ಎಲ್ಲಿದ್ದಾರೆ ಜಾಕ್ ಮಾ? ಚೀನಾದ ಹೈ ಪ್ರೋಫೈಲ್ ಮಿಸ್ಸಿಂಗ್ ಪಟ್ಟಿಗೆ ಸೇರಿದ ಉದ್ಯಮಿ!

First Published Jan 8, 2021, 6:09 PM IST

ಚೀನಾದಲ್ಲಿನ ಕಮ್ಯೂನಿಸ್ಟ್ ಸರ್ಕಾರ ಆಡಳಿತ ಕುರಿತು ವಿಶ್ವಕ್ಕೆ ಸ್ಪಷ್ಟವಾಗಿ ತಿಳಿದಿದೆ. ಸರ್ಕಾರದ ವಿರುದ್ಧ ಒಂದು ಅಕ್ಷರ ಗುಡುಗಿದರೆ, ಬಂಧನ ಖಚಿತ. ಸೆಲೆಬ್ರೆಟಿ, ಹೈ ಪ್ರೋಫೈಲ್ ಆಗಿದ್ದರೆ ಅಂತವರು ನಾಪತ್ತೆಯಾಗುತ್ತಾರೆ. ದಶಕ ಕಳೆದರೂ ಪತ್ತೆ ಆಗುವುದಿಲ್ಲ. ಇದೀಗ ವಿಶ್ವದ ಶ್ರೀಮಂತ ಉದ್ಯಮಿ ಜಾಕ್ ಮಾ ನಾಪತ್ತೆ ಪ್ರಕರಣ ಭಾರಿ ಸಂಚಲನ ಸೃಷ್ಟಿಸಿದೆ. ಚೀನಾದ ಹೈ ಪ್ರೋಫೈಲ್ ಮಿಸ್ಸಿಂಗ್  ಪ್ರಕರಣ ಲಿಸ್ಟ್‌ಗೆ ಸೇರಿಕೊಂಡಿದ್ದಾರೆ. ಹಾಗಾದ್ರೆ ಎಲ್ಲಿದ್ದಾರೆ ಜಾಕ್ ಮಾ?

