ಪಾಕ್‌ ನಟಿ ಮೆಹ್ವಿಶ್‌ ಹಯಾತ್‌ ಜೊತೆ ದಾವೂದ್‌ ಅಫೇರ್‌?

First Published | Aug 28, 2020, 6:13 PM IST

ಮುಂಬೈ ದಾಳಿಯ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ ಹೆಸರು ಈ ದಿನಗಳಲ್ಲಿ  ಪಾಕಿಸ್ತಾನದ ನಟಿಯೊಂದಿಗೆ ಕೇಳಿಬರುತ್ತದೆ. ದಾವೂದ್ ಪಾಕಿಸ್ತಾನಿ ನಟಿ ಮೆಹ್ವೀಶ್ ಹಯಾತ್ ಅವರೊಂದಿಗೆ ಸಂಬಂಧ ಹೊಂದಿದ್ದಾರೆಂದು  ಹೇಳಲಾಗುತ್ತಿದೆ. ವಯಸ್ಸಿನಲ್ಲಿ ಮೆಹ್ವಿಶ್‌ (37) ದಾವೂದ್‌ಗಿಂತ 27 ವರ್ಷ ಸಣ್ಣವಳು. ದಾವೂದ್ ಆಜ್ಞೆ ಮೇರೆಗೆ ಮೆಹ್ವಿಶ್ ಅನೇಕ ಚಿತ್ರಗಳಲ್ಲಿ ಕೆಲಸ ಪಡೆದರು ಎಂದು ಹೇಳಲಾಗುತ್ತಿದೆ. ಆಕೆಯನ್ನು ಈಗ ಪಾಕಿಸ್ತಾನದಲ್ಲಿ ದರೋಡೆಕೋರ ಗುಡಿಯಾ ಎಂದೂ ಕರೆಯುತ್ತಾರೆ. ದಾವೂದ್ ಹೆಸರು ನಟಿಯೊಂದಿಗೆ ಕೇಳಿ ಬರುತ್ತಿರುವದು ಇದೇ ಮೊದಲಲ್ಲ.

ಬಾಲಿವುಡ್ ಮತ್ತು ಕ್ರೀಡೆಗಳಲ್ಲಿ ದಾವೂದ್ ಹಸ್ತಕ್ಷೇಪ ಮಾಡುತ್ತಿರುವುದು ಹಳೇ ವಿಷಯ ಬಿಡಿ.ದಾವೂದ್ ಇಬ್ರಾಹಿಂ ಅನೇಕ ಬಾಲಿವುಡ್ ನಟಿಯರೊಂದಿಗೆ ಸಂಬಂಧ ಹೊಂದಿದ್ದ. ಅವರಲ್ಲಿ ಅನಿತಾ ಅಯೂಬ್ ಒಬ್ಬರು. ಚಿತ್ರದ ನಿರ್ಮಾಪಕರು ಚಿತ್ರದಲ್ಲಿ ನಟಿಸಲು ಅನಿತಾ ಅಯೂಬ್‌ಳನ್ನು ನಿರಾಕರಿಸಿದ ನಂತರ, ದಾವೂದ್ ಅವರನ್ನು ಕೊಲೆ ಮಾಡಿದ್ದಾನೆಂಬ ಸುದ್ದಿ ಇದೆ
ದಾವೂದ್ ಜೊತೆರಿಲೆಷನ್‌ಶಿಪ್‌ನಿಂದಾಗಿ ಮಂದಾಕಿನಿ ಚಲನಚಿತ್ರಗಳನ್ನು ಮಾಡುವುದನ್ನೇ ನಿಲ್ಲಿಸಿದಳಂತೆ. ನಂತರ ಇಬ್ಬರೂ ಮದುವೆಯಾದರು.ಸ್ಟೇಡಿಯಂನಲ್ಲಿ ಇಬ್ಬರೂ ಒಟ್ಟಿಗೆ ಕ್ರಿಕೆಟ್ ಪಂದ್ಯವೊಂದನ್ನು ವೀಕ್ಷಿಸಿದ್ದು ಸುದ್ದಿಯಾಗಿತ್ತು.ನಂತರ ವಿಚ್ಚೇದನ ಪಡೆದರು. 1996ರಲ್ಲಿ ಮಂದಾಕಿನಿ ಬೇರೊಬ್ಬರನ್ನು ವಿವಾಹವಾದರು.
Tap to resize

