ಈ ಬಡ ರಾಷ್ಟ್ರದಲ್ಲಿ ರಸ್ತೆಯಲ್ಲೇ ಎಸೆಯುತ್ತಿದ್ದಾರೆ ಕೊರೋನಾ ಪೀಡಿತರ ಮೃತದೇಹ!

First Published May 6, 2020, 5:27 PM IST

ವಿಶ್ವದೆಲ್ಲೆಡೆ ಕೊರೋನಾ ಪಡೀತರ ಅಟ್ಟಹಾಸ ಮಿತಿ ಮೀರಿದೆ. ಇಡೀ ವಿಶ್ವವ್ಯಾಪಿ ಆತಂಕ ಹುಟ್ಟಿಸಿರುವ ಈ ವೈರಸ್‌ ಎದುರು, ಅತ್ಯಂತ ಬಲಿಷ್ಟ ರಾಷ್ಟ್ರಗಳೆನಿಸಿಕೊಂಡಿರುವ ಅಮೆರಿಕ, ಯುಕೆ, ಇಟಲಿಯಂತಹ ಸಂಪತ್ಭರಿತ ರಾಷ್ಟ್ರಗಳು ಕೂಡಾ ಮಂಡಿಯೂರಿವೆ. ಹೀಗಿರುವಾಗ ಆರ್ಥಿಕವಾಗಿ ಹಿಂದುಳಿದ, ವೈದ್ಯಕೀಯ ಸೌಲಭ್ಯವಿಲ್ಲದ ರಾಷ್ಟ್ರಗಳ ಪರಿಸ್ಥಿತಿ ಹೇಗಿರಬಹುದು ಎಂದು ಊಹಿಸುವುದೇ ಅಸಾಧ್ಯ. ಇದೀಗ ಬಡತನ ಎದುರಿಸುತ್ತಿರುವ ರಾಷ್ಟ್ರಗಳ ಪೈಕಿ ಗುರುತಿಸಿಕೊಳ್ಳುವ ಲ್ಯಾಟಿನ್ ಅಮೆರಿಕಾದ ಇಕ್ವೆಡಾರ್‌ನಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಇಲ್ಲಿ ಸೋಕಿತರ ಸಂಖ್ಯೆ 32 ಸಾವಿರ ದಾಟಿದ್ದು, ಸಾಔಇನ ಸಂಖ್ಯೆ 16 ಸಾವಿರ ತಲುಪಿದೆ. ಭಾರತದ ರಾಜಧಾನಿ ದೆಹಲಿಗಿಂತಲೂ ಕಡಿಮೆ ಜನಸಂಖ್ಯೆ ಇರುವ ಈ ರಾಷ್ಟ್ರದ ಪರಿಸ್ಥಿತಿ ಕರುಣಾಜನಕವಾಗಿದೆ.

