ಇಸ್ರೇಲ್-ಯುಎಸ್ ದಾಳಿಗೆ ಪ್ರತೀಕಾರವಾಗಿ ಇರಾನ್, ಯುಎಇಯ ಅಬುಧಾಬಿಯಲ್ಲಿರುವ ಫ್ರೆಂಚ್ ನೌಕಾನೆಲೆ ಮತ್ತು ಅಮೆಜಾನ್ ಡೇಟಾ ಸೆಂಟರ್ ಮೇಲೆ ಡ್ರೋನ್ ದಾಳಿ ನಡೆಸಿದೆ. ಈ ಸರಣಿ ದಾಳಿಗಳ ಹಿನ್ನೆಲೆಯಲ್ಲಿ, ಗಲ್ಫ್ ಸಹಕಾರ ಮಂಡಳಿಯ (GCC) ರಾಷ್ಟ್ರಗಳು ತುರ್ತು ಸಭೆ ನಡೆಸಿ, ಇರಾನ್‌ನ ಆಕ್ರಮಣವನ್ನು ಖಂಡಿಸಿವೆ.
ನವದೆಹಲಿ: ತನ್ನ ಮೇಲೆ ಇಸ್ರೇಲ್ ಯುಎಸ್ ನಡೆಸುತ್ತಿರುವ ಸರಣಿ ದಾಳಿಗೆ ಪ್ರತೀಕಾರದ ಪಣ ತೊಟ್ಟಿರುವ ಇರಾನ್ ಸುತ್ತಮುತ್ತಲಿನ ಸೌದಿ ರಾಷ್ಟ್ರಗಳ ಮೇಲೆ ತನ್ನ ದಾಳಿ ಮುಂದುವರೆಸಿದೆ. ಈಗಾಗಲೇ ಬಹ್ರೈನ್, ದುಬೈ, ದೋಹಾ, ಕುವೈತ್ ಮೇಲೆ ಹೊಸ ದಾಳಿ ನಡೆಸಿರುವ ಇರಾನ್ ಈ ಅಬುಧಾಬಿಯಲ್ಲಿರು ಫ್ರಾನ್ಸ್‌ನ ನೌಕಾನೆಲೆ ಮೇಲೆ ದಾಳಿ ನಡೆಸಿದೆ ಎಂದು ವರದಿಯಾಗಿದೆ.
26
ಅಬುಧಾಬಿಯಲ್ಲಿರುವ ಅಲ್ ಸಲಾಮ್ ನೌಕಾ ನೆಲೆ ಮೇಲೆ ದಾಳಿ
ಅಬುಧಾಬಿಯಲ್ಲಿರುವ ಪೀಸ್ ಕ್ಯಾಂಪ್ (ಕ್ಯಾಂಪ್ ಡೆ ಲಾ ಪೈಕ್ಸ್) ಎಂದೂ ಕರೆಯಲ್ಪಡುವ ಅಲ್ ಸಲಾಮ್ ನೌಕಾ ನೆಲೆಯ ಮೇಲೆ ಎರಡು ಇರಾನಿನ ಡ್ರೋನ್‌ಗಳು ದಾಳಿ ಮಾಡಿವೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಈ ನೆಲೆಯು ಎಮಿರಾಟಿ ನೌಕಾ ಸೌಲಭ್ಯವಾಗಿದ್ದು, ಇದು ಶಾಶ್ವತ ಫ್ರೆಂಚ್ ಮಿಲಿಟರಿ ತುಕಡಿಯನ್ನು ಸಹ ಹೊಂದಿದೆ. ದಾಳಿಯಲ್ಲಿ ಹ್ಯಾಂಗರ್‌ಗೆ ಹಾನಿಯಾಗಿದೆ ಎಂದು ಫ್ರೆಂಚ್ ರಕ್ಷಣಾ ಸಚಿವೆ ಕ್ಯಾಥರೀನ್ ವೌಟ್ರಿನ್ ಹೇಳಿದ್ದಾರೆ ಆದರೆ ಒಟ್ಟಾರೆ ಪರಿಣಾಮ ಸೀಮಿತವಾಗಿದ್ದು, ಇಲ್ಲಿಯವರೆಗೆ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ.
