ಆನ್‌ಲೈನ್‌ ಕ್ಲಾಸ್‌ನಲ್ಲಿ ಮಕ್ಕಳಿಗೆ ಶಿಕ್ಷಕಿಯ ಪೋರ್ನೋಗ್ರಫಿ ಪಾಠ: ಪೋಷಕರು ಗರಂ!

First Published Jun 2, 2020, 5:53 PM IST

ಇಡೀ ವಿಶ್ವವೇ ಕೊರೋನಾದಿಂದ ಸ್ತಬ್ಧಗೊಂಡಂತಿದೆ. ಅನೇಕ ದೇಶಗಳಲ್ಲಿ ಲಾಕ್‌ಡೌನ್‌ನಿಂದ ಕಳೆದ ಹಲವು ತಿಂಗಳಿಂದ ಶಾಲೆಎಗಳೂ ಮುಚ್ಚಿವೆ. ಲಾಕ್‌ಡೌನ್‌ ಬಳಿಕ ಅನೇಕ ದೇಶಗಳು ಶಾಲೆ ಪುನರಾರಂಭಿಸಿದರೂ ಮಕ್ಕಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಮುಚ್ಚಲಾಗಿವೆ. ಹೀಗಿರುವಾಗ ಅನೇಕ ಶಾಲೆಗಳು ಆನ್‌ಲೈನ್‌ ಕ್ಲಾಸ್‌ಗೆ ಮೊರೆ ಹೋಗಿವೆ. ಆದರೀಗ ಹೋಂ ವರ್ಕ್‌ನಲ್ಲಿ ಮಕ್ಕಳಿಗೆ ಕೇಳಲಾದ ಪ್ರಶ್ನೆಗಳನ್ನು ನೋಡಿ ಪೋಷಕರನ್ನು ಚಿಂತೆಗೀಡಾಗಿದ್ದಾರೆ. ಪ್ರಾಥಮಿಕ ಶಾಲಾ ಮಕ್ಕಳಿಗೆ ಶಿಕ್ಷಕರು ಪೋರ್ನೋಗ್ರಫಿ‌ ಬಗ್ಗೆ ಪಾಠ ಮಾಡುತ್ತಿರುವುದು ಬಯಲಾಗಿದೆ. ಸದ್ಯ ಹೋಂ ವರ್ಕ್ ಕಾಪಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಇಂಗ್ಲೆಂಡ್‌ನ ಶಾಲೆಯೊಂದರ ಪ್ರಾಥಮಿಕ ಶಾಲಾ ಮಕ್ಕಳಿಗೆ ನೀಡಲಾದ ಹೋಂ ವರ್ಕ್ ಇತ್ತೀಚೆಗೆ ಭಾರೀ ಸದ್ದು ಮಾಡಿದೆ. ಮಕ್ಕಳಲ್ಲಿ ಎಡಲ್ಟ್ ಪ್ರಶ್ನೆಗಳಿಗೆ ಉತ್ತರಿಸುವಂತೆ ಹೇಳಲಾಗಿದೆ.
undefined
ಓರ್ವ ವಿದ್ಯಾರ್ಥಿನಿಯ ತಾಯಿ ಮಗುವಿಗೆ ನೀಡಲಾದ ಹೋಂ ವರ್ಕ್ ನೋಡಿ ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಇದರ ಫೋಟೋ ಕ್ಲಿಕ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅಲ್ಲಿಂದಲೇ ಈ ಫೋಟೋ ಭಾರೀ ವೈರಲ್ ಆಗಲಾರಂಭಿಸಿದೆ.
undefined
25 ವರ್ಷದ ಈ ತಾಯಿ ತನ್ನ ಹೆಸರು ಮಿಸಸ್ ಟೇಲರ್ ಎಂದು ತಿಳಿಸಿದ್ದಾರೆ. ಮಗಳ ಹೋಂ ವರ್ಕ್ ನೋಡಿ ನಾನು ಗಾಬರಿಯಾದೆ. ಅದೃಷ್ಟವಶಾತ್ ಮಗಳು ಹೋಂ ವರ್ಕ್ ಆರಂಭಿಸುವುದಕ್ಕೂ ಮೊದಲೇ ನೋಡಿದೆ. ಒಂದು ವೇಳೆ ಆಕೆ ಇದನ್ನು ಕಂಪ್ಲೀಟ್ ಮಾಡಲು ಇಂಟರ್ನೆಟ್‌ನಲ್ಲಿ ಹುಡುಕಾಟ ಮಾಡಿದ್ದರೆ ಆಕೆಯ ಮನಸ್ಸು ಕೆಡಲಾರಂಭಿಸುತ್ತಿತ್ತು ಎಂದಿದ್ದಾರೆ.
