಲಿ ಬರೋಬ್ಬರಿ 19 ಯುವಕ ಯುವತಿಯರು ಪತ್ತೆಯಾಗಿದ್ದಾರೆ. ಇವರಲ್ಲಿ 14 ಯುವಕರು ಹಾಗೂ 5 ಯುವತಿಯರು.
undefined
ಇವರೆಲ್ಲರೂ ಫ್ಲ್ಯಾಟ್‌ನಲ್ಲಿ ಎಣ್ಣೆ ಪಾರ್ಟಿ ಮಾಡತ್ತಿದ್ದರು. ಮನೆಯೊಳಗೆ ಜೋರಾಗಿ ಸದ್ದು, ಮ್ಯೂಜಿಕ್ ಹಾಕಲಾಗಿತ್ತು ಹಾಗೂ ಎಲ್ಲರೂ ನಶೆಯಲ್ಲಿ ತೇಲುತ್ತಿದ್ದರು.
undefined
ಇಲ್ಲಿನ ಪೊಲೀಸ್ ಎಲ್ಲರನ್ನೂ ಸೆಕ್ಷನ್ 6 (1) ಅಡಿಯಲ್ಲಿ ಸೋಂಕು ಹರಡಲು ಯತ್ನಿಸಿದ ಆರೋಪದಡಿಯಲ್ಲಿ ಬಂಧಿಸಿದ್ದಾರೆ.
undefined
click me!