36
ಅಮೆಜಾನ್‌ನ ಕ್ಲೌಡ್ ಘಟಕಕ್ಕೆ ಹಾನಿ
ಮತ್ತೊಂದೆಡೆ ಇರಾನ್ ಯುಎಇ ಮೇಲೆ ನಡೆಸಿದ ದಾಳಿಯಲ್ಲಿ ಅಮೆಜಾನ್‌ನ ಕ್ಲೌಡ್ ಘಟಕವಾದ ಅಮೆಜಾನ್ ವೆಬ್ ಸೇವೆಗಳು(AWS)ಇದ್ದ ಕಟ್ಟಡದ ಮೇಲೂ ದಾಳಿಯಾಗಿದೆ., ಹೀಗಾಗಿ ತನ್ನ ಡೇಟಾ ಕೇಂದ್ರಗಳಲ್ಲಿ ಒಂದಕ್ಕೆ ನೀಡುತ್ತಿದ್ದ ವಿದ್ಯುತ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ದಾಳಿ ವೇಳೆ ಬೆಂಕಿ ಏನೋ ವಸ್ತುಗಳು ತಾಗಿ ಬೆಂಕಿ ಕಾಣಿಸಿಕೊಂಡ ನಂತರ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಸೇವೆ ಸ್ಥಗಿತಗೊಳಿಸಲಾಗಿದ್ದು, ಸಂಪರ್ಕ ಪುನಃ ಆರಂಭಿಸಲು ಹಲವು ಗಂಟೆಗಳು ಬೇಕಾಗುತ್ತವೆ ಎಂದು ವರದಿಯಾಗಿದೆ. ಆದರೆ ಯುಎಇಯಲ್ಲಿನ ಇತರ ಡೇಟಾ ಕೇಂದ್ರಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ವರದಿಯಾಗಿದೆ. ಈ ಘಟನೆಯು ಇತ್ತೀಚೆಗೆ ಈ ಪ್ರದೇಶದಲ್ಲಿ ನಡೆದ ಇರಾನಿನ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಿಗೆ ಸಂಬಂಧಿಸಿ ನಡೆದಿದ್ದೆ ಎಂಬುದನ್ನು ಕಂಪನಿ ದೃಢಪಡಿಸಿಲ್ಲ.
ಅಮೆರಿಕ ಮತ್ತು ಇಸ್ರೇಲಿ ದಾಳಿಗೆ ಯುಎಇ ಮೇಲೆ ಇರಾನ್ ಪ್ರತೀಕಾರ
ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲಿ ದಾಳಿಗಳ ನಂತರ ಇರಾನ್ ಪ್ರತೀಕಾರವಾಗಿ ಯುಎಇಯನ್ನು ಗುರಿಯಾಗಿಸಿಕೊಂಡಿದೆ. ಕ್ಷಿಪಣಿಗಳು ಮತ್ತು ಡ್ರೋನ್‌ಗಳು ವಿಮಾನ ನಿಲ್ದಾಣಗಳು, ಬಂದರುಗಳು ಮತ್ತು ವಸತಿ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ಮಾಡಿದ್ದು, ಹಲವರು ಸಾವು ನೋವು ಹಾಗೂ ಗಾಯಗಳಿಗೆ ಕಾರಣವಾಗಿದೆ. ದುಬೈನಲ್ಲಿ ಪಂಚತಾರಾ ರೆಸಾರ್ಟ್‌ಗಳ ಮೇಲೂ ದಾಳಿ ನಡೆದಿದ್ದವು. ವಿಶ್ವದ ಅತಿ ಎತ್ತರದ ಕಟ್ಟಡ ಸೇರಿದಂತೆ ನಗರದ ಸ್ಕೈಲೈನ್‌ಗೆ ದಾಳಿ ಬೆದರಿಕೆ ಹಾಕಲಾಗಿದೆ. ಅಬುಧಾಬಿಯ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿ ಏಳು ಮಂದಿ ಗಾಯಗೊಂಡಿದ್ದಾರೆ.
