ಜ್ವರ, ಕೆಮ್ಮು ಮಾಯ: ಹೊಸ ರೂಪದಲ್ಲಿ ಕೊರೋನಾ, ಎಚ್ಚರ!

First Published Apr 25, 2020, 5:03 PM IST

ವಿಶ್ವದಾದ್ಯಂತ ಕೊರೋನಾ ಹಾವಳಿ ಹೆಚ್ಚುತ್ತಲೇ ಇದೆ. ಈವರೆಗೂ 28  ಲಕ್ಷ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 1.97 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಕೊರೋನಾ ದಿನಗಳೆದಂತೆ ಮತ್ತಷ್ಟು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಅಲ್ಲದೇ ಹೊಸ ಹೊಸ ಅಚ್ಚರಿಯನ್ನೂ ನೀಡುತ್ತಿದೆ. ಸದ್ಯ ಸೋಂಕಿಗೆ ಸಂಬಂಧಿಸಿದ ಹೊಸ ಲಕ್ಷಣಗಳೂ ಗೋಚರಿಸಿದ್ದು, ಆತಂಕ ಮತ್ತಷ್ಟು ಹೆಚ್ಚಿಸಿದೆ. ಜ್ವರ, ಕೆಮ್ಮು, ನೆಗಡಿ ಮೀರಿಸಿದ್ದು, ಈಗ ಕಾಲಿನ ಬೆರಳಿನ ಊತವೂ ಕೊರೋನಾ ಲಕ್ಷಣವಾಗಿ ಪರಿಗಣಿಸಲಾರಂಭಿಸಿದ್ದಾರೆ.

