ಅಕ್ಕನ ಕಿಡ್ನಾಪ್ ಪ್ರಕರಣದ ಮರು ತನಿಖೆ ನಡೆಸಲು ಮನವಿ ಮಾಡಿಕೊಂಡಿರುವ ರಾಜಕುಮಾರಿ ಲತೀಫಾ ಇದರಿಂದ ರಾಜಕುಮಾರಿ ಶಂಸಾರನ್ನು ಮುಕ್ತಗೊಳಿಸಬಹುದು ಎಂದಿದ್ದಾರೆ.
ಶಂಸಾರನ್ನು ತನ್ನ ಕೋಟ್ಯಾಧಿಪತಿ ತಂದೆಯ ಆದೇಶದಂತೆ ಕಿಡ್ನಾಪ್ ಮಾಡಲಾಗಿತ್ತು. ಈ ಕಿಡ್ನಾಪ್ ನಡೆದಾಗ ಶಂಸಾರ ವಯಸ್ಸು ಕೇವಲ 18 ಆಗಿತ್ತು. ಇಂದು ಅವರ ವಯಸ್ಸು ಆಗಿದೆ. ದೀರ್ಘ ಕಾಲದಿಂದ ಅವರನ್ನು ಯಾರೂ ನೀಡಲ್ಲ ಎಂದಿದ್ದಾರೆ.
ಮತ್ತೊಂದೆಡೆ ಈ ವಿಚಾರವಾಗಿ ಈ ಸಂಬಂಧ ದುಬೈ ಸರ್ಕಾರವನ್ನು ಸಂಪರ್ಕಿಸಲಾಗಿದ್ದು, ಪೊಲೀಸರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿದ್ದಾರೆ.
2019ರಲ್ಲಿ ಕೋರ್ಟ್ ನ್ಯಾಯಾಧೀಶರೊಬ್ಬರು ಮೊಹಮ್ಮದ್ ಬಿನ್ ರಶೀದ್ ಅಲ್-ಮಖ್ದೂಮ್ ತನ್ನ ಇಬ್ಬರೂ ಮಕ್ಕಳನ್ನು ಒತ್ತಾಯಪೂರ್ವಕವಾಗಿ ಬಂಧಿಸಿ, ಕೈದಿಗಳಂತೆ ಇಟ್ಟಿದ್ದಾರೆ ಎಂದಿದ್ದರು.
2000ರಲ್ಲಿ ರಾಜಕುಮಾರಿ ಶಂಸಾ ಕಿಡ್ನಾಪ್: ರಾಜಕುಮಾರಿ ಶಂಸಾ ತನ್ನ ಕುಟುಂಬದ ಹಿಡಿತದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆದರೆ ಅಷ್ಟರಲ್ಲೇ ಸಿಕ್ಕಿಬಿದ್ದು, ಅವರನ್ನು ಬಂಧಿಸಿಟ್ಟಿದ್ದಾರೆಂದು ವರದಿಗಳು ಉಲ್ಲೇಖಿಸಿವೆ.2000ರ ಆಗಸ್ಟ್‌ನಲ್ಲಿ ಸರ್ರೆಯ ಲಾಂಗ್‌ಕ್ರಾಸ್ ಎಸ್ಟೇಟ್‌ನಿಂದ ತಪ್ಪಿಸಿಕೊಳ್ಳುವಲ್ಲಿ ಶಂಸಾ ಯಶಸ್ವಿಯಾಗಿದ್ದರು. ಈ ಎಸ್ಟೇಟ್ ಅವರ ತಂದೆಯದಾಗಿತ್ತು.
ಇಲ್ಲಿಂದ ಶಂಸಾ ಲಂಡನ್ ತಲಲುಪಿದ್ದರು. ಆದರೆ ಹೆಚ್ಚು ಸಮಯ ಅವರು ಸ್ವತಂತ್ರವಾಗಿರಲು ಸಾಧ್ಯವಾಗಲಿಲ್ಲ. ಲಂಡನ್‌ನ ಕೇಂಬ್ರಿಡ್ಜ್ ರೋಡ್‌ನಿಂದ ಅವರನ್ನು ಕಿಡ್ನಾಪ್ ಮಾಡಿ, ಹೆಲಿಕಾಪ್ಟಟರ್ ಮೂಲಕ ಫ್ರಾನ್ಸ್‌ಗೆ ಕಳುಹಿಸಲಾಗಿತ್ತು.
ಇದಾದ ಬಳಿಕ ಅವರನ್ನು ಫ್ರಾನ್ಸ್‌ನಿಂದ ಪ್ರೈವೇಟ್ ಜೆಟ್ ಮೂಲಕ ದುಬೈಗೆ ಕಳುಹಿಸಲಾಗಿತ್ತು. ಇದಾದ ಬಳಿಕ ಅವರು ನೋಡಲು ಸಿಕ್ಕಿಲ್ಲ.
ಇನ್ನು ತಂಗಿ ಲತೀಫಾ 2019 ರಲ್ಲಿ ಪೊಲೀಸರಿಗೆ ಬರೆದಿರುವ ಪತ್ರದಲ್ಲಿ ತನ್ನ ಅಕ್ಕನನ್ನು ಹುಡುಕಿ ಆಕೆಯನ್ನು ಸ್ವತಂತ್ರಗೊಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ.