ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ನಿಧನ?: ವೈರಲ್ ಆದ ಫೋಟೋ ಯಾರದ್ದು?

Published : Apr 26, 2020, 01:31 PM IST

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಂಬಂಧ ಅನೇಕ ವದಂತಿಗಳು ಹರಿದಾಡುತ್ತಿವೆ. ಸೋಶಿಯಲ್ ಮೀಡಿಯಾದಲ್ಲೂ ಹಲವಾರು ಹ್ಯಾಷ್ ಟ್ಯಾಗ್ಸ್ ಟ್ರೆಂಡ್ ಆಗಿವೆ. ಅಲ್ಲದೇ ಅನೇಕ ಅಂತರಾಷ್ಟ್ರೀಯ ಮಾಧ್ಯಮಗಳು ಅವವರು ಸಾವನ್ನಪ್ಪಿರುವುದಾಗಿ ವರದಿ ಮಾಡಿವೆ. ಕಳೆದ ಕೆಲ ದಿನಗಳಿಂದ ಕಿಮ್ ಆರೋಗ್ಯ ಸಂಬಂಧ ಗೌಪ್ಯತೆ ಕಾಪಾಡಿಕೊಳ್ಳಲಾಗಿದ್ದು, ಉತ್ತರ ಕೊರಿಯಾ ಕೂಡಾ ಈ ಕುರಿತಾಗಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ಜನರ ಅನುಮಾನ ಮತ್ತಷ್ಟು ಹೆಚ್ಚಿದೆ. ಸೋಶಿಯಲ್ ಮಿಡಿಯಾದಲ್ಲೂ ಹಲವಾರು ಫೋಟೋಗಳನ್ನು ಶೇರ್ ಮಾಡಿಕೊಳ್ಳಲಾಗುತ್ತಿದ್ದು, ಕೆಲವು ಅವರು ಸಾವನ್ನಪ್ಪಿರುವುದಾಗಿ ಹೇಳುತ್ತಿದ್ದರೆ, ಇನ್ನು ಕೆಲ ಫೋಟೋಗಳಲ್ಲಿ ಅವರು ಗಟ್ಟಿಮುಟ್ಟಾಗಿರುವುದು ಕಾಣಬಹದು. ಹೀಗಾಗೇ ಸದ್ಯ ಗೊಂದಲಗಳು ಮನೆ ಮಾಡಿವೆ.. ಸದ್ಯ ಈವರೆಗೆ ಕಿಮ್ ಸಂಬಂಧ ಸಿಕ್ಕ ಅಧಿಕೇತ ಮಾಹಿತಿಗಳ ಒಂದು ನೋಟ

PREV
110
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ನಿಧನ?: ವೈರಲ್ ಆದ ಫೋಟೋ ಯಾರದ್ದು?

ಕಿಮ್‌ಗೆ ಸಂಬಂಧಿಸಿದಂತೆ ಕಳೆದ ಕೆಲ ದಿನಗಳಿಂದ ಅನೇಕ ವರದಿಗಳು ಬಂದಿವೆ. ಇವುಗಳಲ್ಲಿ ಕಿಮ್ ಆರೋಗ್ಯ ಚೆನ್ನಾಗಿಲ್ಲ, ಗಂಭೀರವಾಗಿದೆ ಎಂದು ಹೇಳಲಾಗಿದೆ. ಇದಕ್ಕೆ ಪೂರಕವಾಗಿ ಕಿಮ್ ಪ್ರಿಲ್ 11ರ ಬಳಿಕ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ.

210

ಇನ್ನು ಏಪ್ರಿಲ್ 15 ರಂದು ನಡೆದಿದ್ದ ಅಜ್ಜನ ಹುಟ್ಟುಹಬ್ಬದ ಕಾರ್ಯಕ್ರಮದಲ್ಲೂ ಕಿಮ್ ಕಾಣಿಸಿಕೊಳ್ಳದಾಗ ಈ ವರದಿಗೆ ಮತ್ತಷ್ಟು ಬಲ ಸಿಕ್ಕಿತು. 

310

ಹೀಗಿದ್ದರೂ ಉತ್ತರ ಕೊರಿಯಾ ಈವರೆಗೂ ಕಿಮ್ ಆರೋಗ್ಯ ಸಮಬಂಧ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇನ್ನು ನೆರೆ ರಾಷ್ಟ್ರ ದಕ್ಷಿಣ ಕೊರಿಯಾ ಕೂಡಾ ಕಿಮ್ ಆರೋಗ್ಯ ಹದಗೆಟ್ಟಿದೆ ಎಂಬ ವರದಿಯನ್ನು ತಳ್ಳಿ ಹಾಕಿದೆ.