ಇಕ್ವೆಡಾರ್‌ನಲ್ಲಿ ಕೊರೋನಾದಿಂದಾಗಿ ಸಂಭವಿಸಿದ ಸಾವಿನ ಬಳಿಕ ಇಲ್ಲಿನ ಸ್ಮಶಾನಗಳು ತುಂಬಿವೆ. ಎಲ್ಲೆಲ್ಲಿ ಅಲ್ಪ ಸ್ವಲ್ಪ ಸ್ಥಳ ಉಳಿದಿದೆಯೋ ಅಲ್ಲೆಲ್ಲಾ ಸಮಾಧಿ ಮಾಡಲು ಈಗಲೂ ಮೃತರ ಕುಟುಂಬ ಸದಸ್ಯರು ಕ್ಯೂ ನಿಂತಿದ್ದಾರೆ.
undefined
ಈ ಸಾಲಿನಲ್ಲಿ ನಿಂತ ಅನೇಕ ಮಂದಿ ತಾವು ಹತ್ತು ದಿನಗಳಿಂದ ಹೀಗೇ ಕಾಯುತ್ತಿದ್ದೇವೆ ಎಂದೂ ತಿಳಿಸಿದ್ದಾರೆ.
undefined
ಅನೇಕ ಮಂದಿ ತಮ್ಮ ಕುಟುಂಬ ಸದಸ್ಯರು ಕೊರೋನಾದಿಂದಾಗಿ ಮನೆಯಲ್ಲೇ ಮೃತಪಟ್ಟಿದ್ದಾರೆ. ಪೊಲೀಸರಿಗೆ ಈ ಸಂಬಂಧ ಮಾಹಿತಿ ನೀಡಿದರೂ ಮೃತದೇಹ ವಿಲೇವಾರಿ ಮಾಡಲು ಐದಾರು ದಿನಗಳಾದರೂ ಬಂದಿಲ್ಲ. ಹೀಗಾಗಿ ಶವ ಕೊಳೆಯಲಾರಂಭಿಸಿದೆ ಎಂದಿದ್ದಾರೆ.
undefined
ಅನೇಕ ಪ್ರದೇಶಗಳಲ್ಲಿ ಶವ ಕೊಳೆತ ಪರಿಣಾಮ ಕೆಟ್ಟ ವಾಸನೆ ಹಬ್ಬಿದೆ. ಇನ್ನು ಬಹುತೇಕ ಮಂದಿ ಕುಟುಂಬ ಸದಸ್ಯರು ಮೃತಪಟ್ಟಾಗ ಸಮಾಧಿ ಮಾಡಲು ಸ್ಥಳವಿಲ್ಲದೇ ರಸ್ತೆ ಬದಿ ಎಸೆದು ಹೋಗುತ್ತಿದ್ದಾರೆ.
undefined
ಆಸ್ಪತ್ರೆಗಳೂ ತುಂಬಿಕೊಂಡಿದ್ದು, ಸೋಂಕಿತರ ಚಿಕಿತ್ಸೆ ಮಾಡಲು ಇನ್ನು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಹೀಗಾಗಿ ಅನೇಕ ಮಂದಿ ಮನೆಯಲ್ಲೇ ಕೊನೆಯುಸಿರೆಳೆಯುತ್ತಿದ್ದಾರೆ. ಸ್ಮಶಾನ ತುಂಬಿರುವುದರಿಂದ ಅಂತಿಮ ಕ್ರಿಯೆ ಕೂಡಾ ಮಾಡುತ್ತಿಲ್ಲ.
undefined
ಇಕ್ವೆಡಾರ್‌ನಲ್ಲಿ ಶವಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಕಾರಿನಲ್ಲಿ ಬಂದು ರಸ್ತೆ ಬದಿಯಲ್ಲಿ ಬಿಟ್ಟು ಹೋಗುತ್ತಿರುವ ಅನೇಕ ವಿಡಿಯೋಗಳು ಬಹಿರಂಗವಾಗಿವೆ.
undefined
ಇಲ್ಲಿ ಕಟ್ಟಿಗೆ ಮೂಲಕ ಮಾಡುವ ಶವ ಪೆಟ್ಟಿಗೆಗಳೂ ಖಾಲಿಯಾಗಿವೆ. ಅಳಿದುಳಿದ ಕೆಲ ಶವ ಪೆಟ್ಟಿಗೆಗಳ ದರ ಆಗಸಕ್ಕೇರಿದೆ. ಹೀಗಾಗಿ ಬಡ ಕುಟುಂಬಗಳು ಕಾಗದ ಹಾಗೂ ಕಾರ್ಡ್‌ಬೋರ್ಡ್‌ಗಳ ಶವಪೆಟ್ಟಿಗೆ ಮಾಡಲಾರಂಭಿಸಿದ್ದಾರೆ.
undefined
ಒಂದು ಕೋಟಿ 76 ಲಕ್ಷ ಜನಸಂಖ್ಯೆಯುಳ್ಳ ಈ ದೇಶದಲ್ಲಿ ಕೊರೋನಾದಿಂದಾಗಿ ಸಂಭವಿಸುತ್ತಿರುವ ಸಾವುಗಳು ಭೀತಿ ಹುಟ್ಟಿಸಿವೆ.
undefined
ಇಲ್ಲಿನ ಆಸ್ಪತ್ರೆಯೊಂದರಿಂದ ಶಾಕಿಂಗ್ ಫೋಟೋ ಬೆಳಕಿಗೆ ಬಂದಿದ್ದು, ಇಲ್ಲಿನ ಬಾತ್‌ರೂಂನಲ್ಲೇ ಶವಗಳನ್ನು ಮುಚ್ಚಿಡಲಾಗಿದೆ ಎನ್ನಲಾಗಿದೆ. ಯಾಕೆಂದರೆ ಶವಾಗಾರ ತುಂಬಿ ಸ್ಥಳವಿಲ್ಲದಂತಾಗಿದೆ.
undefined
ಇನ್ನು ಯಾವ ಬೆಡ್‌ ಮೇಲೆ ಕೊರೋನಾ ಸೋಂಕಿತರು ಸಾವನ್ನಪ್ಪಿದ್ದರೋ, ಅದೇ ಬೆಡ್‌ ಮೇಲೆ ಇತರ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
undefined
ಸದ್ಯದ ಪರಿಸ್ಥಿತಿಯಲ್ಲಿ ಬೇರೆ ಕಾಯಿಲೆಯಿಂದ ಆಸ್ಪತ್ರೆ ಸೇರಿರುವ ರೋಗಿಗಳನ್ನು ಮನೆಗೆ ಕಳುಹಿಸಲಾಗುತ್ತಿದೆ. ಈ ಮೂಲಕ ಅವರಿಗೆ ಸೋಂಕು ಹರಡದಂತೆ ನಿಗಾ ವಹಿಸಲಾಗುತ್ತಿದೆ.
undefined
click me!