ಪೋರ್ನ್ ನಟಿ ಜೊತೆ ಟ್ರಂಪ್ ಸಂಬಂಧ: 33 ಲಕ್ಷ ಪಾವತಿಸಲು ಅಧ್ಯಕ್ಷನಿಗೆ ಕೋರ್ಟ್ ಆದೇಶ!
First Published | Aug 23, 2020, 3:23 PM ISTಅಮೆರಿಕದಲ್ಲಿ ಒಂದೆಡೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಗೆ ಸಿದ್ಧತೆ ಮಾಡುತ್ತಿದ್ದಾರೆ. ಹೀಗಿರುವಾಗಲೇ ಅವರೊಂದು ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದು, ಪೋರ್ನ್ ನಟಿಯೊಬ್ಬಳಿಗೆ 33 ಲಕ್ಷ ಪಾವತಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಅಮೆರಿಕದ ನ್ಯಾಯಾಲಯವೊಂದು ಇಂತಹುದ್ದೊಂದು ಆದೇಶ ನೀಡಿದೆ. ತನಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಸಂಬಂಧವಿತ್ತು ಎಂದು ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್ ಹೇಳಿಕೊಂಡಿದ್ದಾರೆ. ಆದರೆ ಟ್ರಂಪ್ ಮಾತ್ರ ಈ ಆರೋಪವನ್ನು ನಿರಾಕರಿಸಿದ್ದಾರೆ.