ಚೀನಾ ಖ್ಯಾತ ಉದ್ಯಮಿ, ವಿಶ್ವದ ಶ್ರೀಮಂತ ವ್ಯಕ್ತಿ ಜಾಕ್ ಮಾ ಕಣ್ಮರ ಪ್ರಕರಣ ದಿನದಿಂದ ದಿನಕ್ಕೆ ಚೀನಾ ಸರ್ಕಾರದ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಇಷ್ಟೇ ಅಲ್ಲ ಜಾಕ್ ಮಾ ಎಲ್ಲಿ ಅನ್ನೋ ಪ್ರಶ್ನೆಗಳು ಹೆಚ್ಚಾಗುತ್ತಿದೆ.
undefined
ಚೀನಾ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಗುಡುಗಿದ್ದ ಜಾಕ್ ಮಾಗೆ ಚೀನಾ ಸರ್ಕಾರ ತಿರುಗೇಟು ನೀಡಿತ್ತು. ಆಲಿಬಾಬ ಕಂಪನಿಯ ಸಹೋದರ ಸಂಸ್ಥೆ ಆ್ಯಂಟ್ ಕಂಪನಿ ಕಾರ್ಯಚಟುವಟಿಕೆ ಸ್ಥಗಿತಗೊಳಿಸಿತ್ತು. ಈ ಘಟನೆ ಬಳಿಕ ಅಂದರೆ ಅಕ್ಟೋಬರ್ ತಿಂಗಳಿನಿಂದ ಜಾಕ್ ಮಾ ನಾಪತ್ತೆಯಾಗಿದ್ದಾರೆ.
undefined
ಚೀನಾ ಸರ್ಕಾರ ಜಾಕ್ ಮಾ ಅಪಹರಿಸಿ ಬಂಧನದಲ್ಲಿಟ್ಟಿದೆ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಇನ್ನು ಚೀನಾ ವಿರುದ್ಧ ಮಾತನಾಡಿದ ಜಾಕ್ ಮಾ ಸುರಕ್ಷಿತವಾಗಿರವು ಯಾರಿಗೂ ತಿಳಿಯದ ಪ್ರದೇಶದಲ್ಲಿ ಕೆಲ ಕಾಲ ತಂಗುವುದು ಉಚಿತ ಅನ್ನೋ ಸಲಹೆ ಮೇರೆಗೆ ಜಾಕ್ ಮಾ ಭೂಗತರಾಗಿದ್ದಾರೆ ಅನ್ನೋ ಅನುಮಾನಗಳು ಇವೆ
undefined
ಜಾಕ್ ಮಾ ಕಣ್ಮರೆ ಇಷ್ಟು ಸದ್ದು ಮಾಡಲು ಮುಖ್ಯ ಕಾರಣ ನಡೆದು ಬಂದ ಹಾದಿ. ಇಂಗ್ಲೀಷ್ ಟೀಚರ್ ಆಗಿದ್ದ ಜಾಕ್ ಮಾ, 19900ರ ಅಮೆರಿಕ ಪ್ರವಾಸ ಹೊಸ ತಿರುವು ನೀಡಿತ್ತು. ಕಾರಣ ಅಮೆರಿಕದಲ್ಲಿ ಅಂತರ್ಜಾಲ ವ್ಯವಸ್ಥೆ ಜಾಕ್ ಮಾರನ್ನು ವಿಶೇಷವಾಗಿ ಆಕರ್ಷಿಸಿತ್ತು.
undefined
ಚೀನಾಗೆ ಮರಳಿದ ಜಾಕ್ ಮಾ ಹಲವು ಇಂಟರ್‌ನೆಟ್ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡರು. ಬಳಿಕ 1999ರಲ್ಲಿ ಸ್ವಂತ ಉದ್ಯಮ ಆರಂಭಿಸಲು ಗೆಳೆಯರಲ್ಲಿ 60,000 ಅಮೆರಿಕನ್ ಡಾಲರ್ ಹಣ ಒದಗಿಸಲು ಮನವಿ ಮಾಡಿದ್ದರು.
undefined
ಹಠ ಬಿಡದ ಜಾಕ್ ಮಾ ಆಲಿಬಾಬ ಕಂಪನಿ ಆರಂಭಿಸಿದರು. ಇ ಕಾಮರ್ಸ್ ಕಂಪನಿ ಆರಂಭಿಸಿದ ಜಾಕ್ ಮಾ ಬಳಿಕ ನಡೆದಿದ್ದೆಲ್ಲವೂ ಇತಿಹಾಸ. ಇದೀಗ ಆಲಿಬಾಬಾ ವಿಶ್ವದ ಅತೀ ದೊಡ್ಡ ಕಂಪನಿಯಾಗಿ ಬೆಳೆದಿದೆ. ಜಾಕ್ ಮಾ ವಿಶ್ವದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
undefined
ಕಳೆದ ವರ್ಷದಿಂದ ಜಾಕ್ ಮಾ ಮತ್ತು ಚೀನಾ ಸರ್ಕಾರದ ನಡುವಿನ ಸಂಘರ್ಷ ಆರಂಭಗೊಂಡಿದೆ. ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಜಾಕ್‌ ಮಾರನ್ನು ಚೀನಾ ಖಳನಾಯಕ, ದುಷ್ಟ ಬಂಡವಾಳಶಾಹಿ ಮತ್ತು ರಕ್ತಪಾತದ ಭೂತ ಎಂದು ಬಂಬಿಸಿತ್ತು.
undefined
ಚೀನಾದ ಆರ್ಥಿಕ ನೀತಿಗಳನ್ನು ವಿರೋಧಿಸಿದ ಬಳಿಕ ಜಾಕ್ ಮಾ ಸಂಕಷ್ಟ ಹೆಚ್ಚಾಯಿತು. ಇದೀಗ ಜಾಕ್ ಮಾ ಕಣ್ಮರೆಯಾಗಿ 3 ತಿಂಗಳು ಕಳೆದಿದೆ. ಹೈ ಪ್ರೋಫೈಲ್ ವ್ಯಕ್ತಿಗಳು ಚೀನಾದಲ್ಲಿ ಕಣ್ಮರೆಯಾಗುತ್ತಿರುವುದು ಇದೇ ಮೊದಲಲ್ಲ.
undefined
ಕಳೆದ ವರ್ಷ ಚೀನಾ ನಟಿ ಕಾಣೆಯಾಗಿದ್ದರು. 3 ತಿಂಗಳ ಕಾಲ ಚೀನಾ ಬಂಧನದಲ್ಲಿಟ್ಟಿತು ಅನ್ನೋ ಮಾಹಿತಿ ಬಳಿಕ ಬಹಿರಂಗಗೊಂಡಿತ್ತು. ಕಳೆದ ವರ್ಷ ಚೀನಾ ವಿಜ್ಞಾನಿ ಹಿ ಜೈನ್‌ಕುಯಿ ನಾಪತ್ತೆಯಾಗಿದ್ದರು. ವಿಜ್ಞಾನಿಯನ್ನು ಚೀನಾ ಸರ್ಕಾರ ಗೃಹ ಬಂಧನದಲ್ಲಿರಿಸಿತ್ತು.
undefined
click me!