ಫೋಟೋ ಕ್ಲಿಕ್ಕಿಸಿದ ಮರುಕ್ಷಣವೇ ನಡೆಯಿತು ಘನಘೋರ ದುರಂತ!

First Published Jun 30, 2020, 1:49 PM IST

ಹಲ್ಲಿಗೆ ಭಯ ಪಡುವ ಮಂದಿ ವಿಶ್ವದಲ್ಲಿ ಅನೇಕರಿದ್ದಾರೆ. ಆದರೆ ಇನ್ನು ಕೆಲವರು ಹೆಬ್ಬಾವಿನಂತಹ ಅಪಾಯಕಾರಿ ಹಾವಿನೊಂದಿಗೂ ಕಾದಾಡುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ 35 ವರ್ಷದ ಕ್ರಿಸ್ ಮ್ಯಾಕ್‌ಶೈರೀ ಹೆಸರು ಭಾರೀ ಸದ್ದು ಮಾಡುತ್ತಿದೆ. ಬೇಟೆಯಾಡುವ ಆಸಕ್ತಿ ಇದ್ದ ಅವರು ತನ್ನ ಗೆಳೆಯನೊಂದಿಗೆ ಕಾಡಿಗೆ ತೆರಳಿದ್ದರು. ಆದರೆ ತಾನು ಬೇಟೆಯಾಡುವ ಕಾಡುಕೋಣ ತನ್ನನ್ನೇ ಬೇಟೆಯಾಡಲು ಯತ್ನಿಸುತ್ತದೆ ಎಂದು ಅವರು ಭಾವಿಸಿರಲಿಲ್ಲ. ಕ್ರಿಸ್ 800 ಕೆಜಿ ತೂಕದ ಕಾಡುಕೋಣಕ್ಕೆ ಬಾಣ ಹೊಡೆದಿದ್ದ. ಹೀಗಿರುವಾಗ ಬಾಣದೇಟಿಗೆ ಕೋಣ ಪ್ರಜ್ಞಾಹೀನವಾಗಿ ಬಿದ್ದಿದೆ. ಆದರೆ ಇತ್ತ ಕ್ರಿಸ್ ತಾನು ಬಾಣ ತಾಗಿ ಕೋಣ ಸತ್ತು ಬಿದ್ದಿದೆ ಎಂದು ಭಾವಿಸಿದ್ದಾನೆ. ಹೀಗಾಗಿ ಹತ್ತಿರ ತೆರಳಿ ಆ ದೈತ್ಯ ಕೋಣದ ಬಳಿ ನಿಂತು ಫೋಟೋ ತೆಗೆಯಲಾರಂಭಿಸಿದ. ಆದರೆ ಕ್ರಿಸ್‌ ಮಾಡಿದ ದೊಡ್ಡ ತಪ್ಪೇ ಇದು. ನೋಡ ನೋಡುತ್ತಿದ್ದಂತೆಯೇ ಕ್ರಿಸ್‌ ಮೇಲೆ ಅಟ್ಯಾಕ್ ಮಾಡುವ ಕೋಣ ತನ್ನ ಕೊಂಬಿಉಗಳಿಂದ ಆತನನ್ನು ತಿವಿಯಲಾರಂಭಿಸಿದೆ. ಸದ್ಯ ಈ ಫೋಟೋಗಳು ಭಾರೀ ವೈರಲ್ ಆಗಿವೆ.

