ಪತ್ತೆಯಾಯ್ತು 442 ಕ್ಯಾರಟ್ ಡೈಮಂಡ್.. ಮೌಲ್ಯ 133 ಕೋಟಿ!

First Published Aug 24, 2020, 3:14 PM IST

ಲಂಡನ್/ ಆಫ್ರಿಕಾ(ಆ. 24)  ಮಧ್ಯಪ್ರದೇಶದ ಹೊಲವೊಂದರಲ್ಲಿ ಅರ್ಧಕೋಟಿ ಮೌಲ್ಯದ ವಜ್ರ ಪತ್ತೆಯಾಗಿದ್ದು ದೊಡ್ಡ ಸುದ್ದಿಯಾಗಿತ್ತು. ಆದರೆನ ಈಗ ಇಂಗ್ಲೆಂಡ್ ಕಂಪನಿಯೊಂದಕ್ಕೆ ಆಫ್ರಿಕಾದ ಗಣಿಯೊಂದರಲ್ಲಿ ಬೆಲೆಕಟ್ಟಲಾಗದ ಮೌಲ್ಯದ ವಜ್ರ ಸಿಕ್ಕಿದೆ.

ವಜ್ರ ಎಂದರೆ ಬೆಲೆಕಟ್ಟಲಾಗದ್ದು ಎಂಬ ಮಾತಿದೆ. ಇಂಗ್ಲೆಂಡ್ ಕಂಪನಿಯೊಂದಕ್ಕೆ ಆಫ್ರಿಕಾದ ಗಣಿಯಲ್ಲಿ 442 ಕ್ಯಾರಟ್ ವಜ್ರ ಸಿಕ್ಕಿದೆ.
undefined
ಕಂಪನಿ ಜೆಮ್ ಡೈಮಂಡ್ಸ್ ಲಿಮಿಟೆಡ್ ತನಗೆ 442 ಕ್ಯಾರಟ್ ವಜ್ರ ಸಿಕ್ಕಿದೆ ಎಂದು ಹೇಳಿದೆ. ಆಫ್ರಿಕಾದ ಲೆಸ್ಥೋ ಲೆಸ್ತೆಂಗ್ ಗಣಿಯಲ್ಲಿ ವಜ್ರ ಸಿಕ್ಕಿದೆ. ಅಂದಾಜು 18 ಮಿಲಿಯನ್ ಡಾಲರ್(1,33,42,05,900 ರೂ.) ಮೌಲ್ಯ ಕಟ್ಟಲಾಗಿದೆ.
undefined
ಲೆಸ್ಥೋ ಲೆಸ್ತೆಂಗ್ ಗಣಿ ಪ್ರದೇಶ ಗಾತ್ರ ಮತ್ತು ಕ್ವಾಲಿಟಿ ವಜ್ರಕ್ಕೆ ಹೆಸರುವಾಸಿ. ಎರಡು ವರ್ಷದ ಹಿಂದೆ ಜೆಮ್ ಕಂಪನಿಗೆ ಇದೇ ಭಾಗದಲ್ಲಿ 910 ಕ್ಯಾರಟ್ ವಜ್ರ ಸಿಕ್ಕಿತ್ತು. ಎರಡು ಗಾಲ್ಫ್ ಚೆಂಡು ಸೇರಿಸಿದರೆ ಆಗುವಷ್ಟು ಗಾತ್ರದಲ್ಲಿದ್ದ ವಜ್ರ 40 ಮಿಲಿಯನ್ ಡಾಲರ್ ಗೆ ಸೇಲ್ ಆಗಿತ್ತು.
undefined
ಈ ವರ್ಷದ ಮಟ್ಟಿಗೆ ಸಿಕ್ಕಿರುವ 442 ಕ್ಯಾರಟ್ ವಜ್ಯ ಒಂದು ದಾಖಲೆ. ಕೊರೋನಾ ಕಾರಣಕ್ಕೆ ಆಭರಣ ಉದ್ಯಮ ಸಹ ಸಂಕಷ್ಟ ಅನುಭವಿಸುತ್ತಿದೆ. ಅದೆಲ್ಲದರ ನಡುವೆ ಈ ವಜ್ರ ಸಿಕ್ಕಿದ್ದು ಕಂಪನಿ ಸಂಭ್ರಮದಿಂದ ಹೇಳಿಕೊಂಡಿದೆ.
undefined
click me!