ಇದೇ ನೋಡಿ ಹಡಗುಗಳ ಸ್ಮಶಾನ, ಪಾಳು ಬಿದ್ದ ನೌಕೆಗಳೊಳಗೆ 'ಖಜಾನೆ'!
First Published | May 20, 2020, 11:02 AM ISTಫ್ರಾನ್ಸ್‌ನ ಬ್ರಿಟನಿಯಲ್ಲಿ ಹಡುಗುಗಳ ಸ್ಮಶಾನವಿದೆ. ಇಲ್ಲಿ ಅನೇಕ ಯುದ್ಧನೌಕೆಗಳನ್ನು ನಾಶವಾಗಲು ಬಿಡಲಾಗಿದೆ. ಎಲ್ಲಕ್ಕಿಂತ ಅಚ್ಚರಿಯ ವಿಚಾರವೆಂದರೆ ಈ ಹಡಗುಗಳ ಒಳಗೆ ಹಲವಾರು ಅಣ್ವಸ್ತ್ರಗಳಿವೆ. ಡಚ್ ಫೋಟೋಗ್ರಾಫರ್ ಬಾಬ್ ಥಿಸೆನ್ ಹಡುಗುಗಳ ಈ ಸ್ಮಶಾನದ ಹಲವಾರು ಫೋಟೋಗಳನ್ನು ಕ್ಲಿಕ್ ಮಾಡಿದ್ದಾರೆ. ಈ ಪೋಟೋಗಳನ್ನು ಅವರು 2006 ರಿಂದ 2011ರೊಳಗೆ ಕ್ಲಿಕ್ಕಿಸಿದ್ದರು. ಈ ಹಡುಗುಗಳ ಬಗ್ಗೆ ತಿಸೇನ್‌ರಲ್ಲಿ ಹಲವಾರು ಸಮಯದಿಂದ ಬಹಳ ಕುತೂಹಲವಿತ್ತು. ಅವರು ಹೊರಗಿನಿಂದ ಮಾತ್ರ ಇವುಗಳನ್ನು ನೋಡಿದ್ದು, ಒಳಗೆ ಹೇಗಿರುತ್ತದೆ ಎಂದು ನೋಡಲಿಚ್ಛಿಸಿದ್ದರು. ಇದಕ್ಕಾಗಿ ಅವರು ಖುಉದ್ದು ಇದರೊಳಗೆ ಪ್ರವೇಶಿಸಿದ್ದು, ಫೋಟೋಗಳನ್ನು ಕ್ಲಿಕ್ ಮಾಡಿ ಜಗತ್ತಿನೆದುರು ಇಟ್ಟಿದ್ದಾರೆ. ಇಲ್ಲಿದೆ ನೋಡಿ ಹಡಗುಗಳ ಒಳಗಿನ ಒಂದು ನೋಟ.