ಮೊದಲ ಭೇಟಿಯಲ್ಲೇ ಕಿಮ್ ಹೃದಯ ಗೆದ್ದ ಸುಂದರಿ: ನಿಗೂಢ ವ್ಯಕ್ತಿಯ ರಹಸ್ಯ!

First Published | Apr 22, 2020, 5:51 PM IST

ನಿಗೂಢ ವ್ಯಕ್ತ ಎಂದೇ ಖ್ಯಾತಿ ಪಡೆದಿರುವ ಸರ್ವಾಧಿಕಾರಿ ಕಿಮ್‌ ಸಂಬಂಧಿತ ಕೆಲ ಶಾಕಿಂಗ್ ಮಾಹಿತಿಗಳು ಬೆಳಕಿಗೆ ಬಂದಿದೆ. ಅವರ ವೈವಾಹಿಕ ಜೀವನ ಕುರಿತಾದ ಕೆಲ ಸಂಗತಿಗಳು ಇಲ್ಲಿವೆ. 

ಸರ್ವಾಧಿಕಾರಿ ಕಿಮ್ ಜಾಂಗಗ್ ಉನ್‌ ಸದ್ಯ ಭಾರೀ ಸದ್ದು ಮಾಡುತ್ತಿರುವ ಹೆಸರು. ಅನಾರೋಗ್ಯಕ್ಕೀಡಾಗಿರುವ ಕಿಮ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದ್ದು, ಇತ್ತೀಚೆಗೆ ಅವರು ಯಾವುದೇ ಕಾರ್ಯಕ್ರಮಗಳಲ್ಲಿ ಕಂಡು ಬಾರದಿರುವುದು ಮತ್ತಷ್ಟು ಅನುಮಾನ ಹುಟ್ಟು ಹಾಕಿದೆ.
ಸರ್ವಾಧಿಕಾರಿ ಕಿಮ್ ಈ ಮೊದಲಿನಿಂದಲೂ ತಮ್ಮ ಕ್ರೂರ ನಡೆಯಿಂದ ಗುರುತಿಸಿಕೊಂಡವರು. ಅವರೆಂದರೆ ಬಹುತೇಕ ಎಲ್ಲರೂ ಭಯ ಪಟ್ಟುಕೊಳ್ಳುತ್ತಾರೆ. ಹುಚ್ಚು ಮನಸ್ಥಿತಿಯ ಈ ವ್ಯಕ್ತಿ ಯಾವಾಗ ಏನು ಮಾಡುತ್ತಾರೆಂದು ಊಹಿಸುವುದೂ ಅಸಾಧ್ಯ ಎಂಬುವುದು ಅನೇಕರ ಅಭಿಪ್ರಾಯವಾಗಿದೆ.
Tap to resize