35ವರ್ಷದ ಬೇಟೆಗಾರ ಕ್ರಿಸ್ ಇತ್ತೀಚೆಗಷ್ಟೇ ಕೂದಲೆಳೆ ಅಂತರದಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಕ್ರಿಸ್ 800 ಕೆಜಿ ತೂಕದ ಕಾಡು ಕೋಣವನ್ನು ಬೇಟೆಯಾಡಿದ್ದ. ಆದರೆ ಅದು ಸಾಯುವುದಕ್ಕೂ ಮುನ್ನ ತನ್ನ ಚೂಪಾದ ಕೊಂಬಿನಿಂದ ಬೇಟೆಗಾರನಿಗೇ ತಿವಿದಿದೆ.
undefined
ಲಭ್ಯವಾದ ಮಾಹಿತಿ ಅನ್ವಯ ವಾರಾಂತ್ಯದಲ್ಲಿ ಕ್ರಿಸ್ ತನ್ನ ಗೆಳೆಯನೊಂದಿಗೆ ಬೇಟೆಯಾಡಲು ತನ್ನ ಗೆಳೆಯನೊಂದಿಗೆ ಕಾಡಿಗೆ ತೆರಳಿದ್ದ. ಅಲ್ಲಿ ಐವರು ಮಕ್ಕಳ ತಂದೆ ಕ್ರಿಸ್‌ ಕೋಣವನ್ನು ಬೆಟೆಯಾಡಲು ನಿರ್ಧರಿಸಿದ್ದಾನೆ. ಹೀಗಾಗಿ ಇಬ್ಬರೂ ಗೆಳೆಯರು ಸೇರಿ ಅದರ ಮೇಲೆ ದಾಳಿ ನಡೆಸಿದ್ದಾರೆ.
undefined
ಹಲವಾರು ಬಾಣಗಳು ಕೋಣದ ಮೇಲೆ ದಾಳಿ ನಡೆಸಿ, ಅದು ಪ್ರಜ್ಞೆ ತಪ್ಪಿ ಬಿದ್ದಾಗ ಕ್ರಿಸ್ ಹಾಗೂ ಆತನ ಗೆಳೆಯ ಕೋಣ ಸತ್ತು ಬಿದ್ದಿದೆ ಎಂದು ಭಾವಿಸಿದ್ದಾರೆ. ಹೀಗಾಗಿ ಬಿದ್ದ ಕೋಣದ ಬಳಿ ನಿಂತು ಕ್ರಿಸ್ ಫೋಟೋ ತೆಗೆಸಿಕೊಳ್ಳಲಾರಂಭಿಸಿದ್ದಾನೆ.
undefined
ಆದರೆ ಅಷ್ಟರಲ್ಲೇ ಕೋಣ ತಿರುಗಿ ದಾಳಿ ನಡೆಸಿದೆ. ಎದ್ದು ನಿಂತ ಕೋಣ ಕ್ರಿಸ್‌ ಬೆನ್ನತ್ತಿದೆ. ತನ್ನ ಚೂಪಾದ ಕೊಂಬುಗಳಿಂದ ತಿದು ಆತನನ್ನು ಮೂರು ಮೀಟರ್ ದೂರ ಎಸೆದಿದೆ. ಅಲ್ಲದೇ ಅನೇಕ ಬಾರಿ ಕ್ರಿಸ್ ಮೇಲೆ ತನ್ನ ಕೊಂಬುಗಳಿಂದ ದಾಳಿಯನ್ನೂ ನಡೆಸಿದೆ.
undefined
ಘಟನೆ ವಿವರಿಸಿರುವ ಕ್ರಿಸ್ ಗೆಳೆಯ ಕಾಡುಕೋಣ ನಿರಂತರವಾಗಿ ಕ್ರಿಸ್ ಮೇಲೆ ದಾಳಿ ನಡೆಸಿತ್ತು. ಆದರೆ ಕ್ರಿಸ್ ಅದೃಷ್ಟ ವಚೆನ್ನಾಗಿತ್ತು ಹಾಗೂ ಆ ಕೋಣ ಮೊದಲೇ ಗಾಯಗೊಂಡಿತ್ತು. ಹೀಗಾಗಿ ಕೆಲ ಕ್ಷಣಗಳ ಬಳಿಕ ಅದು ಕುಸಿದು ಬಿತ್ತು ಎಂದಿದ್ದಾರೆ.
undefined
ಇದಾದ ಬಳಿಕ ಕ್ರಿಸ್ ಗೆಳೆಯ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಇಲ್ಲಿ ಪರೀಕ್ಷಿಸಿದ ವೈದ್ಯರು ಆತನ ಕಾಲಿನಲ್ಲಿ ಕೋಕ್ ಬಾಟಲ್‌ನಷ್ಟು ದೊಡ್ಡ ರಂಧ್ರವಾಗಿದೆ ಎಂದಿದ್ದಾಋಎ. ಸದ್ಯ ವೈದ್ಯರು ಆತನಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
undefined
ಇದಕ್ಕೂ ಮೊದಲು ಒಂದು ಬಾರಿ ಕ್ರಿಸ್ ಮೊಸಳೆ ಬಾಯಿಯಿಂದ ತಪ್ಪಿಸಿಕೊಂಡಿದ್ದ. ಈತ ಕಳೆದ 20 ವರ್ಷಗಳಿಂದ ಬೇಟೆಯಾಡುತ್ತಿದ್ದಾನೆ. ಆದರೆ ಇಂತಹ ದುರಂತಗಳಾದರೂ ಆತ ಬೇಟೆಯಾಡುವುದನ್ನು ನಿಲ್ಲಿಸಿಲ್ಲ.
undefined
ಸದ್ಯ ಕ್ರಿಸ್‌ ಚಿಕಿತ್ಸೆ ನಡೆಯುತ್ತಿದ್ದು, ಆತ ಅಪಾಯದಿಂದ ಹೊರಗಿದ್ದಾನೆಂದು ವೈದ್ಯರು ತಿಳಿಸಿದ್ದಾರೆ. ಇನ್ನು ಗುಣಮುಖನಾದ ಬಳಿಕ ಮತ್ತೆ ತಾನು ಬೇಟೆಯಾಡು ತೆರಳುತ್ತೇನೆಂದು ಕ್ರಿಸ್ ತಿಳಿಸಿದ್ದಾರೆ.
undefined
click me!