ಅಚಾನಕ್ಕಾಗಿ ಬೆಳಕಿಗೆ ಬಂತು ಕೊಳೆತ ಶವಗಳಿಂದ ತುಂಬಿದ ಜಾಗ, ಪ್ರವೇಶ ನಿರ್ಬಂಧ!

First Published | Aug 24, 2020, 5:45 PM IST

ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾದ ಪ್ರದೇಶಗಳು ವಿಶ್ವಾದ್ಯಂತ ಹಲವಾರು ಇವೆ. ಇದರ ಹಿಂದೆ ಅನೇಕ ಕಾರಣಗಳೂ ಇವೆ. ಹೀಗಿರುವಾಗ ಕೇವಲ ಶವ ಹಾಗೂ ಮೂಳೆಗಳಿಂದ ತುಂಬಿದ ಪ್ರದೇಶವೊಂದಿದೆ ಎಂದು ನಿಮಗೆ ಗೊತ್ತಾದರೆ ನೀವು ಅಲ್ಲಿಗೆ ಹೋಗಲು ತಯಾರಿದ್ದೀರಾ? ಸದ್ಯ ಯುಕೆಯಲ್ಲಿ ಶವಗಳಿಂದ ತುಂಬಿರುವ ದ್ವೀಪವೊಂದು ಪತ್ತೆಯಾಗಿದೆ. ಇಲ್ಲಿ ನಿಮಗೆ ಕೇವಲ ಹಲ್ಲು ಹಾಗೂ ಮನುಷ್ಯರ ದೇಹದ ಕೊಳೆತ ಭಾಗಗಳಷ್ಟೇ ಕಾಣಲು ಸಿಗುತ್ತದೆ. ಸದ್ಯ ಇವುಗಳ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ. ನೋಡಲು ಭಯಾನಕವಾಗಿರುವ ಈ ಪ್ರದೇಶವನ್ನು ಡೆಡ್‌ಮ್ಯಾನ್ ಐಲ್ಯಾಂಡ್ ಎಂದು ಕರೆಯಲಾಗುತ್ತದೆ. 

ಇಲ್ಲಿನ ಫೋಟೋಗಳು ಹಾರರ್ ಸಿನಿಮಾದ ದೃಶ್ಯಗಳಂತಿವೆ. 200 ವರ್ಷದ ಹಿಂದೆ ಮೆಡ್‌ವೇ ನದಿಯಲ್ಲಿರುವ ಈ ದ್ವೀಪವನ್ನು ಆಸ್ಟ್ರೇಲಿಯಾದ ಹಡಗುಗಳಲ್ಲಿ ಮೃತಪಟ್ಟ ಅಪರಾಧಿಗಳನ್ನು ಸಮಾಧಿ ಮಾಡಲು ಬಳಸಲಾಗಿತ್ತು.
ಈ ಹಡಗುಗಳಲ್ಲಿ ಅಪರಾಧಿಗಳನ್ನು ತುಂಬಿಸಲಾಗುತ್ತಿತ್ತು. ಹೀಗಿರುವಾಗ ಯಾರಾದರೂ ಅದರಲ್ಲಿ ಮೃತಪಟ್ಟರೆ ಅವರನ್ನು ಈ ದ್ವೀಪಕ್ಕೆ ಎಸೆಯಯಲಾಗುತ್ತಿತ್ತು. ಇಲ್ಲಿ 200 ಕ್ಕೂ ಅಧಿಕ ಶವಗಳು ಸಿಕ್ಕಿವೆ. ಇವುಗಳಲ್ಲಿ ಅನೇಕ ಮೂಳೆ ಹಾಗೂ ಬುರುಡೆಗಳೂ ಇವೆ.
Tap to resize

ಈ ಶವಗಳನ್ನು ಪೆಟ್ಟಗೆಯಲ್ಲಿ ಹಾಕಿ ಎಸೆಯಲಾಗಿತ್ತೆನ್ನಲಾಗಿದೆ ಆದರೆ ಕಡಲ್ಕೊರೆತ ಹಾಗೂ ವರ್ಷಾನುಗಟ್ಟಲೇ ಅಲ್ಲೇ ಇದ್ದ ಪರಿಣಾಮ ಕೊಳೆತು ಮೂಳೆಗಳೆಲ್ಲಾ ಅಲ್ಲಲ್ಲಿ ಬಿದ್ದಿವೆ.
ಕೆಂಟ್‌ಲೀವ್ ವರದಿಯನ್ವಯ ಎತ್ತರದ ಅಲೆಗಳಿದ್ದ ಪರಿಣಾಮ ಈ ಶವಗಳು ಮಣ್ಣಿನೊಳಗೂ ಸೇರಿಲ್ಲ ಎನ್ನಲಾಗಿದೆ. 2017ರಲ್ಲಿ ಈ ದ್ವೀಪ ಪತ್ತೆಯಾಗಿದ್ದು, ಇದನ್ನು ಟಿವಿ ನಿರೂಪಕರೊಬ್ಬರು ಪತ್ತೆ ಹಚ್ಚಿದ್ದರು.
ಹಾರಲ್ ಸಿನಿಮಾ ಸೆಟ್‌ನಂತೆ ಇಲ್ಲಿನ ದೃಶ್ಯ ಬಹಳ ಭಯಾನಕವಾಗಿತ್ತು. ಕಂಡ ಕಂಡಲ್ಲಿ ಕೊಳೆತ ಶವ, ಮೂಳೆಗಳಿದ್ದವು. ಎಲ್ಲೂ ಜೀವವಿದ್ದ ಜೀವಿ ಇರಲಿಲ್ಲ ಎಂಬುವುದು ನಿರೂಪಕರ ಮಾತಾಗಿದೆ.
ಈ ದ್ವೀಪ 1200 ಮೀಟರ್ ಉದ್ದ ಹಾಗೂ 200 ಮೀಟರ್ ಅಗಲವಿದೆ. ಇಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಇಲ್ಲಿನ ದೃಶ್ಯಗಳು ವೈರಲ್ ಆಗಿವೆ.

Latest Videos

click me!