undefined
ಈ ಶಾಲೆಯಲ್ಲಿ 7,8 ಹಾಗೂ 9 ವರ್ಷದ ವಿದ್ಯಾರ್ಥಿಗಳಿಗೆ ಖಾಸಗಿ, ಸಾಮಾಜಿಕ ಹಾಗೂ ಆರೋಗ್ಯ ಶಿಕ್ಷಣದಡಿಯಲ್ಲಿ ಆನ್‌ಲೈನ್‌ ಕ್ಲಾಸ್ ಮುಗಿದ ಬಳಿಕ ಈ ಹೋಂ ವರ್ಕ್ ಮಾಡಲು ಕೊಟ್ಟಿದ್ದಾರೆ. ಇದರಲ್ಲಿ ಮದ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನೂ ಕೇಳಲಾಗಿದೆ.
undefined
ಪೋರ್ನೋಗ್ರಫಿಸಂಬಂಧಿ ಅಸಂಬದ್ಧ ಪ್ರಶ್ನೆಗಳನ್ನು ಶಿಕ್ಷಕರು ಇದರಲ್ಲಿ ಕೇಳಿದ್ದಾರೆ.
undefined
ಇನ್ನು ವಿದ್ಯಾರ್ಥಿನಿಯ ತಾಯಿ ಈ ಫೋಟೋ ಶೇರ್ ಮಾಡಿದ ಬೆನ್ನಲ್ಲೇ ಇತರ ವಿದ್ಯಾರ್ಥಿಗಳ ಹೆತ್ತವರೂ ಫೋಟೋಗಳನ್ನು ಶೇರ್ ಮಾಡಿದ್ದಾರೆ.
undefined
ಇತ್ತೀಚೆಗೆ ಮಕ್ಕಳು ಅನೇಕ ಪ್ರಶ್ನೆಗಳ ಉತ್ತರ ತಿಳಿಯದೆ ಇಂಟರ್ನೆಟ್‌ನಲ್ಲಿ ಹುಡುಕಾಡುತ್ತಾರೆ. ಒಂದು ವೇಳೆ ಈ ಪ್ರಶ್ನೆಗಳ ಉತ್ತರವನ್ನೂ ಹುಡುಕಾಡಿದ್ದರೆ, ಅಲ್ಲಿದ್ದ ಕಂಟೆಂಟ್ ನೋಡಿ ಅವರ ಮನಸ್ಸಿನ ಮೇಲೆ ಅದೆಷ್ಟು ಗಾಢ ಪರಿಣಾಮ ಬೀರುತ್ತಿತ್ತೋ ತಿಳಿಯದು ಎಂಬುವುದು ಹೆತ್ತವರ ಮಾತಾಗಿದೆ.
undefined
ಈ ವಿವಾದ ಜೋರಾದ ಬೆನ್ನಲ್ಲೇ ಶಾಲೆ ಮಕ್ಕಳ ಹೆತ್ತವರ ಬಳಿ ಕ್ಷಮೆ ಯಾಚಿಸಿದೆ. ಹೆತ್ತವರು ಶಾಲೆಯ ಪ್ರಿನ್ಸಿಪಾಲ್ ಹಾಗೂ ಶಿಕ್ಷಕರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಶಾಲೆಯನ್ನು ರಿಲಿಜಿಯನ್ ಶಾಲೆಗಳಲ್ಲಿ ಎಣಿಸಲಾಗುತ್ತದೆ. ಇಲ್ಲಿ ಮಕ್ಕಳಿಗೆ ಧಾರ್ಮಿಕ ಪಾಢಗಳನ್ನೂ ಹೇಳಿಕೊಡಲಾಗುತ್ತದೆ. ಹೀಗಿರುವಾಗ ಇಂತಹ ಶಾಲೆಯಿಂದ ಹೆತ್ತವರು ಈ ರೀತಿಯ ಪ್ರಶ್ನೆಗಳನ್ನು ಊಹಿಸಿರಲಿಲ್ಲ.
undefined
click me!