ಇನ್ನು ಈ ನಿಗೂಢ ದೇಶದ ಸರ್ವಾಧಿಕಾರಿಯ ಬದುಕು ಕೂಡಾ ಬಹಳ ನಿಗೂಢ. ಅವರ ಬದುಕಿನ ಬಹುತೇಕ ಎಲ್ಲಾ ವಿಚಾರಗಳು ತಿಳಿದಿರುವುದು ಆತನ ಕಿರಿಯ ತಂಗಿ ಯೋ ಜೋಂಗ್‌ಗೆ ಮಾತ್ರ ಎನ್ನಲಾಗಿದ್ದು, ಮುಂದೆ ಉತ್ತರ ಕೊರಿಯಾದ ಸರ್ವಾಧಿಕಾರಿ ಆಕೆಯೇ ಆಗಬಹುದೆಂದು ಅಂದಾಜಿಸಲಾಗಿದೆ. ಹೀಗಿರುವಾಗ ಕಿಮ್ ಜಾಂಗ್ ಉನ್‌ ಮಾಯಾನಗರಿಯ ಮತ್ತೊಬ್ಬ ಪ್ರಮುಖ ಭಾಗವೆಂದರೆ ಆತನ ಪತ್ನಿ ರಿ ಸೋಲ್ ಜೂ.
ಪತ್ನಿ ರಿ ಸೋಲ್ ಜೂ ಕತೆಯೂ ಕೂಡಾ ಕಿಮ್‌ರಂತೆ ನಿಗೂಢ. ಅನೇಕರಿಗೆ ಆಕೆಯ ಕುರಿತು ತಿಳಿದಿಲ್ಲ. ಕಿಮ್​ ಜೀವನ ಎಷ್ಟು ನಿಗೂಢವೋ ಅಷ್ಟೇ ನಿಗೂಢ ಆತನ ಮದುವೆ. ಕಿಮ್ ಹಾಗೂ ಜೂ ಮದುವೆ ಎಲ್ಲಾಯಿತು? ಹೇಗಾಯ್ತು ಎಂಬುವುದು ಯಾರಿಗೂ ತಿಳಿದಿಲ್ಲ.
2009ರಲ್ಲಿ ಕಿಮ್ ತಂದೆ ಸಮ್ಮುಖದಲ್ಲೇ ಇವರ ಮದುವೆಯಾಗಿದ್ದು, 2010ರಲ್ಲಿ ಒಂದು ಮಗು ಕೂಡಾ ಜನಿಸಿತ್ತು ಎಂದು ಹೇಳಲಾಗುತ್ತದೆ. ಆದರೆ ಈ ಕುರಿತಾಗಿ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಹೀಗಿದ್ದರೂ ಮುಂದೆ ಕಿಮ್ ತಂಗಿ ಅಥವಾ ಆತನ ಮಗ ಉತ್ತರಾಧಿಕಾರಿಯಾಗಬಹುದೆನ್ನುವ ವರದಿಗಳು ಸದ್ದು ಮಾಡಿವೆ. ಸದ್ಯ ಕಿಮ್ ಹಾಗೂ ಜೂ ದಂಪತಿಗೆ ಒಟ್ಟು ಮೂವರು ಮಕ್ಕಳಿದ್ದಾರೆ ಎನ್ನಲಾಗಿದೆ.
ಇನ್ನು ಸಾರ್ವಜನಿಕವಾಗಿ ಕಿಮ್‌ ಜೊತೆ ಕಾಣಿಸಿಕೊಳ್ಳುವ ಜೂ ಕುರಿತು ಯಾರಿಗೂ ಹೆಚ್ಚು ತಿಳಿದಿಲ್ಲ.
ಅಲ್ಲದೇ ಉತ್ತರ ಕೊರಿಯಾದ ಮಾಧ್ಯಮಗಳಲ್ಲೂ ರಿ ಸೋಲ್ ಜು ಕುರಿತಾದ ಮಾಹಿತಿ, ವಿಚಾರ, ವರದಿ ಪ್ರಸಾರವಾಗುವುದು ಬಹಳ ಅಪರೂಪ. ಆದರೆ ವಿದೇಶೀ ಮಾಧ್ಯಮಗಳಲ್ಲಿ ಪ್ರಸಾರವಾದ ಮಾಹಿತಿ ಅನ್ವಯ ಈಕೆ 1985-89 ರ ನಡುವೆ ಹುಟ್ಟಿದ್ದಳು ಎಂದು ತಿಳಿದು ಬಂದಿದೆ.
ಕಿಮ್ ಪತ್ನಿ ರಿ ಸೋಲ್ ಜೂ ಓರ್ವ ವೈದ್ಯೆ ಮತ್ತು ಆಕೆಯ ತಂದೆ ಓರ್ವ ಉಪನ್ಯಾಸಕರೆಂದು ಹೇಳಲಾಗುತ್ತದೆ. ಚೀನಾದಲ್ಲಿ ಸಂಗೀತ ತರಬೇತಿ ಪಡೆದ ಜೂ ಆಕ್ರೆಸ್ಟ್ರಾ ಒಂದರಲ್ಲಿ ಗಾಯಕಿಯಾಗಿ ಕೆಲಸ ಮಾಡುತ್ತಿದ್ದರೆನ್ನಲಾಗಿದೆ. ಆದರೆ ಈಕೆಯ ಹಿಂದಿನ ಮಾಹಿತಿ ಯಾರಿಗೂ ತಿಳಿಯಬಾರದೆಂದು ಹಳೆಯ ದಾಖಲೆಗಳನ್ನು ನಾಶ ಮಾಡುವ ಪ್ರಯತ್ನಗಳೂ ನಡೆದಿತ್ತೆನ್ನಲಾಗಿದೆ.
ಅಲ್ಲದೇ 2005ರಲ್ಲಿ ಉತ್ತರ ಕೊರಿಯಾದಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್​ಷಿಪ್​ನಲ್ಲಿ ಪಾಲ್ಗೊಳ್ಳಲು ಬಂದಿದ್ದ 90 ಚಿಯರ್ ಲೀಡರ್ಸ್​ಗಳಲ್ಲಿ ಜೂ ಕೂಡಾ ಒಬ್ಬರಾಗಿದ್ದರು ಎಂದೂ ಹೇಳಲಾಗಿದೆ
ಕಿಮ್ ಹಾಗೂ ಜೂ ಇಬ್ಬರೂ ಮೊದಲ ಬಾರಿ ಉತ್ತರ ಕೊರಿಯಾದಲ್ಲೇ ಭೇಟಿಯಾಗಿದ್ದು, ಈ ಮೊದಲ ಭೇಟಿಯಲ್ಲೇ ಕಿಮ್ ಈಕೆಯ ಧ್ವನಿ ಬಹಳ ಇಂಪಾಗಿದೆ ಎಂದಿದ್ದರಂತೆ.
ಕಿಮ್​ಗೆ ಓರ್ವ ಗೆಳತಿ ಇದ್ದು, ಆಕೆಯೂ ಗಾಯಕಿ ಆಗಿದ್ದಳೆಂದು ಹೇಳಲಾಗುತ್ತಿದೆ. ಆದರೆ ಆಕೆಯ ಮ್ಯೂಸಿಕಲ್ ಗ್ರೂಪ್ ಬ್ಲೂ ಫಿಲಂ ಮಾಡುತ್ತಿದೆ ಎಂಬ ಆರೋಪದಡಿ, ಗೆಳತಿ ಸೇರಿದಂತೆ ತಂಡದ ಎಲ್ಲಾ ಸದಸ್ಯರನ್ನು ಗುಂಡಿಟ್ಟು ಕೊಂದಿದ್ದರೆಂಬ ವದಂತಿಯೂ ಇದೆ.

Latest Videos

click me!