ಕೊರೋನಾ ಹಾವಳಿ ತಪ್ಪಿಸಲು ಬಂದಿವೆ ಬಣ್ಣ ಬಣ್ಣದ ಮಾಸ್ಕ್: ಇದೇ ಫ್ಯಾಷನ್ ಆಗುತ್ತಾ?

First Published Apr 25, 2020, 5:49 PM IST

ಚೀನಾದ ವುಹಾನ್‌ನಿಂದ ಹಬ್ಬಿಕೊಂಡ ಕೊರೋನಾ ನೋಡ ನೋಡುತ್ತಿದ್ದಂತೆಯೇ ಇಡೀ ಜಗತ್ತಿಗೆ ವ್ಯಾಪಿಸಿದೆ. ಈಗಾಗಲೇ 28 ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಕಾನಿಸಿಕೊಂಡಿದ್ದು, 1 ಲಕ್ಷದ 90 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಹೀಗಿರುವಾಗ ಕೊರೋನಾ ತಡೆಗಟ್ಟಲು ಆಯಾ ದೇಶಗಳು ವಿವಿಧ ಕ್ರಮಗಳನ್ನು ಜಾರಿಗೊಒಳಿಸಿವೆ. ಇನ್ನು ವಿಶ್ವದಾದ್ಯಂತ ಕೊರೋನಾ ತಡೆಯುವ ನಿಟ್ಟಿನಲ್ಲಿ ಜನರು ಮಾಸ್ಕ್ ಧರಿಸಲಾರಂಭಿಸಿದ್ದು, ಮಾಸ್ಕ್ ಬೇಡಿಕೆ ಗಗನಕ್ಕೇರಿದೆ. ಇನ್ನು ಬೇಡಿಕೆ ಹೆಚ್ಚಾದ ಹಿನ್ನೆಲೆ ಸದ್ಯ ಮಾರುಕಟ್ಟೆಗೆ ಭಿನ್ನ, ವಿಭಿನ್ನ ಶೈಲಿಯ ಬಣ್ಣ ಬಣ್ಣದ ಮಾಸ್ಕ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹೀಗಿರುವಾಗ ಜನ ತಮ್ಮಿಷ್ಟಕ್ಕೆ ತಕ್ಕಂತೆ ಖರೀದಿಸಿ ಇದನ್ನು ಧರಿಸಲಾರಂಭಿಸಿದ್ದಾರೆ. ಹೀಗಿರುವಾಗ ಕ್ಯಾಮೆರಾ ಕಣ್ಣಿನಲ್ಲಿ ಕಂಡು ಬಂದ ವಿಭಿನ್ನ ಬಗೆಯ ಮಾಸ್ಕ್‌ಗಳ ಒಂದು ನೋಟ ಇಲ್ಲಿದೆ.