56
ಇರಾನ್ ಆಕ್ರಮಣದ ವಿರುದ್ಧ ಒಂದಾದ ಗಲ್ಫ್ ರಾಷ್ಟ್ರಗಳು
ಇರಾನಿನ ಆಕ್ರಮಣದ ವಿರುದ್ಧ ಗಲ್ಫ್ ರಾಷ್ಟ್ರಗಳು ಒಂದಾಗಿದ್ದು,ದಾಳಿಗೆ ಪ್ರತಿಕ್ರಿಯೆಯಾಗಿ, ಗಲ್ಫ್ ಸಹಕಾರ ಮಂಡಳಿಯ (ಜಿಸಿಸಿ) ಆರು ಸದಸ್ಯ ರಾಷ್ಟ್ರಗಳಾದ ಯುಎಇ, ಬಹ್ರೇನ್, ಸೌದಿ ಅರೇಬಿಯಾ, ಓಮನ್, ಕತಾರ್ ಮತ್ತು ಕುವೈತ್ ಭಾನುವಾರ ತುರ್ತು ವೀಡಿಯೊ ಸಭೆ ನಡೆಸಿದರು. ದೇಶದ ಭದ್ರತೆಯನ್ನು ರಕ್ಷಿಸಲು, ನಾಗರಿಕರನ್ನು ರಕ್ಷಿಸಲು ಮತ್ತು ಪ್ರದೇಶಗಳನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಮಂಡಳಿ ಹೇಳಿದೆ. ಅಗತ್ಯವಿದ್ದರೆ ಆಕ್ರಮಣಕ್ಕೆ ಪ್ರತಿಕ್ರಿಯಿಸುವ ಆಯ್ಕೆಯು ತಮ್ಮ ಮೇಜಿನ ಮೇಲಿದೆ ಮತ್ತು ಇರಾನಿನ ದಾಳಿಯನ್ನು ತಕ್ಷಣ ನಿಲ್ಲಿಸುವಂತೆ ಅದು ಕರೆ ನೀಡಿದೆ. ಜಾಗತಿಕ ಆರ್ಥಿಕ ಭದ್ರತೆಗೆ ಗಲ್ಫ್‌ನಲ್ಲಿ ಸ್ಥಿರತೆ ಅತ್ಯಗತ್ಯ ಎಂದು ಜಿಸಿಸಿ ಹೇಳಿದೆ.
66
ಇರಾನ್ ವಿರುದ್ಧ ಯುಎಇ ಅಧ್ಯಕ್ಷರ ಆಕ್ರೋಶ
ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಇರಾನ್ ಯುಎಇಯನ್ನು ಗುರಿಯಾಗಿಸಿಕೊಂಡಿರುವುದಕ್ಕೆ ತೀವ್ರವಾಗಿ ಟೀಕಿಸಿದ್ದಾರೆ. ಇರಾನ್ ದೇಶವು ಬುದ್ಧಿವಂತಿಕೆಯಿಂದ ವರ್ತಿಸುವಂತೆ ಒತ್ತಾಯಿಸಿದೆ. ಯುಎಇ ಅಧ್ಯಕ್ಷರ ರಾಜತಾಂತ್ರಿಕ ಸಲಹೆಗಾರ ಅನ್ವರ್ ಗರ್ಗಶ್ ಅವರು ಇರಾನ್ ಯುಎಇ ಮೇಲೆ ನಡೆಸಿದ ದಾಳಿಗಳು ಸರಿಯಲ್ಲ, ಇದು ನಿರ್ಣಾಯಕ ಸಮಯದಲ್ಲಿ ಇರಾನ್ ಅನ್ನು ಒಂಟಿ ಮಾಡಿದೆ. ನಿಮ್ಮ ಯುದ್ಧವು ನಿಮ್ಮ ನೆರೆಹೊರೆಯವರೊಂದಿಗೆ ಅಲ್ಲ,ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವ ಮೊದಲು ಇರಾನ್ ತರ್ಕಬದ್ಧವಾಗಿ ಮರಳಲು ಮತ್ತು ಹತ್ತಿರದ ದೇಶಗಳೊಂದಿಗೆ ಜವಾಬ್ದಾರಿಯುತವಾಗಿ ವ್ಯವಹರಿಸಲು ಅವರು ಕರೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