ಮೊದಲು ಕೆಮ್ಮು, ಜ್ವರ, ನೆಗಡಿ ಕೊರೋನಾ ಲಕ್ಷಣಗಳೆನ್ನಲಾಗುತ್ತಿತ್ತು. ಆದರೀಗ ಹೊಸದಾಗಿ ಗೋಚರಿಸಿರುವ ಲಕ್ಷಣ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಕೊರೋನಾ ಪೀಡಿತರ ಬೆರಳುಗಳಲ್ಲಿ ಈ ಹೊಸ ಲಕ್ಷಣ ಕಂಡು ಬಂದಿದೆ.
undefined
ಇಟಲಿಯಲ್ಲಿ ಮೊದಲು ಕಂಡು ಬಂದಿತ್ತು ಈ ಲಕ್ಷಣ: ಎಲ್ಲಕ್ಕಿಂತ ಮೊದಲು ಮಾರ್ಚ್‌ನಲ್ಲಿ ಇಟಲಿಯಲ್ಲಿ 13 ವರ್ಷದ ಬಾಲಕನಲ್ಲಿ ಈ ಲಕ್ಷಣ ಕಂಡು ಬಂದಿತ್ತು. ಆತನ ಕಾಲುಗಳಲ್ಲಿ ರಕ್ತ ಹೆಬ್ಬುಗಟ್ಟಿದಂತಹ ಕಲೆ ಕಂಡು ಬಂದಿತ್ತು. ಆರಂಭದಲ್ಲಿ ಜೇಡ ಕಚ್ಚಿರಬೇಕೆಂದು ನಿರ್ಲಕ್ಷಿಸಲಾಯಿತು, ಆದರೆ ಈ ಕಲೆ ಬಹಳ ಸಮಯ ಹಾಗೇ ಉಳಿದುಕೊಂಡಿತ್ತು. ಆದರೆ ಇಆದದ ಬಳಿಕ ಕೊರೋನಾ ಸೋಂಕಿತರಲ್ಲೂ ಈ ಲಕ್ಷಣ ಕಂಡು ಬಂತು.
undefined
ಸದ್ಯ ಈ ಲಕ್ಷಣ ಅಮೆರಿಕಾದ ಹಲವಾರು ಸೋಂಕಿತರಲ್ಲೂ ಕಂಡು ಬಂದಿದ್ದು, ಈ ಕಾರಣದಿಂದ ಅಲ್ಲಿನ ಅನೇಕ ವೈದ್ಯರು ಈ ಸಂಬಂಧ ಚರ್ಚಿಸಲಾರಂಭಿಸಿದ್ದಾರೆ. ಇದೀಗ ಕೊರೋನಾ ಪೀಡಿತರ ಕಾಲುಗಳಲ್ಲೂ ಈ ಲಕ್ಷಣ ಕಾಣಲಾರಂಭಿಸಿದೆ. ಅದರಲ್ಲೂ ಪ್ರಮುಖವಾಗಿ ಈ ಲಕ್ಷಣ ಕೊರೋನಾ ಸೋಂಕಿತ ಮಕ್ಕಳು ಹಾಗೂ ಯುವ ಜನರಲ್ಲಿ ಹೆಚ್ಚಾಗಿ ಕಂಡು ಬಂದಿದೆ.
undefined
ಆರಂಭದಲ್ಲಿ ಈ ಸೋಂಕು ಚೀನಾದಲ್ಲಿ ಕಾಣಿಸಿಕೊಂಡಾಗಲೇ ಇದು ಸಾಂಕ್ರಾಮಿಕ ರೋಗ ಆಗಿರಲಿಕ್ಕಿಲ್ಲ ಎಂದು ಭಾವಿಸಲಾಗಿತ್ತು. ಆದರೆ ಇದಾದ ಬಳಿಕ ಇದೊಂದು ಸಾಂಕ್ರಾಮಿಕ ರೋಗ ಹಾಗೂ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂಬ ಅಂಶ ಬಯಲಾಯ್ತು.
undefined
ಕೋವಿಡ್ ಟೋಸ್, ಈ ಲಕ್ಷಣದ ಹೆಸರು: ಕೊರೋನಾದ ಈ ಲಕ್ಷಣಕ್ಕೆ ಕೋವಿಡ್ ಟೋಸ್ ಎಂದು ಹೆಸರಿಡಲಾಗಿದೆ. ಇನ್ನು ಚಳಿಯ ವಾತಾವರಣದಲ್ಲಿ ಇರುವ ಸೋಂಕಿತರಲ್ಲಿ ಈ ಲಕ್ಷಣ ಅತಿ ಹೆಚ್ಚು ಗೋಚರಿಸಿದೆ. ಚಳಿಗಾಲದಲ್ಲೂ ಇಂತಹುದೇ ಲಕ್ಷಣ ಕಂಡು ಬರುತ್ತದೆ ಹಾಗೂ ಇದು ಹೆಚ್ಚು ಉರಿಯುತ್ತದೆ. ಇನ್ನು ಇಟಲಿಯ ಹಲವಾರು ಮಕ್ಕಳಲ್ಲಿ ಇಂತಹ ಲಕ್ಷಣ ಗೋಚರಿಸಿದೆಯಾದರೂ, ಸೋಂಕು ಕಂಡು ಬಂದಿಲ್ಲ. ಹೀಗಾಗಿ ಈ ಸಂಬಂಧ ಇನ್ನೂ ಹೆಚ್ಚಿನ ಅಧ್ಯಯನ ನಡೆಯುತ್ತಿದೆ.
undefined
ಕೊರೋನಾ ಸೋಕಿತರಲ್ಲಿ ಈ ಲಕ್ಷಣಗಳೂ ಕಂಡು ಬರುತ್ತವೆ: ಕೊರೋನಾ ಪೀಡಿತರಲ್ಲಿ ಕೇವಲ ಜ್ವರ, ಕಫ, ಕೆಮ್ಮು, ನೆಗಡಿ, ಆಯಾಸವಾದಂತೆ ಅನಿಸುವುದು. ಉಸಿರಾಟದ ತೊಂದರೆ ಕಂಡು ಬರುತ್ತದೆ. ಇನ್ನು ಕೆಲವರಲ್ಲಿ ರುಚಿ ಹಾಗೂ ವಾಸನೆ ತಿಳಿಯದಿರುವುದು, ಇದ್ದಕ್ಕಿದ್ದಂತೆ ಕಣ್ಣು ಗುಲಾಬಿ ಬಣ್ಣಕ್ಕೆ ತಿರುಗುವುದು ಈ ಲಕ್ಷಣಗಳೂ ಕಂಡು ಬರುತ್ತವೆ.
undefined
ಬ್ರಿಟನ್‌ನಲ್ಲೂ ಕಾಲಿನ ಬೆರಳುಗಳು ಊದಿಕೊಳ್ಳುವ ಲಕ್ಷಣ ಗೋಚರಿಸಿದೆ. ಬಳಿಕ ಮೂರು ನಾಲ್ಕು ದಿನಗಳ ಬಳಿಕ ಕಲೆ ಕಂಡು ಬರುತ್ತದೆ. ಈ ಲಕ್ಷಣ ಇಟಲಿ ಹಾಗೂ ಅಮೆರಿಕಾ ಬಳಿಕ ಈಗ ಲಂಡನ್‌ನಲ್ಲೂ ಕಾಣಿಸಿಕೊಂಡಿದೆ. ಕಳೆದ ಮೂರು ದಿನಗಳಿಂದ ಬ್ರಿಟನ್‌ನ ಕೊರೋನಾ ಸೋಂಕಿತರಲ್ಲಿ ಈ ಲಕ್ಷಣ ಕಂಡು ಬಂದಿದೆ.
undefined
click me!