ದಾವೂದ್ಜೊತೆಯ ರಿಲೆಷನ್‌ಶಿಪ್‌ನಿಂದಾಗಿ ಮಂದಾಕಿನಿ ಚಲನಚಿತ್ರಗಳನ್ನು ಮಾಡುವುದನ್ನು ಕೂಡ ನಿಲ್ಲಿಸಿದಳು ಎಂದು ವರದಿಗಳು ಹೇಳುತ್ತವೆ. ನಂತರ ಇಬ್ಬರೂ ಮದುವೆಯಾದರು. ಸ್ಟೇಡಿಯಂನಲ್ಲಿಇಬ್ಬರೂ ಒಟ್ಟಿಗೆ ಕ್ರಿಕೆಟ್ ನೋಡುತ್ತಿರುವುದು ಸಾಕಷ್ಟು ಸುದ್ದಿ ಆಗಿತ್ತು. ನಂತರ ಇಬ್ಬರು ವಿಚ್ಚೇದನ ಪಡೆದರು. 1996 ರಲ್ಲಿ ಮಂದಾಕಿನಿ ಬೇರೊಬ್ಬರನ್ನು ವಿವಾಹವಾದರು.
ಈಗ ದಾವೂದ್ ಹೆಸರು ಪಾಕ್ ನಟಿ ಮೆಹ್ವಿಶ್‌ ಹಯಾತ್ ಜೊತೆ ಕೇಳಿ ಬರುತ್ತಿದೆ. 37 ವರ್ಷದ ನಟಿ ದಾವೂದ್‌ಗಿಂತ 27 ವರ್ಷ ಚಿಕ್ಕವಳು. ದಾವೂದ್ ಕೃಪೆಯಿಂದ ಮೆಹ್ವಿಶ್ ಅನೇಕ ಚಿತ್ರಗಳಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾಳಂತೆ.
ಹಯಾತ್ ದಾವೂದ್‌ ಜೊತೆ ಮಾತ್ರವಲ್ಲ, ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಅನೇಕ ಕ್ರಿಕೆಟಿಗರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾಳೆ.
ಈ ಕಾರಣದಿಂದಾಗಿ, ಕಳೆದ ವರ್ಷ ಮೆಹ್ವಿಶ್‌ಗೆ ಪಾಕಿಸ್ತಾನದ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ತಮ್ಗಾ-ಎ-ಇಮ್ತಿಯಾಜ್ ನೀಡಲಾಯಿತ್ತೆಂದು ವರದಿಯಾಗಿತ್ತು.
90ರ ದಶಕದಲ್ಲಿ ಬಾಲಿವುಡ್ ಚಿತ್ರಗಳಲ್ಲಿ ಹೂಡಿಕೆ ಮಾಡಿದ್ದರು ದಾವೂದ್. ನಂತರ, ಕ್ರಿಕೆಟ್‌ನಲ್ಲಿಯೂ ಕೈ ಆಡಿಸಿದರು.ಹಲವು ಕ್ರಿಕೆಟ್ ಪಂದ್ಯಗಳನ್ನಾಡುವಾಗ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದಾನೆ ಈ ಡಾನ್‌. ಪೊಲೀಸರ ಪ್ರಕಾರ, ದಾವೂದ್ ಬೆಟ್ಟಿಂಗ್ ಮೂಲಕ ಪಂದ್ಯವನ್ನು ತನ್ನಿಷ್ಟ ಬಂದಂತೆ ನಡೆಸುತ್ತಿದ್ದನು ಎಂಬ ಆರೋಪವೂ ಇದೆ.
9ನೇ ಕ್ಲಾಸ್‌ ನಂತರ ನಂತರ ದಾವೂದ್ ಓದುವುದು ಬಿಟ್ಟು ಅಪರಾಧದ ಜಗತ್ತಿನಲ್ಲಿ ತೊಡಗಿದನು.1993 ರ ಮುಂಬೈ ದಾಳಿಯ ಪ್ರಮುಖ ಆರೋಪಿ ದಾವೂದ್ ಭಾರತದಿಂದ ಪರಾರಿಯಾಗಿದ್ದು, ಪಾಕಿಸ್ತಾನದಲ್ಲಿ ಅಡಗಿ ಕೂತಿದ್ದಾನೆ.
ದಾವೂದ್ ಮಹಾರಾಷ್ಟ್ರದ ಖೇಡ್ ರತ್ನಾಗಿರಿಯಲ್ಲಿ ಜನಿಸಿದ್ದು. ತಂದೆ ಇಬ್ರಾಹಿಂ ಕಾಸ್ಕರ್ ಮುಂಬೈ ಮುಖ್ಯ ಕಾನ್‌ಸ್ಟೆಬಲ್ ಆಗಿದ್ದರು. ಬಾಲಿವುಡ್ ನಟಿ ಹಾಗೂ ಪಾಕ್ ನಟಿಯರೊಂದಿಗೆ ಇವನಿಗಿದೆನಂಟು.

Latest Videos

click me!