ಬುಟ್ಟಿಯಲ್ಲಿ ಬಾಳೆಹಣ್ಣುಗಳನ್ನು ತುಂಬಿ ಮಾರಾಟ ಮಾಡಲು ತೆರಳುತ್ತಿರುವ ಮಾಸ್ಕ್ ಧರಿಸಿರುವ ವ್ಯಾಪಾರಿ.
undefined
ವಿಯೆಟ್ನಾಂನ ಹನೋಯಿಯಲ್ಲಿ, ಹೊಳೆಯುವ ಗುಲಾಬಿ ಬಣ್ಣದ ಮಾಸ್ಕ್ ಧರಿಸಿದ ಮಹಿಳೆ.
undefined
ಫ್ಲೋರಿಡಾದ ಮಿಯಾಮಿ ಬೀಚ್‌ನಲ್ಲಿ ಮಾಸ್ಕ್ ಧರಿಸಿದ ವ್ಯಕ್ತಿ.
undefined
ಫ್ಯಾಶನ್ ಡಿಸೈನರ್ ಅಲನ್ ಇಗಟಾನಿ, ಕೀನ್ಯಾದ ನೈರೋಬಿಯ ಬಡ ಪ್ರದೇಶಗಳಲ್ಲಿ ತಾವೇ ತಯಾರಿಸಿದ ಮಾಸ್ಕ್‌ಗಳನ್ನು ಉಚಿತವಾಗಿ ಹಂಚಿದ್ದಾರೆ.
undefined
ಜರ್ಮನಿಯ ಬರ್ಲಿನ್‌ನಲ್ಲಿ ರಾಕ್ ಬ್ಯಾಂಡ್ ವಿಭಿನ್ನ ಶೈಲಿಯ ಮಾಸ್ಕ್ ಧರಿಸಿದ ಮಹಿಳೆ.
undefined
ಇಂಡೋನೇಷ್ಯಾದ ಜಕಾರ್ತದಲ್ಲಿ ಮೋಟಾರು ಬೈಕನ್ನು ಓಡಿಸುತ್ತಿದ್ದ ವ್ಯಕ್ತಿಯೊಬ್ಬ ನಗುತ್ತಿರುವ ಚಿತ್ರವುಳ್ಳ ಮಾಸ್ಕ್ ಧರಿಸಿದ್ದಾನೆ.
undefined
ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರಿಕೆಟ್ ಆಡುವ ಮಕ್ಕಳು ಇಡೀ ಮುಖ ಮುಚ್ಚುವ ತಾತ್ಕಾಲಿಕ ಮಾಸ್ಕ್ ಧರಿಸಿರುವುದು.
undefined
ಫಿಲಿಪೈನ್ಸ್‌ನ ಮನಿಲಾ ಮಾರುಕಟ್ಟೆಯಲ್ಲಿ ತುಟಿಗಳು ಚಿತ್ರವಿರುವ ಮಾಸ್ಕ್ ಧರಿಸಿರುವ ಮಹಿಳೆ.
undefined
ರೋಮ್ನ ಟ್ರಯಾನ್ಫೆಲ್ಡ್ನಲ್ಲಿ, ಕಾಮನಬಿಲ್ಲಿನ ಚಿತ್ರವುಳ್ಳ ಮಾಸ್ಕ್ ಧರಿಸಿದ ವ್ಯಕ್ತಿ. ಇದರಲ್ಲಿ 'ನಾವೆಲ್ಲರೂ ಗೆಲ್ಲುತ್ತೇವೆ' ಸಂದೇಶವೂ ಇದೆ.
undefined
ಮೆಣಸಿನಕಾಯಿಯ ಚಿತ್ರವಿರುವ ಮಾಸ್ಕ್ ಧರಿಸಿ ಫೋಟೋಗೆ ಫೋಸ್ ನೀಡಿರುವ ಬ್ರೆಜಿಲ್‌ನ ವಿಲ್ಲಾನೊ ನಿವಾಸಿ.
undefined
ಫಿಲಿಪೈನ್ಸ್‌ನ ವೇಲೆನ್‌ಜುವೆಲಾ ನಗರದಲ್ಲಿ ಮಾಸ್ಕ್ ಧರಿಸಿದ ಪೊಲೀಸ್.
undefined
ಜರ್ಮನಿಯ ಲೈಪ್‌ಜಿಗ್‌ನಲ್ಲಿ ಹೂವಿನ ಭಾವಚಿತ್ರವುಳ್ಳ ಮಾಸ್ಕ್ ಧರಿಸಿ ಮುಖ ಮುಚ್ಚಿಕೊಂಡಿರುವ ಮಹಿಳೆ.
undefined
ಈಜಿಪ್ಟಿನ ಕೈರೋದಲ್ಲಿ ಉದ್ದನೆಯ ಬಟ್ಟೆಯನ್ನೇ ಮಾಸ್ಕ್‌ನಂತೆ ಧರಿಸಿರುವ ವ್ಯಕ್ತಿ.
undefined
ವೆನೆಜುವೆಲಾದ ಕ್ಯಾರಕಾಸ್‌ನ ಬೀದಿಬದಿ ವ್ಯಾಪಾರಿಯೊಬ್ಬರು ತಾತ್ಕಾಲಿಕ ಮಾಸ್ಕ್ ಧರಿಸಿದ ದೃಶ್ಯ.
undefined
ನಾರ್ವೆಯ ನೆಸೋಡೆನ್ ಮೂಲದ 16 ವರ್ಷದ ಯೂನಿ ಚೆಂಗ್ ವೀಕ್ ಸ್ನೇಹಿತರಿಗಾಗಿ ಹೊಲಿದ ಮಾಸ್ಕ್‌ಗಳನ್ನು ತೋರಿಸುತ್ತಿದ್ದಾರೆ.
undefined
ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಕೋನಿ ಐಲ್ಯಾಂಡ್ ಬೋರ್ಡ್‌ವಾಕ್ ಬಳಿ ಸ್ಪೈಡರ್‌ಮ್ಯಾನ್‌ನಂತೆ ಮಾಸ್ಕ್ ಮತ್ತು ಕೈಗವಸುಗಳು ಧರಿಸಿ ನಡೆದುಕೊಂಡು ಹೋಗುತ್ತಿರುವ ವ್ಯಕ್ತಿ.
undefined
click me!