410

ಇನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ ಕಿಮ್ ಆರೋಗ್ಯ ಹದಗೆಟ್ಟಿರುವುದಾಗಿ ಹೇಳಿದ್ದರು. ಆದರೂ ವಿಶ್ವದ ದೊಡ್ಡಣ್ಣನ ಬಳಿ ಇದನ್ನು ಸಾಬೀತುಪಡಿಸಲು ಯಾವುದೇ ಸಾಕ್ಷಿ ಇಲ್ಲ. 

510

ಅಮೆರಿಕಾದ ಮಾಧ್ಯಮ ಸಿಎನ್‌ಎನ್‌ ಕೂಡಾ ಉತ್ತರ ಕೊರಿಯಾ ಸರ್ವಾಧಿಕಾರಿ ಆರೋಗ್ಯ ಗಂಭೀರವಾಗಿದೆ ಎಂದು ವರದಿ ಮಾಡಿತ್ತು. ಅಲ್ಲದೇ ಕಿಮ್ ಜೀವನ್ಮರಣ ಸ್ಥಿತಿಯ್ಲಲಿ ಹೋರಾಡುತ್ತಿದ್ದಾರೆಂದಿತ್ತು. ಹೃದಯ ಸಂಬಂಧಿ ಸಮಸ್ಯೆಗೆ ಸರ್ಜರಿ ನಡೆದಿದ್ದು, ಇದು ಯಶಸ್ವಿಯಾಗಿಲ್ಲ ಎಂದು ವರದಿ ಮಾಡಿತ್ತು.

610

ಸುದ್ದಿ ಸಂಸ್ಥೆ ರಾಯ್ಟರ್ಸ್ ಕೂಡಾ ವರದಿ ಪ್ರಕಟಿಸಿದ್ದು, ಚೀನಾದ ಒಂದು ತಂಡ ಕಿಮ್‌ ಚಿಕಿತ್ಸೆಗಾಗಿ ಉತ್ತರ ಕೊರಿಯಾಗೆ ತೆರಳಿರುವುದಾಗಿ ಹೇಳಿತ್ತು. ಆದರೆ ಕಿಮ್ ಆರೋಗ್ಯ ಹೇಗಿದೆ ಎಂದು ಈ ವರದಿಯಲ್ಲಿ ತಿಳಿಸಿರಲಿಲ್ಲ.

710

ಉತ್ತರ ಕೊರಿಯಾದಲ್ಲಿ ಮಾಧ್ಯಮಗಳಿಗೆ ಸ್ವಾತಂತ್ರ್ಯವಿಲ್ಲ. ಹೀಗಾಗಿ ಇಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ಮಾಹಿತಿ ಬಹಳಷ್ಟು ಗೌಪ್ಯವಾಗಿರುತ್ತ

810

ಇನ್ನು ಹಾಂಕಾಂಗ್‌ ಸ್ಯಾಟಲೈಟ್ ಟಿವಿಯ ಉಪ ನಿರ್ದೇಶಕ ತಮಗೆ ಲಭ್ಯವಾದ ಮಾಹಿತಿ ಅನ್ವಯ ಕಿಮ್ ಮೃತಪಟ್ಟಿದ್ದಾರೆಂದು ಹೇಳಿದ್ದರು. ಇದಕ್ಕೂ ಮುನ್ನ ಜಪಾನ್ ನಿಯತಕಾಲಿಕೆ ಕೂಡಾ ಇದೇ ವರದಿ ಬಿತ್ತರಿಸಿತ್ತು.

910

ಉತ್ತರ ಕೊರಿಯಾ ಕಿಮ್ ಆರೋಗ್ಯ ಸಂಬಂಧ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ KimJong, #KimJongUndead, #northkorea ಎಂಬ ಹ್ಯಾಷ್ ಟ್ಯಾಗ್‌ ಟ್ರೆಂಡ್ ಆಗಿವೆ.

1010

ಬಳಕೆದಾರರು ಹಲವಾರು ಬಗೆಯ ಸುದ್ದಿ ಹಾಗೂ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಹೀಗಿರುವಾಗ ಬಳಕೆದಾರನೊಬ್ಬ ಈ ಫೋಟೋ ಶೇರ್ ಮಾಡಿಕೊಂಡು ಕಿಮ್ ಮೃತಪಟ್ಟಿದ್ದಾರೆಂದು ಬರೆದುಕೊಂಡಿದ್ದಾರೆ. ಆದರೆ ಈ ಫೋಟೋ ಕಿಮ್ ತಂದೆ ಜಾಂಗ್ ಇಲ್ ಅಂತಿಮ ದರ್ಶನದ್ದಾಗಿದೆ. 

click me!

Recommended Stories